ಈ ಪಂದ್ಯದಲ್ಲಿ ಒಟ್ಟು 4 ಶತಕಗಳು ದಾಖಲಾಗಿದ್ದು ವಿಶ್ವ ದಾಖಲೆಯಾಗಿದೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ನಾಲ್ಕು ಶತಕಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ವೂಲ್‌ವರ್ತ್ 135 ರನ್‌ಗಳ ಇನಿಂಗ್ಸ್ ಆಡಿದರೆ, ಮರಿಜಾನೆ ಕ್ಯಾಪ್ ಕೂಡ 114 ರನ್ ಬಾರಿಸಿದರು. ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಹಾಗೂ ಸ್ಮೃತಿ ಮಂಧಾನ ಶತಕ ಬಾರಿಸಿದರು.