Azam Khan: ಚಾನ್ಸ್ ಕೊಡ್ತೀರಾ ಕೊಡಿ, ಇಲ್ದಿದ್ರೆ… ಪಿಸಿಬಿ ವಿರುದ್ಧ ತಿರುಗಿ ನಿಂತ ಪಾಕ್ ಆಟಗಾರ
TV9 Web | Updated By: ಝಾಹಿರ್ ಯೂಸುಫ್
Updated on:
Feb 07, 2024 | 12:08 PM
Azam Khan: ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಮೊಯೀನ್ ಖಾನ್ ಅವರ ಪುತ್ರ. ತಂದೆಯಂತೆ ಆಝಂ ಖಾನ್ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಇದಾಗ್ಯೂ ಕಳೆದ ನಾಲ್ಕು ವರ್ಷಗಳಲ್ಲಿ ತನಗೆ ಪಾಕಿಸ್ತಾನ್ ತಂಡದಲ್ಲಿ ಕೇವಲ 8 ಅವಕಾಶಗಳನ್ನು ಮಾತ್ರ ನೀಡಿದ್ದಾರೆ ಎಂದು ಆಝಂ ಖಾನ್ ಇದೀಗ ಆಕ್ರೋಶ ಹೊರಹಾಕಿದ್ದಾರೆ.
1 / 6
ಪಾಕಿಸ್ತಾನ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿ ನಿಂತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸತತ ಅವಕಾಶ ನೀಡುತ್ತಿಲ್ಲ ಎಂಬುದು. ಅಂದರೆ 2021 ರಲ್ಲಿ ಪಾಕಿಸ್ತಾನ್ ತಂಡದ ಪಾದಾರ್ಪಣೆ ಮಾಡಿದ್ದ ಆಝಂಗೆ ಇದುವರೆಗೆ ಸಿಕ್ಕಿದ್ದು ಕೇವಲ 8 ಅವಕಾಶಗಳು ಮಾತ್ರ.
2 / 6
ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ವಿರುದ್ಧ ಆಝಂ ಖಾನ್ ಆಕ್ರೋಶ ಹೊರಹಾಕಿದ್ದಾರೆ. ಚಿಟ್ ಚಾಟ್ ಶೋವೊಂದರಲ್ಲಿ ಮಾತನಾಡಿದ ಆಝಂ, ನಾನು ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಂಡಾಗ ನನಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಆದರೆ ಪಾಕ್ ತಂಡದಲ್ಲಿ ಮಾತ್ರ ಚಾನ್ಸ್ ನೀಡುತ್ತಿಲ್ಲ.
3 / 6
ನನ್ನಲ್ಲಿ ಸಾಮರ್ಥ್ಯ ಇಲ್ಲದಿದ್ದರೆ ಫ್ರಾಂಚೈಸಿ ಲೀಗ್ಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ನಾನು ಪಂದ್ಯವನ್ನು ಗೆಲ್ಲಿಸಿಕೊಡಬಲ್ಲೇ ಎಂಬ ವಿಶ್ವಾಸ ಇರುವ ಕಾರಣ ನನಗೆ ವಿವಿಧ ಲೀಗ್ಗಳಲ್ಲಿ ಚಾನ್ಸ್ ಸಿಗುತ್ತಿದೆ. ಇದಾಗ್ಯೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶಿಸಲು ಪಾಕ್ ಕ್ರಿಕೆಟ್ ಬೋರ್ಡ್ ನನಗೆ ನ್ಯಾಯಯುತ ಅವಕಾಶವನ್ನು ನೀಡುತ್ತಿಲ್ಲ ಎಂದು ಆಝಂ ಖಾನ್ ಆಕ್ರೋಶ ಹೊರಹಾಕಿದ್ದಾರೆ.
4 / 6
ಕಳೆದ ನಾಲ್ಕು ವರ್ಷಗಳಲ್ಲಿ ನಾನು ಮೂರು ಬಾರಿ ಪಾಕ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದೇನೆ. ಆದರೆ ಸಂಪೂರ್ಣ ಸರಣಿಯನ್ನು ಆಡಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ. ಒಂದೋ ಪೂರ್ಣ ಸರಣಿಯ ನಂತರ ನನ್ನನ್ನು ಹೊರಹಾಕಿ ಅಥವಾ ನನಗೆ ಅವಕಾಶ ನೀಡಿ. ಇದು ಬಿಟ್ಟು ಸುಮ್ಮನೆ ತನ್ನ ಕೆರಿಯರ್ ಜೊತೆ ಆಟವಾಡಬೇಡಿ ಎಂದು ಆಝಂ ಖಾನ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
5 / 6
ಪಾಕಿಸ್ತಾನ್ ಪರ ಇದುವರೆಗೆ 8 ಪಂದ್ಯಗಳನ್ನಾಡಿರುವ ಆಝಂ ಖಾನ್ ಕೇವಲ 29 ರನ್ ಕಲೆಹಾಕಿದ್ದಾರೆ. ಅಂದರೆ ಪ್ರತಿ ಪಂದ್ಯಗಳ ಅವರ ಸರಾಸರಿ ಸ್ಕೋರ್ 4.83 ರನ್ಗಳು. ಇದಾಗ್ಯೂ ವಿವಿಧ ಲೀಗ್ಗಳಲ್ಲಿ ಆಝಂ ಖಾನ್ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
6 / 6
ಇತ್ತೀಚೆಗೆ ನಡೆದ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಆಝಂ ಖಾನ್ ಭರ್ಜರಿ ದಾಖಲೆ ಬರೆದಿದ್ದರು. ಹಾಗೆಯೇ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಹಲವು ಬಾರಿ ಗಮನ ಸೆಳೆದಿದ್ದರು. ಇದಾಗ್ಯೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಝಂ ಖಾನ್ ಸತತ ವೈಫಲ್ಯ ಅನುಭವಿಸಿದ್ದಾರೆ ಎಂಬುದಕ್ಕೆ 8 ಪಂದ್ಯಗಳಲ್ಲಿ ಕೇವಲ 29 ರನ್ ಕಲೆಹಾಕಿರುವುದೇ ಸಾಕ್ಷಿ.