48ನೇ ವಯಸ್ಸಿನಲ್ಲಿ 3ನೇ ಮಗುವಿಗೆ ತಂದೆಯಾದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್
Shoaib Akhtar: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ 48ನೇ ವಯಸ್ಸಿನಲ್ಲಿ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಅವರ ಮಡದಿ ರುಬಾಬ್ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಅಖ್ತರ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಫೋಟೋವನ್ನು ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
1 / 6
ಟೀಂ ಇಂಡಿಯಾವನ್ನು ಹಾಗೂ ಭಾರತದ ಮಾಜಿ ಕ್ರಿಕೆಟಿಗರನ್ನು ಟೀಕಿಸುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಇದೀಗ ತಮ್ಮ ವೈಯಕ್ತಿಕ ಬದುಕಿನ ಸುದ್ದಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.
2 / 6
ವಾಸ್ತವವಾಗಿ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ತಮ್ಮ 48ನೇ ವಯಸ್ಸಿನಲ್ಲಿ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಅವರ ಮಡದಿ ರುಬಾಬ್ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಅಖ್ತರ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಫೋಟೋವನ್ನು ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
3 / 6
ಶೋಯೆಬ್‌ಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಅವರಲ್ಲಿ ಮೊದಲ ಮಗು ಮೊಹಮ್ಮದ್ ಮಿಕೈಲ್ ಅಲಿ 2016 ರಲ್ಲಿ ಜನಿಸಿದರೆ, ಎರಡನೇ ಮಗು ಮೊಹಮ್ಮದ್ ಮುಜದ್ದದ್ ಅಲಿ 2019 ರಲ್ಲಿ ಜನಿಸಿದ್ದರು. ಇದೀಗ ಹುಟ್ಟಿರುವ ಮೂರನೇ ಮಗುವಿಗೆ ಅಖ್ತರ್ ನೂರಾ ಅಲಿ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
4 / 6
ಮಗಳು ಹುಟ್ಟಿರುವ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶೋಯೆಬ್, ‘ಮೈಕೆಲ್ ಮತ್ತು ಮುಜದ್ದದ್ಗೆ ಈಗ ಸಹೋದರಿ ಸಿಕ್ಕಿದ್ದಾಳೆ. ಅಲ್ಲಾಹನು ನಮಗೆ ಹೆಣ್ಣು ಮಗುವನ್ನು ಅನುಗ್ರಹಿಸಿದ್ದಾನೆ. ನಾನು ಮತ್ತು ನನ್ನ ಇಡೀ ಕುಟುಂಬ ಮಗಳು ನೂರಾ ಅಲಿ ಅಖ್ತರ್ ಅವರನ್ನು ಬರ ಆತ್ಮೀಯವಾಗಿ ಮಾಡಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
5 / 6
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿರುವ ಶೋಯೆಬ್ ಅಖ್ತರ್, ತಮಗಿಂತ 10 ವರ್ಷ ಕಿರಿಯ ವಯಸ್ಸಿನ ರುಬಾಬ್ ಖಾನ್ ಅವರನ್ನು 11 ನವೆಂಬರ್ 2014 ರಂದು ವರಿಸಿದ್ದರು. ಆ ವೇಳೆ ಶೋಯೆಬ್ ಅಖ್ತರ್ ಅವರ ಕಾಲೆಳೆದವರೆ ಹೆಚ್ಚು. ಪ್ರಸ್ತುತ ಈ ಸುದ್ದಿಯನ್ನು ಕೇಳಿದ ಅಭಿಮಾನಿಗಳು ದಂಪತಿಗಳಿಬ್ಬರನ್ನು ಅಭಿನಂದಿಸಲು ಆರಂಭಿಸಿದ್ದಾರೆ.
6 / 6
ಇನ್ನು ಶೋಯೆಬ್ ಅಖ್ತರ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 1997 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಖ್ತರ್ 2011 ರ ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ನಡುವೆ ಪಾಕ್ ಪರ 46 ಟೆಸ್ಟ್, 163 ಏಕದಿನ ಮತ್ತು 15 ಟಿ20 ಪಂದ್ಯಗಳನ್ನಾಡಿದ್ದು, ಇದರಲ್ಲಿ ಕ್ರಮವಾಗಿ 178, 247 ಹಾಗೂ 19 ವಿಕೆಟ್‌ಗಳನ್ನು ಪಡೆದಿದ್ದರು.