ಅಮೋಘ ಗೆಲುವಿನೊಂದಿಗೆ ಭಾರತದ ದಾಖಲೆ ಮುರಿದ ಪಾಕಿಸ್ತಾನ್
Australia vs Pakistan: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 2 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಹೀಗಾಗಿ ಅಂತಿಮ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.
1 / 6
ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ಆಸೀಸ್ ಪಿಚ್ನಲ್ಲಿನ ಗೆಲುವನ್ನು ಶ್ರೇಷ್ಠ ಜಯ ಎಂದು ಬಣ್ಣಿಸಲಾಗುತ್ತದೆ. ಇದೀಗ ಅಂತಹದೊಂದು ಅಮೋಘ ಗೆಲುವು ದಾಖಲಿಸಿ ಪಾಕಿಸ್ತಾನ್ ತಂಡ ಇಡೀ ವಿಶ್ವದ ಗಮನ ಸೆಳೆದಿದೆ.
2 / 6
ಅಡಿಲೇಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಪಡೆ 35 ಓವರ್ಗಳಲ್ಲಿ 163 ರನ್ಗಳಿಸಿ ಆಲೌಟ್ ಆಗಿತ್ತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಪಾಕಿಸ್ತಾನ್ 26.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 169 ರನ್ಗಳಿಸಿ ಅಮೋಘ ಗೆಲುವು ದಾಖಲಿಸಿದೆ.
3 / 6
ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾವನ್ನು ತವರಿನಲ್ಲಿ ಅತ್ಯಧಿಕ ಬಾರಿ ಸೋಲಿಸಿದ ಏಷ್ಯನ್ ತಂಡವೆಂಬ ಹೆಗ್ಗಳಿಕೆ ಪಾಕಿಸ್ತಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು.
4 / 6
ಆಸ್ಟ್ರೇಲಿಯಾದಲ್ಲಿ ಭಾರತ ತಂಡವು 99 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 40 ಬಾರಿ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ಏಷ್ಯನ್ ತಂಡ ಎನಿಸಿಕೊಂಡಿತ್ತು.
5 / 6
ಇದೀಗ ಈ ದಾಖಲೆಯನ್ನು ಪಾಕಿಸ್ತಾನ್ ಪಡೆ ಮುರಿದೆ. ಕಾಂಗರೂ ನಾಡಿನಲ್ಲಿ 110 ಏಕದಿನ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ 41 ಮ್ಯಾಚ್ಗಳಲ್ಲಿ ಜಯ ದಾಖಲಿಸುವ ಮೂಲಕ, ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ ಏಷ್ಯಾದ ತಂಡ ಎನಿಸಿಕೊಂಡಿದೆ.
6 / 6
ಇನ್ನು ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಅತ್ಯಧಿಕ ಬಾರಿ ಸೋಲಿಸಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. ವಿಂಡೀಸ್ ಪಡೆ 149 ಏಕದಿನ ಪಂದ್ಯಗಳಲ್ಲಿ 75 ಮ್ಯಾಚ್ಗಳ ಜಯ ಸಾಧಿಸಿ ಈ ಅಮೋಘ ದಾಖಲೆ ಬರೆದಿದೆ.
Published On - 11:09 am, Sat, 9 November 24