ಮೂರನೇ ಮದುವೆಯಾದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್; ಮೊದಲ ಪತ್ನಿ ಯಾರು ಗೊತ್ತಾ?

Updated on: Jan 20, 2024 | 3:19 PM

Shoaib Malik First Wife: ಶೋಯೆಬ್ ಮಲಿಕ್ 2002 ರಲ್ಲಿ ಆಯೇಶಾ ಸಿದ್ದಿಕಿ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಕೆಲವೇ ವರ್ಷಗಳ ನಂತರ ಈ ಜೋಡಿ ವಿಚ್ಛೇದನದ ಮೂಲಕ ಬೇರೆ ಬೇರೆಯಾಯಿತು. ಆ ಬಳಿಕ ಶೋಯೆಬ್ ಭಾರತದ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ಎರಡನೇ ವಿವಾಹವಾದರು.

1 / 8
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಬಗ್ಗೆ ಸ್ವತಃ ಶೋಯೆಬ್ ಮಲಿಕ್ ಅವರೇ ಮದುವೆಯ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ಜೀಡಿದ್ದಾರೆ.

2 / 8
ಶೋಯೆಬ್ ಮಲಿಕ್ ತನ್ನ ಮೂರನೇ ಮಡದಿಯಾಗಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಹೊಸ ಜೀವನ ಆರಂಭಿಸಲಿದ್ದಾರೆ. ಮತ್ತೊಂದೆಡೆ, ಶೋಯೆಬ್​ರನ್ನು ವರಿಸಿರುವ ಸನಾ ಜಾವೇದ್ ಅವರಿಗೂ ಇದು ಎರಡನೇ ಮದುವೆಯಾಗಿದೆ.

3 / 8
ಮೇಲೆ ಹೇಳಿದಂತೆ ಶೋಯೆಬ್ ಮಲಿಕ್ ಅವರ ಮೂರನೇ ಮದುವೆ ಇದಾಗಿದ್ದು, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ಶೋಯೆಬ್ ಎರಡನೇ ಮದುವೆಯಾಗಿದ್ದರು. ಹಾಗಿದ್ದರೆ ಶೋಯೆಬ್ ಅವರ ಮೊದಲ ಮಡದಿ ಯಾರು ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ.

4 / 8
ವಾಸ್ತವವಾಗಿ ಶೋಯೆಬ್ ಮಲಿಕ್ 2002 ರಲ್ಲಿ ಆಯೇಶಾ ಸಿದ್ದಿಕಿ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಕೆಲವೇ ವರ್ಷಗಳ ನಂತರ ಈ ಜೋಡಿ ವಿಚ್ಛೇದನದ ಮೂಲಕ ಬೇರೆ ಬೇರೆಯಾಯಿತು. ಆ ಬಳಿಕ ಶೋಯೆಬ್ ಭಾರತದ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ಎರಡನೇ ವಿವಾಹವಾದರು.

5 / 8
ಅಷ್ಟಕ್ಕೂ ಆಯೇಷಾ ವರಿಸಿದ್ದ ಮೊದಲ ಮಡದಿಯ ಬಗ್ಗೆ ಹೇಳುವುದಾದರೆ.. ಆಯೇಶಾ ಸಿದ್ದಿಕಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಭಾರತದ ಹೈದರಾಬಾದ್ ನಗರದ ನಿವಾಸಿಯಾಗಿದ್ದರು. ಅವರನ್ನು ಮಹಾ ಸಿದ್ದಿಕಿ ಎಂದೂ ಕರೆಯಲಾಗುತ್ತಿತ್ತು.

6 / 8
ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ಜೊತೆಗಿನ ವಿವಾಹದ ಸಮಯದಲ್ಲಿ, ಶೋಯೆಬ್ ಮಲಿಕ್, ನನಗೆ ವಿಚ್ಛೇದನ ನೀಡದೆ ಮದುವೆಯಾಗಲು ಹೊರಟಿದ್ದಾನೆ ಎಂದು ಆಯೇಶಾ ಆರೋಪಿಸಿದ್ದರು. ಇದಾದ ನಂತರ ಸಾಕಷ್ಟು ವಿವಾದವೂ ಹುಟ್ಟಿಕೊಂಡಿತ್ತು. ವರದಿಗಳ ಪ್ರಕಾರ, ಆಯೇಶಾ ಕೂಡ ಶೋಯೆಬ್ ವಿರುದ್ಧ ಪೊಲೀಸರಿಗೆ ವಂಚನೆ ಪ್ರಕರಣವನ್ನು ದಾಖಲಿಸಿದ್ದರು.

7 / 8
ಶೋಯೆಬ್ ಮತ್ತು ಅವರ ಮದುವೆಯ ವಿಡಿಯೋವನ್ನು ಆಯೇಶಾ ಪೊಲೀಸರಿಗೆ ಸಾಕ್ಷಿಯಾಗಿ ತೋರಿಸಿದ್ದರು. ಆ ವೇಳೆ ಶೋಯೆಬ್ ಮಲಿಕ್​ಗೆ ವಿಚ್ಛೇದನ ನೀಡುವುದಾಗಿ ಆಯೇಷಾ ಹೇಳಿಕೊಂಡಿದ್ದರು. ಆ ಬಳಿಕ ಶೋಯೆಬ್ ಕೂಡ ಆಯೇಷಾಗೆ 15 ಕೋಟಿ ರೂ. ಜೀವನಾಂಶ ನೀಡಿ ಸಾನಿಯಾರನ್ನು ವಿವಾಹವಾಗಿದ್ದರು. ನಂತರ ಸಾನಿಯಾರನ್ನು ಮದುವೆಯಾದ ಕೆಲವೇ ದಿನಗಳಲ್ಲಿ ಶೋಯೆಬ್ ಆಯೇಷಾಗೆ ವಿಚ್ಛೇದನ ನೀಡಿದರು.

8 / 8
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ವರದಿಗಳ ಪ್ರಕಾರ, ಈ ಇಬ್ಬರು 4 ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಯೆಬ್ ಮತ್ತು ಸಾನಿಯಾ 12 ವರ್ಷಗಳಿಂದ ಪರಸ್ಪರ ಜೊತೆಯಾಗಿದ್ದಾರೆ. ಇವರಿಗೆ ಒಬ್ಬ ಮಗನೂ ಇದ್ದಾನೆ.