On this day: ದ್ರಾವಿಡ್, ಗಂಗೂಲಿ ಮತ್ತು ಕೊಹ್ಲಿಗೆ ಇಂದು ಬಹಳ ವಿಶೇಷವಾದ ದಿನ; ಏಕೆ ಗೊತ್ತಾ?

|

Updated on: Jun 20, 2024 | 4:08 PM

On this day: ಇಂದು ಅಂದರೆ ಜೂನ್ 20 ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರಿಗೆ ಬಹಳ ವಿಶೇಷವಾದ ದಿನವಾಗಿದೆ. ಅದೆನೆಂದರೆ ಜೂನ್ 20 ರಂದು ಈ ಮೂವರು ಕ್ರಿಕೆಟಿಗರು ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿಯನ್ನು ಧರಿಸಿದ್ದರು.

1 / 11
ಇಂದು ಅಂದರೆ ಜೂನ್ 20 ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರಿಗೆ ಬಹಳ ವಿಶೇಷವಾದ ದಿನವಾಗಿದೆ. ಅದೆನೆಂದರೆ ಜೂನ್ 20 ರಂದು ಈ ಮೂವರು ಕ್ರಿಕೆಟಿಗರು ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿಯನ್ನು ಧರಿಸಿದ್ದರು.

2 / 11
ಈ ಮೂವರೂ ಆಟಗಾರರು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿ ದಾಖಲೆಗಳ ಸರಮಾಲೆ ನಿರ್ಮಿಸಿದ್ದಾರೆ. ಈ ಮೂವರು ಆಟಗಾರರು ಭಾರತ ತಂಡದ ನಾಯಕರೂ ಆಗಿದ್ದರು. ಇದೆಲ್ಲದರ ಜೊತೆಗೆ ಕಾಕತಾಳೀಯವೆಂಬಂತೆ ಈ ಮೂವರು ಜೂನ್ 20ರಂದು ಚೊಚ್ಚಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದರು ಎಂಬುದು ವಿಶೇಷ ಸಂಗತಿಯಾಗಿದೆ.

3 / 11
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 20 ಜೂನ್ 1996 ರಂದು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಗಂಗೂಲಿ ತಮ್ಮ ಚೊಚ್ಚಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಆಡಿದ್ದರು. ಅಲ್ಲದೆ ತಾವು ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು.

4 / 11
ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 16 ಶತಕಗಳನ್ನು ಬಾರಿಸಿದ್ದಾರೆ ವಿಶೇಷವೆಂದರೆ ಗಂಗೂಲಿ ಶತಕ ಬಾರಿಸಿರುವ ಯಾವುದೇ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲನ್ನು ಎದುರಿಸಿಲ್ಲ. ಒಟ್ಟಾರೆ ಗಂಗೂಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 113 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 7212 ರನ್ ಬಾರಿಸಿದ್ದಾರೆ.

5 / 11
ಇನ್ನು ಏಕದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಸೌರವ್ ಗಂಗೂಲಿ 311 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 22 ಶತಕ ಮತ್ತು 72 ಅರ್ಧ ಶತಕಗಳೊಂದಿಗೆ ಒಟ್ಟು 11363 ರನ್ ಕಲೆಹಾಕಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರ ಅತ್ಯುತ್ತಮ ಸ್ಕೋರ್ 183 ರನ್.

6 / 11
ಭಾರತ ತಂಡದ ಗೋಡೆ ಎಂದೇ ಖ್ಯಾತರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಸ್ತುತ ಟೀಂ ಇಂಡಿಯಾದ ಕೋಚ್ ಆಗಿದ್ದಾರೆ. ರಾಹುಲ್ ದ್ರಾವಿಡ್ ಕೂಡ ಸೌರವ್ ಗಂಗೂಲಿ ಅವರೊಂದಿಗೆ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

7 / 11
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಪರ ಒಟ್ಟು 164 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 36 ಶತಕ ಮತ್ತು 63 ಅರ್ಧ ಶತಕಗಳೊಂದಿಗೆ ಒಟ್ಟು 13288 ರನ್ ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 270 ರನ್ ಆಗಿದೆ.

8 / 11
ಹಾಗೆಯೇ ರಾಹುಲ್ ದ್ರಾವಿಡ್ ಅವರ ಏಕದಿನ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಒಟ್ಟು 344 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 12 ಶತಕ ಮತ್ತು 83 ಅರ್ಧ ಶತಕಗಳೊಂದಿಗೆ ಒಟ್ಟು 10889 ರನ್ ಬಾರಿಸಿದ್ದಾರೆ.

9 / 11
ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ವಿರಾಟ್ ಕೊಹ್ಲಿ, 20 ಜೂನ್ 2011 ರಂದು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದರು. ವಿರಾಟ್ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 29 ಶತಕ ಮತ್ತು 30 ಅರ್ಧ ಶತಕಗಳೊಂದಿಗೆ ಒಟ್ಟು 8848 ರನ್ ಬಾರಿಸಿದ್ದಾರೆ.

10 / 11
ವಿರಾಟ್ ಅವರ ಏಕದಿನ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಒಟ್ಟು 292 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 50 ಶತಕ ಮತ್ತು 72 ಅರ್ಧ ಶತಕಗಳೊಂದಿಗೆ 13848 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ವಿರಾಟ್ ಅವರ ಅತ್ಯುತ್ತಮ ಸ್ಕೋರ್ 254 ಆಗಿದ್ದರೆ, ಏಕದಿನದಲ್ಲಿ 183 ರನ್ ಆಗಿದೆ.

11 / 11
ಟೆಸ್ಟ್ ಕ್ರಿಕೆಟ್‌ನಲ್ಲಿ 7 ದ್ವಿಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ವಿಶೇಷವೆಂದರೆ ಇಂದು ಅಂದರೆ, ಜೂನ್ 20 ರಂದು ಟೆಸ್ಟ್​ಗೆ ಪದಾರ್ಪಣೆ ಮಾಡಿದ ಮೂವರೂ ಆಟಗಾರರು 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.