ಮತ್ತೊಬ್ಬ ವಿದೇಶಿ ಕೋಚ್ಗೆ ತಂಡದಿಂದ ಗೇಟ್ಪಾಸ್ ನೀಡಿದ ಪಾಕಿಸ್ತಾನ
Pakistan Cricket Coach Sacked: ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರ ಟಿಮ್ ನೀಲ್ಸನ್ ಅವರನ್ನು ಅವರ ಹುದ್ದೆಯಿಂದ ವಜಾ ಮಾಡಲಾಗಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಕೆಲವೇ ವಾರಗಳ ಮೊದಲು ನಡೆದಿದೆ. ಪಿಸಿಬಿ ಟಿಮ್ ನೀಲ್ಸನ್ ಅವರ ಒಪ್ಪಂದವನ್ನು ನವೀಕರಿಸಲು ನಿರ್ಧರಿಸಿಲ್ಲ ಎಂದು ವರದಿಯಾಗಿದೆ. ಈ ನಿರ್ಧಾರದಿಂದ ಮುಖ್ಯ ತರಬೇತುದಾರ ಜೇಸನ್ ಗಿಲ್ಲೆಸ್ಪಿಯವರ ಭವಿಷ್ಯದ ಬಗ್ಗೆಯೂ ಅನಿಶ್ಚಿತತೆ ಮೂಡಿದೆ.
1 / 5
ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಹರಿಣಗಳ ನಾಡಲ್ಲಿ ಮೂರು ಮಾದರಿಯ ಸರಣಿಗಳನ್ನು ಆಡಲಿದೆ. ಮೊದಲಿಗೆ ಟಿ20 ಸರಣಿ ನಡೆಯುತ್ತಿದ್ದು, ಆ ಬಳಿಕ ಏಕದಿನ ಸರಣಿ, ಕೊನೆಗೆ ಟೆಸ್ಟ್ ಸರಣಿ ನಡೆಯಲ್ಲಿದೆ. ಆದರೆ ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಕೇವಲ 2 ವಾರಗಳ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡಿದೆ.
2 / 5
ಆ ಪ್ರಕಾರ ತಂಡದ ಸಹಾಯಕ ಕೋಚ್ ಟಿಮ್ ನೀಲ್ಸನ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿದೆ. ಕಳೆದ ಆಗಸ್ಟ್‌ನಲ್ಲಿ ಟೆಸ್ಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದ ನೀಲ್ಸನ್, ಪಾಕಿಸ್ತಾನದ ಟೆಸ್ಟ್ ತರಬೇತುದಾರ ಜೇಸನ್ ಗಿಲ್ಲೆಸ್ಪಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಆದರೀಗ ಅವರನ್ನು ಈ ಹುದ್ದೆಯಿಂದ ವಜಾಗೊಳಿಸಲಾಗಿದೆ.
3 / 5
ESPNcricinfo ವರದಿಯ ಪ್ರಕಾರ, ಟಿಮ್ ನೀಲ್ಸನ್ ಅವರ ಒಪ್ಪಂದವನ್ನು ನವೀಕರಿಸುವ ಇರಾದೆಯಲ್ಲಿ ಪಿಸಿಬಿ ಇಲ್ಲ. ಹೀಗಾಗಿ ಅವರನ್ನು ಈ ಹುದ್ದೆಯಿಂಧ ತೆಗೆದುಹಾಕಿದೆ. ವಾಸ್ತವವಾಗಿ ನೀಲ್ಸನ್ ಅವರ ಒಪ್ಪಂದವು ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಕೊನೆಗೊಂಡಿತ್ತು. ಆದರೆ ಮುಂಬರುವ ದಕ್ಷಿಣ ಆಫ್ರಿಕಾದೊಂದಿಗಿನ ಟೆಸ್ಟ್ ಸರಣಿ ಮತ್ತು ನಂತರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ದೃಷ್ಟಿಯಿಂದ, ಅವರನ್ನು ಈ ಹುದ್ದೆಯಲ್ಲೇ ಉಳಿಸಿಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಸಂಭವಿಸಲಿಲ್ಲ.
4 / 5
ಇದಲ್ಲದೆ ತಂಡದೊಂದಿಗೆ ತಾನು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇನೆ ಮತ್ತು ಒಪ್ಪಂದದ ವಿಸ್ತರಣೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ನೀಲ್ಸನ್ ಹೇಳಿಕೊಂಡಿದ್ದಾರೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ನೀಲ್ಸನ್ ಅವರ ಸೇವೆ ಇನ್ನು ಮುಂದೆ ತಂಡಕ್ಕೆ ಅಗತ್ಯವಿಲ್ಲ ಎಂದು ಮಂಡಳಿಯು ಸ್ಪಷ್ಟವಾಗಿ ಹೇಳಿದೆ. ನೀಲ್ಸನ್ ಅವರನ್ನು ತೆಗೆದುಹಾಕಿದ ನಂತರ, ಮುಖ್ಯ ತರಬೇತುದಾರ ಗಿಲ್ಲೆಸ್ಪಿ ಭವಿಷ್ಯದ ಬಗ್ಗೆಯೂ ಈಗ ಪ್ರಶ್ನೆ ಮೂಡಿದೆ.
5 / 5
ಇದಲ್ಲದೆ ನೀಲ್ಸನ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಪಿಸಿಬಿ ಗಿಲ್ಲೆಸ್ಪಿಯಿಂದ ಯಾವುದೇ ಸಲಹೆಯನ್ನು ಪಡೆದಿಲ್ಲ ಮತ್ತು ಅದರ ಬಗ್ಗೆ ಅವರಿಗೆ ತಿಳಿಸಲಾಗಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಗಿಲ್ಲೆಸ್ಪಿ ಅಸಮಾದಾನಗೊಂಡಿದ್ದು ಪಾಕಿಸ್ತಾನಿ ತಂಡದೊಂದಿಗೆ ಮುಂದುವರಿಯುವ ಬಗ್ಗೆ ಅವರು ಚಿಂತಿಸುತ್ತಿರುವುದಾಗಿಯೂ ವರದಿಯಲ್ಲಿ ಉಲ್ಲೇಖವಾಗಿದೆ.