AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

INDW vs SAW: ಒಂದು ಪಂದ್ಯದಲ್ಲಿ 646 ರನ್, 4 ಶತಕ..! ವಿಶ್ವ ದಾಖಲೆ ಸೃಷ್ಟಿ

India Women vs South Africa Women: ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 325 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 321 ರನ್ ಪೇರಿಸಿತು. ಅಂದರೆ ಈ ಪಂದ್ಯದಲ್ಲಿ ಎರಡು ತಂಡಗಳಿಂದ ಬರೋಬ್ಬರಿ 646 ರನ್ ದಾಖಲಾದವು. ಇದಲ್ಲದೆ ಪಂದ್ಯದಲ್ಲಿ ಒಟ್ಟು 4 ಶತಕಗಳೂ ಸಿಡಿದವು.

ಪೃಥ್ವಿಶಂಕರ
|

Updated on: Jun 19, 2024 | 10:26 PM

Share
ಬೆಂಗಳೂರಿನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು 4 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ. ಮೊದಲ ಏಕದಿನ ಪಂದ್ಯವನ್ನು 143 ರನ್‌ಗಳಿಂದ ಗೆದ್ದುಕೊಂಡಿದ್ದ ಹರ್ಮನ್ ಪಡೆಗೆ ಎರಡನೇ ಪಂದ್ಯದಲ್ಲಿ ಪ್ರಯಾಸದ ಗೆಲುವು ಧಕ್ಕಿತು.

1 / 7
ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರ್ತಿಯರಿಂದ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 325 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 321 ರನ್ ಪೇರಿಸಿತು. ಅಂದರೆ ಈ ಪಂದ್ಯದಲ್ಲಿ ಎರಡು ತಂಡಗಳಿಂದ ಬರೋಬ್ಬರಿ 646 ರನ್ ದಾಖಲಾದವು. ಇದಲ್ಲದೆ ಪಂದ್ಯದಲ್ಲಿ ಒಟ್ಟು 4 ಶತಕಗಳೂ ಸಿಡಿದವು.

2 / 7
ಈ ಪಂದ್ಯದಲ್ಲಿ ಒಟ್ಟು 4 ಶತಕಗಳು ದಾಖಲಾಗಿದ್ದು ವಿಶ್ವ ದಾಖಲೆಯಾಗಿದೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ನಾಲ್ಕು ಶತಕಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ವೂಲ್‌ವರ್ತ್ 135 ರನ್‌ಗಳ ಇನಿಂಗ್ಸ್ ಆಡಿದರೆ, ಮರಿಜಾನೆ ಕ್ಯಾಪ್ ಕೂಡ 114 ರನ್ ಬಾರಿಸಿದರು. ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಹಾಗೂ ಸ್ಮೃತಿ ಮಂಧಾನ ಶತಕ ಬಾರಿಸಿದರು.

3 / 7
ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸತತ ಎರಡನೇ ಶತಕ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 120 ಎಸೆತಗಳನ್ನು ಎದುರಿಸಿದ ಸ್ಮೃತಿ 18 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 136 ರನ್ ಚಚ್ಚಿದರು.

4 / 7
ಮಂಧಾನ ಹೊರತಾಗಿ ನಾಯಕಿ ಹರ್ಮನ್‌ಪ್ರೀತ್ ಕೂಡ ತಮ್ಮ ಇನ್ನಿಂಗ್ಸ್​ನಲ್ಲಿ 88 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಬಾರಿಸಿದರು. ಇದಲ್ಲದೆ ಈ ಇಬ್ಬರ ನಡುವೆ 136 ಎಸೆತಗಳಲ್ಲಿ 171 ರನ್‌ಗಳ ದಾಖಲೆಯ ಜೊತೆಯಾಟ ಕೂಡ ಕಂಡುಬಂತು.

5 / 7
ಭಾರತ ನೀಡಿದ 326 ರನ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ ಅಜೇಯ 135 ರನ್ ಬಾರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 135 ಎಸೆತಗಳನ್ನು ಎದುರಿಸಿದ 135 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು.

6 / 7
ಇವರೊಂದಿಗೆ ದಾಖಲೆಯ ಜೊತೆಯಾಟ ನಡೆಸಿದ ಮರಿಜ್ನೆ ಕ್ಯಾಪ್ ಕೂಡ 94 ಎಸೆತಗಳಲ್ಲಿ 114 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು. ಕ್ಯಾಪ್ ಔಟಾದ ಬಳಿಕ ದಕ್ಷಿಣ ಆಫ್ರಿಕಾ ಸೋಲಿನ ಸುಳಿಗೆ ಸಿಲುಕಿತು.

7 / 7
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ

ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು

ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ

ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ

‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು

17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ

ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ