- Kannada News Photo gallery Cricket photos Vinod Kambli Accepts Kapil Dev and 1983 team india squad offer
ಕಪಿಲ್ ದೇವ್ ಷರತ್ತು ಒಪ್ಪಿಕೊಂಡ ಕಾಂಬ್ಳಿ; 15ನೇ ಬಾರಿಗೆ ರಿಹ್ಯಾಬ್ ಸೆಂಟರ್ಗೆ ವಿನೋದ್
Vinod Kambli: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ಕಪಿಲ್ ದೇವ್ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ ಮತ್ತು 15 ನೇ ಬಾರಿಗೆ ಪುನರ್ವಸತಿಗೆ ಹೋಗಲು ಸಿದ್ಧರಾಗಿದ್ದಾರೆ.
Updated on: Dec 13, 2024 | 5:52 PM

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ನೆರವಿಗೆ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸಿದ್ಧವಿರುವುದಾಗಿ ಈ ಹಿಂದೆಯೇ ಘೋಷಿಸಿದ್ದರು. ಆದರೆ ಕಾಂಬ್ಳಿಗೆ ನೆರವು ನೀಡುವುದಕ್ಕೆ ಒಂದು ಷರತ್ತು ವಿಧಿಸಿದ್ದರು.

ವಾಸ್ತವವಾಗಿ 1983 ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು ವಿನೋದ್ ಕಾಂಬ್ಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆದರೆ ಅವರು ತಮ್ಮ ಕುಡಿತದ ಚಟವನ್ನು ಬಿಡಲು ರಿಹ್ಯಾಬ್ ಸೆಂಟರ್ಗೆ ಹೋಗುವುದಾದರೆ ಮಾತ್ರ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದಿದ್ದರು.

ಇದೀಗ ಕಪಿಲ್ ದೇವ್ ಅವರ ಷರತ್ತಿಗೆ ಒಪ್ಪಿಗೆ ಸೂಚಿಸಿರುವ ವಿನೋದ್ ಕಾಂಬ್ಳಿ ರಿಹ್ಯಾಬ್ ಸೆಂಟರ್ಗೆ ಹೋಗಲು ನಾನು ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಆ ಪ್ರಕಾರ 15ನೇ ಬಾರಿಗೆ ಕಾಂಬ್ಳಿ ರಿಹ್ಯಾಬ್ ಸೆಂಟರ್ಗೆ ದಾಖಲಾಗುವುದು ಖಚಿತವಾಗಿದೆ. ಇದಕ್ಕೂ ಮುನ್ನ ಕಾಂಬ್ಳಿ 14 ಬಾರಿ ರಿಹ್ಯಾಬ್ಗೆ ಸೇರಿದ್ದರು. ಆದಾಗ್ಯೂ ಅವರು ತಮ್ಮ ದುಶ್ಚಟಗಳಿಂದ ದೂರವಿರಲು ಮನಸ್ಸು ಮಾಡಿರಲಿಲ್ಲ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಕಾಂಬ್ಳಿ ಅದರಲ್ಲಿ ಪುನರ್ವಸತಿಗೆ ಹೋಗಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ‘ನಾನು ಪುನರ್ವಸತಿಗೆ ಹೋಗಲು ಸಿದ್ಧನಿದ್ದೇನೆ. ನಾನು ಯಾವುದಕ್ಕೂ ಹೆದರದ ಕಾರಣ ನಾನು ಹೋಗಲು ಬಯಸುತ್ತೇನೆ. ನನ್ನ ಕುಟುಂಬ ನನ್ನೊಂದಿಗಿದೆ.

ತಾನು ಗಂಭೀರ ಮೂತ್ರ ಸೋಂಕಿನಿಂದ ಬಳಲುತ್ತಿದ್ದೇನೆ. ನನ್ನ ಪತ್ನಿ, ಮಗ ಮತ್ತು ಮಗಳು ಒಟ್ಟಾಗಿ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ರೋಗದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ತಮ್ಮ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ. ಬಿಸಿಸಿಐನಿಂದ ಪಡೆಯುವ ಪಿಂಚಣಿಯೇ ನನ್ನ ಆದಾಯದ ಮೂಲವಾಗಿದ್ದು, ಪ್ರತಿ ತಿಂಗಳು ಬರುವ 30 ಸಾವಿರ ರೂ. ಪಿಂಚಣೆಯಿಂದ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.



















