Virat Kohli: ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಗುರಿ: ನಸೀಮ್ ಶಾ
TV9 Web | Updated By: ಝಾಹಿರ್ ಯೂಸುಫ್
Updated on:
Jun 07, 2023 | 8:29 PM
India vs Pakistan: ಮುಂಬರುವ ಏಷ್ಯಾಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇದಲ್ಲದೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಸೆಣಸಲಿವೆ.
1 / 6
India vs Pakistan: ಪಾಕಿಸ್ತಾನದ 20ರ ಹರೆಯದ ಯುವ ವೇಗಿ ನಸೀಮ್ ಶಾ ತಮ್ಮ ಅಲ್ಪಾವಧಿಯ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 2019 ರಲ್ಲಿ ಟೆಸ್ಟ್ ಕ್ರಿಕೆಟ್ ಮೂಲಕ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ನಸೀಮ್, ಇದೀಗ ಮೂರು ಸ್ವರೂಪಗಳಲ್ಲೂ ಪಾಕಿಸ್ತಾನ ತಂಡದ ಖಾಯಂ ಸದಸ್ಯರಾಗಿದ್ದಾರೆ.
2 / 6
140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ನಸೀಮ್ ಅವರ ಪ್ರಮುಖ ಗುರಿ ವಿರಾಟ್ ಕೊಹ್ಲಿಯಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕ್ ವೇಗಿ, ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಬೇಕೆಂಬುದೇ ನನ್ನ ಅತೀ ದೊಡ್ಡ ಕನಸು ಎಂದಿದ್ದಾರೆ.
3 / 6
ಭಾರತದ ವಿರುದ್ಧ ಆಡುವಾಗ ನಾನು ಪ್ರಾಣವನ್ನೇ ಪಣಕ್ಕಿಟ್ಟು ಆಡುತ್ತೇನೆ. ಈ ವೇಳೆ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವುದೇ ನಮ್ಮೆಲ್ಲರ ಗುರಿಯಾಗಿರುತ್ತೆ. ಅದರಲ್ಲೂ ಅವರನ್ನು ಶೂನ್ಯಕ್ಕೆ ಔಟ್ ಮಾಡಬೇಕೆಂಬುದು ನನ್ನ ಬಹು ದೊಡ್ಡ ಕನಸು.
4 / 6
ಏಕೆಂದರೆ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದು ಹೆಮ್ಮೆಯ ವಿಷಯವಾಗಿರುತ್ತದೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಮುಂದಿನ ದಿನಗಳಲ್ಲಿ ಡಕ್ ಔಟ್ ಮಾಡಬೇಕೆಂದಿರುವೆ ಎಂದು ನಸೀಮ್ ಶಾ ತಿಳಿಸಿದ್ದಾರೆ.
5 / 6
ಅಂದಹಾಗೆ ಮುಂಬರುವ ಏಷ್ಯಾಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇದಲ್ಲದೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಸೆಣಸಲಿವೆ. ಹೀಗಾಗಿ ನಸೀಸ್ ಶಾ ಅವರ ಕನಸನ್ನು ವಿರಾಟ್ ಕೊಹ್ಲಿ ಹೇಗೆ ಛಿದ್ರ ಮಾಡಲಿದ್ದಾರೆ ಎಂಬುದನ್ನು ಎದುರು ನೋಡಬಹುದು.
6 / 6
ಪಾಕಿಸ್ತಾನ್ ಪರ 15 ಟೆಸ್ಟ್‌ಗಳನ್ನು ಆಡಿರುವ ನಸೀಮ್ ಶಾ ಒಟ್ಟು 42 ವಿಕೆಟ್ ಪಡೆದಿದ್ದಾರೆ. ಹಾಗೆಯೇ 8 ಏಕದಿನ ಪಂದ್ಯಗಳಲ್ಲಿ 23 ವಿಕೆಟ್ ಮತ್ತು 19 ಟಿ20 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಬಹು ದೊಡ್ಡ ಕನಸಿನೊಂದಿಗೆ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.