Saud Shakeel: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಸೌದ್ ಶಕೀಲ್

| Updated By: ಝಾಹಿರ್ ಯೂಸುಫ್

Updated on: Jul 27, 2023 | 6:14 PM

Saud Shakeel World Record: ಕೇವಲ 13 ಇನಿಂಗ್ಸ್​ಗಳ ಮೂಲಕ 875 ರನ್​ ಬಾರಿಸಿರುವ ಸೌದ್ ಶಕೀಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 1000 ಸಾವಿರ ರನ್ ಕಲೆಹಾಕಲಿದ್ದಾರಾ ಕಾದು ನೋಡಬೇಕಿದೆ.

1 / 5
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಪಾಕಿಸ್ತಾನ್ ತಂಡ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ 4 ವಿಕೆಟ್​ಗಳ ಜಯ ಸಾಧಿಸಿದ್ದ ಪಾಕಿಸ್ತಾನ್, 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 222 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

2 / 5
 ವಿಶೇಷ ಎಂದರೆ ಈ ಎರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೌದ್ ಶಕೀಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಶಕೀಲ್, 2ನೇ ಪಂದ್ಯದಲ್ಲಿ 57 ರನ್ ಬಾರಿಸಿದ್ದರು.

3 / 5
ಇದರೊಂದಿಗೆ 146 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್​ನಲ್ಲಿ  ಮೊದಲ 7 ಪಂದ್ಯಗಳಲ್ಲಿ ಅರ್ಧಶತಕಗಿಂತ ಹೆಚ್ಚಿನ ರನ್ ಕಲೆಹಾಕಿದ ವಿಶ್ವ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ಸೌದ್ ಶಕೀಲ್ ಪಾಲಾಗಿದೆ.

4 / 5
7 ಟೆಸ್ಟ್ ಪಂದ್ಯಗಳಲ್ಲಿ ಇದುವರೆಗೆ 13 ಇನಿಂಗ್ಸ್ ಆಡಿರುವ ಸೌದ್ ಶಕೀಲ್ ಕ್ರಮವಾಗಿ 37, 76, 63, 94, 23, 53, 22, 55*, 125*, 32, 208*, 30, ಮತ್ತು 57 ರನ್​ಗಳಿಸಿದ್ದಾರೆ. ಈ 13 ಇನಿಂಗ್ಸ್​ಗಳಲ್ಲಿ 6 ಅರ್ಧಶತಕಗಳಿದ್ದರೆ, 1 ದ್ವಿಶತಕ ಹಾಗೂ 1 ಶತಕಗಳು ಸೇರಿವೆ.

5 / 5
ಸದ್ಯ ಕೇವಲ 13 ಇನಿಂಗ್ಸ್​ಗಳ ಮೂಲಕ 875 ರನ್​ ಬಾರಿಸಿರುವ ಸೌದ್ ಶಕೀಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 1000 ಸಾವಿರ ರನ್ ಕಲೆಹಾಕಿದ ದಾಖಲೆ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.