PAK vs ENG: 35ನೇ ಟೆಸ್ಟ್ ಶತಕ ಸಿಡಿಸಿ ನಾಲ್ವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದ ಜೋ ರೂಟ್..!

|

Updated on: Oct 09, 2024 | 3:35 PM

Joe Root Breaks Brian Lara Record: 35ನೇ ಟೆಸ್ಟ್ ಶತಕದೊಂದಿಗೆ ಜೋ ರೂಟ್ ಇದೀಗ ವೆಸ್ಟ್ ಇಂಡೀಸ್​ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಸೇರಿದಂತೆ ನಾಲ್ವರು ಕ್ರಿಕೆಟ್ ದಿಗ್ಗಜರ ಅಧಿಕ ಟೆಸ್ಟ್ ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ರೂಟ್, ಲಾರಾ ಹೊರತುಪಡಿಸಿ ಸುನಿಲ್ ಗವಾಸ್ಕರ್, ಯೂನಿಸ್ ಖಾನ್ ಮತ್ತು ಮಾಹೇಲಾ ಜಯವರ್ಧನೆಯನ್ನು ಸಹ ಹಿಂದಿಕ್ಕಿದ್ದಾರೆ. ಈ ನಾಲ್ವರು ಮಾಜಿ ಕ್ರಿಕೆಟಿಗರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ತಲಾ 34 ಶತಕಗಳನ್ನು ಸಿಡಿಸಿದ್ದರು.

1 / 6
ಆತಿಥೇಯ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ತಂಡದ ಮಾಜಿ ನಾಯಕ ಜೋ ರೂಟ್ ದಾಖಲೆಯ ಶತಕ ಸಿಡಿಸಿದ್ದಾರೆ. ಮೂರನೇ ದಿನದದಾಟದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ರೂಟ್ 167 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 35ನೇ ಶತಕವನ್ನು ಪೂರೈಸಿದರು.

2 / 6
ಈ ದಾಖಲೆಯ ಶತಕದೊಂದಿಗೆ ಜೋ ರೂಟ್ ಇದೀಗ ವೆಸ್ಟ್ ಇಂಡೀಸ್​ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಸೇರಿದಂತೆ ನಾಲ್ವರು ಕ್ರಿಕೆಟ್ ದಿಗ್ಗಜರ ಅಧಿಕ ಟೆಸ್ಟ್ ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ರೂಟ್, ಲಾರಾ ಹೊರತುಪಡಿಸಿ ಸುನಿಲ್ ಗವಾಸ್ಕರ್, ಯೂನಿಸ್ ಖಾನ್ ಮತ್ತು ಮಾಹೇಲಾ ಜಯವರ್ಧನೆಯನ್ನು ಸಹ ಹಿಂದಿಕ್ಕಿದ್ದಾರೆ. ಈ ನಾಲ್ವರು ಮಾಜಿ ಕ್ರಿಕೆಟಿಗರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ತಲಾ 34 ಶತಕಗಳನ್ನು ಸಿಡಿಸಿದ್ದರು.

3 / 6
ಪ್ರಸ್ತುತ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ರಾಹುಲ್ ದ್ರಾವಿಡ್ ಅವರನ್ನು ಸರಿಗಟ್ಟಲು ಕೇವಲ ಒಂದು ಶತಕದ ಅಂತರದಲ್ಲಿದ್ದಾರೆ. ಹಾಗೆಯೇ ಇದು 2024 ರಲ್ಲಿ ಜೋ ರೂಟ್ ಸಿಡಿಸಿದ 5 ನೇ ಶತಕವಾಗಿದ್ದು, ಈ ಮೂಲಕ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

4 / 6
ಇದರ ಜೊತೆಗೆ ಮುಲ್ತಾನ್‌ನಲ್ಲಿ 73 ರನ್ ಗಳಿಸಿದ ಕೂಡಲೇ ರೂಟ್, ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅಲೆಸ್ಟರ್ ಕುಕ್ ಹೆಸರಿನಲ್ಲಿತ್ತು. ಕುಕ್ ತಮ್ಮ ವೃತ್ತಿಜೀವನದ 161 ಪಂದ್ಯಗಳಲ್ಲಿ 45 ರ ಸರಾಸರಿಯಲ್ಲಿ 12472 ರನ್ ಗಳಿಸಿದ್ದರು.

5 / 6
ಹಾಗೆಯೇ ಈ ಶತಕದ ಇನ್ನಿಂಗ್ಸ್ ಮೂಲಕ ರೂಟ್, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಇತಿಹಾಸದಲ್ಲಿ 5000 ರನ್ ಪೂರೈಸಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೈಕಲ್‌ನಲ್ಲಿ ಒಟ್ಟು 59 ಪಂದ್ಯಗಳನ್ನು ಆಡಿರುವ ರೂಟ್ 5000 ರನ್​ಗಳ ಗಡಿ ದಾಟಿದ್ದಾರೆ.

6 / 6
ಇದಲ್ಲದೆ ರೂಟ್, ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇದೀಗ ಭಾರತದ ಗೋಡೆ ರಾಹುಲ್ ದ್ರಾವಿಡ್ ಅವರನ್ನು ಸರಿಗಟ್ಟಿದ್ದಾರೆ. ದ್ರಾವಿಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 99 ಬಾರಿ 50 ಕ್ಕೂ ಅಧಿಕ ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ರೂಟ್ ಕೂಡ ಈ ಸಾಧನೆಯನ್ನು ಮಾಡಿದ್ದಾರೆ. ಇನ್ನು119 ಬಾರಿ 50 ಕ್ಕೂ ಅಧಿಕ ರನ್​ಗಳ ಇನ್ನಿಂಗ್ಸ್ ಕಟ್ಟಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

Published On - 3:23 pm, Wed, 9 October 24