PAK vs NZ: ಕಿವೀಸ್​ಗೆ ಮತ್ತೊಮ್ಮೆ ಕೈತಪ್ಪಿದ ಚಾಂಪಿಯನ್ ಪಟ್ಟ; ತನ್ನ ತಪ್ಪುಗಳಿಂದಲೇ ಸೋಲುಂಡ ನ್ಯೂಜಿಲೆಂಡ್..!

| Updated By: ಪೃಥ್ವಿಶಂಕರ

Updated on: Nov 09, 2022 | 5:47 PM

T20 World Cup 2022: ಕಳಪೆ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣ. ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಬಾಬರ್ ಅಜಮ್ ನೀಡಿದ ಕ್ಯಾಚ್ ಅನ್ನು ಡೆವೊನ್ ಕಾನ್ವೇ ಕೈಬಿಟ್ಟರು.

1 / 5
ಟಿ20 ವಿಶ್ವಕಪ್-2022ರ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ತಂಡ ನ್ಯೂಜಿಲೆಂಡ್, ಪಾಕಿಸ್ತಾನದ ಎದುರು ಮತ್ತೊಮ್ಮೆ ಮುಗ್ಗರಿಸುವ ಮೂಲಕ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಕೇನ್ ಪಡೆಯು ಚಾಂಪಿಯನ್ ಕನಸು ಈ ಬಾರಿಯೂ ಈಡೇರಲಿಲ್ಲ. ಪಾಕ್ ಎದುರಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಾನು ಮಾಡಿದ ಕೆಲವು ತಪ್ಪುಗಳಿಂದಲೇ ಸೋಲನುಭವಿಸುವಂತ್ತಾಯಿತು.

2 / 5
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಫಿನ್ ಅಲೆನ್ ಬೇಗನೆ ಔಟಾದರು. ಡೆವೊನ್ ಕಾನ್ವೇ ಕೂಡ ವೇಗವಾಗಿ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಆರು ಓವರ್‌ಗಳಲ್ಲಿ ಈ ತಂಡ 38 ರನ್ ಗಳಿಸಲಷ್ಟೇ ಶಕ್ತವಾಯಿತು.

3 / 5
ಬೇಗನೆ ಬ್ಯಾಟಿಂಗ್​ಗೆ ಇಳಿದ ನಾಯಕ ಕೇನ್ ವಿಲಿಯಮ್ಸನ್, 17 ನೇ ಓವರ್​ವರೆಗೂ ಮೈದಾನದಲ್ಲಿಯೇ ಇದ್ದರು. ಆದರೆ ಟಿ 20 ನಲ್ಲಿ ಆಡಬೇಕಾದ ರೀತಿಯ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 42 ಎಸೆತಗಳನ್ನು ಎದುರಿಸಿದ ಅವರು ಕೇವಲ 46 ರನ್ ಮಾತ್ರ ಗಳಿಸಿದರು.

4 / 5
ಕಳಪೆ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣ. ಮೊದಲ ಓವರ್‌ನಲ್ಲೇ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಬಾಬರ್ ಅಜಮ್ ನೀಡಿದ ಕ್ಯಾಚ್ ಅನ್ನು ಡೆವೊನ್ ಕಾನ್ವೇ ಕೈಬಿಟ್ಟರು. ಇದಲ್ಲದೇ ಬಾಬರ್ ಅವರನ್ನು ರನೌಟ್ ಮಾಡುವ ಅವಕಾಶವನ್ನೂ ಇಶ್ ಸೋಧಿ ಕಳೆದುಕೊಂಡರು. 16ನೇ ಓವರ್‌ನ ಮೊದಲ ಎಸೆತದಲ್ಲಿ ಟಿಮ್ ಸೌಥಿ ಎಸೆತದಲ್ಲಿ ಮೊಹಮ್ಮದ್ ಹ್ಯಾರಿಸ್ ನೀಡಿದ ಕ್ಯಾಚ್ ಅನ್ನು ಮಿಚೆಲ್ ಸ್ಯಾಂಟ್ನರ್ ಕೈಬಿಟ್ಟರು.

5 / 5
ನ್ಯೂಜಿಲೆಂಡ್‌ನ ಬೌಲರ್‌ಗಳು ಈ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರೂ ಈ ಪಂದ್ಯದಲ್ಲಿ ಅವರು ಯಾವುದೇ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ. ವಿಕೆಟ್ ಕಬಳಿಸಲು ಆಗಲಿಲ್ಲ, ರನ್ ನಿಲ್ಲಿಸಲೂ ಆಗಲಿಲ್ಲ. ಈ ಪಂದ್ಯದಲ್ಲಿ ಕಿವೀಸ್ ತಂಡದ ಬೌಲರ್‌ಗಳು ಲಯದಲ್ಲಿ ಕಾಣಿಸಿಕೊಳ್ಳದ ಪರಿಣಾಮ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ಮೇಲುಗೈ ಸಾಧಿಸಿತು.

Published On - 5:47 pm, Wed, 9 November 22