ಪಾಕಿಸ್ತಾನ್ ತಂಡದ ಅತ್ಯಂತ ಹೀನಾಯ ದಾಖಲೆ: 900 ಎಸೆತಗಳಲ್ಲಿ ಕೇವಲ 1 ಮೇಡನ್ ಓವರ್..!
Pakistan vs England: ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಇನಿಂಗ್ಸ್ ಹಾಗೂ 47 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪ್ರಥಮ ಇನಿಂಗ್ಸ್ನಲ್ಲಿ 556 ರನ್ ಕಲೆಹಾಕಿದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 823 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 220 ರನ್ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ್ ತಂಡ ಹೀನಾಯ ಸೋಲನುಭವಿಸಿತು.
1 / 5
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಓವರ್ಗಳನ್ನು ಎಸೆದು ಅತೀ ಕಡಿಮೆ ಮೇಡನ್ ಓವರ್ ಮಾಡಿದ ಅತ್ಯಂತ ಕಳಪೆ ದಾಖಲೆಯೊಂದು ಪಾಕಿಸ್ತಾನ್ ತಂಡದ ಪಾಲಾಗಿದೆ. ಅದು ಸಹ ತವರು ಮೈದಾನದಲ್ಲಿ ಎಂಬುದು ವಿಶೇಷ. ಮುಲ್ತಾನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ಬೌಲರ್ಗಳು ಬರೋಬ್ಬರಿ 150 ಓವರ್ಗಳನ್ನು ಎಸೆದಿದ್ದರು.
2 / 5
ಈ 150 ಓವರ್ಗಳಲ್ಲಿ ನೀಡಿರುವುದು ಬರೋಬ್ಬರಿ 823 ರನ್ಗಳು. ಅಂದರೆ 900 ಎಸೆತಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು 823 ರನ್ ಕಲೆಹಾಕಿ ಅಬ್ಬರಿಸಿದ್ದರು. ವಿಶೇಷ ಎಂದರೆ ಈ 150 ಓವರ್ಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಕೇವಲ 1 ಓವರ್ನಲ್ಲಿ ಮಾತ್ರ ರನ್ಗಳಿಸಲು ಸಾಧ್ಯವಾಗಿರಲಿಲ್ಲ.
3 / 5
ಅಂದರೆ 150 ಓವರ್ಗಳಲ್ಲಿ ಪಾಕಿಸ್ತಾನ್ ಪರ ಮೇಡನ್ ಓವರ್ ಮಾಡಿದ್ದು ಶಾಹೀನ್ ಶಾ ಅಫ್ರಿದಿ ಮಾತ್ರ. ಇನ್ನುಳಿದ 149 ಓವರ್ಗಳಲ್ಲೂ ಪಾಕ್ ಬೌಲರ್ಗಳು ರನ್ ನೀಡಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ ಅತೀ ಕಡಿಮೆ ಮೇಡನ್ ಓವರ್ ಎಸೆದ ಅತ್ಯಂತ ಕೆಟ್ಟ ದಾಖಲೆಯೊಂದು ಪಾಕಿಸ್ತಾನ್ ಪಾಲಾಯಿತು.
4 / 5
ಇದಕ್ಕೂ ಮುನ್ನ ಇಂತಹದೊಂದು ಕಳಪೆ ದಾಖಲೆ ಮೂಡಿಬಂದಿದ್ದು 1939 ರಲ್ಲಿ. ಡರ್ಬನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬೌಲರ್ಗಳು 88.5 ಓವರ್ಗಳಲ್ಲಿ ಒಂದೇ ಒಂದು ಮೇಡನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಅಂದು ಪ್ರತಿ ಓವರ್ಗೆ 8 ಎಸೆತಗಳ ಲೆಕ್ಕವಿತ್ತು. ಹೀಗಾಗಿ ಇದನ್ನು ಪ್ರಸ್ತುತ ದಾಖಲೆಗಳ ಪಟ್ಟಿಗೆ ಸೇರಿಸುವಂತಿಲ್ಲ.
5 / 5
ಹೀಗಾಗಿಯೇ ಆಧುನಿಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಹೀನಾಯ ದಾಖಲೆ ಪಾಕಿಸ್ತಾನ್ ತಂಡದ ಪಾಲಾಗಿದೆ. ಅಷ್ಟೇ ಅಲ್ಲದೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 500+ ರನ್ ಕಲೆಹಾಕಿ ಅತ್ಯಧಿಕ ಬಾರಿ ಮ್ಯಾಚ್ಗಳನ್ನು ಸೋತ ಕಳಪೆ ದಾಖಲೆಯೊಂದು ಸಹ ಪಾಕ್ ತಂಡ ಹೆಸರಿಗೆ ಸೇರ್ಪಡೆಯಾಗಿದೆ.