Virat Kohli: ಏಷ್ಯಾಕಪ್ನಲ್ಲಿ ಕೊಹ್ಲಿಯನ್ನು ನೀವು ಓಪನರ್ ಆಗಿ ನೋಡುತ್ತೀರಿ: ಆರ್ಸಿಬಿ ಮಾಜಿ ಪ್ಲೇಯರ್ ಶಾಕಿಂಗ್ ಹೇಳಿಕೆ
TV9 Web | Updated By: Vinay Bhat
Updated on:
Aug 04, 2022 | 10:04 AM
Parthiv Patel: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಅವರು ಕೊಹ್ಲಿ ವಿಚಾರವಾಗಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಏಷ್ಯಾಕಪ್ 2022 ರಲ್ಲಿ ಭಾರತ ಪರ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
1 / 7
ಕಳಪೆ ಫಾರ್ಮ್ ನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಕೊಹ್ಲಿ ಬಗ್ಗೆ ಕ್ರಿಕೆಟ್ ವಲಯದಿಂದ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಫಾರ್ಮ್ ಕಂಡುಕೊಳ್ಳಲು ದೇಶೀಯ ಕ್ರಿಕೆಟ್ ಆಡಲಿ, ಅಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಹಿಂತಿರುಗಲಿ ಎಂಬ ಮಾತು ಹರಿದಾಡುತ್ತಿದೆ.
2 / 7
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ವೇಳೆ ಕೊಹ್ಲಿ ಟೀಮ್ ಇಂಡಿಯಾ ಸೇರಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು ಶಿಖರ್ ಧವನ್ ನೇತೃತ್ವದ ಭಾರತದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿಲ್ಲ. ಹೀಗಾಗಿ ಕೊಹ್ಲಿ ಏಷ್ಯಾಕಪ್ ನಲ್ಲೇ ನೇರವಾಗಿ ಆಡಲಿದ್ದಾರೆ.
3 / 7
ಹೀಗಿರುವಾಗ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಅವರು ಕೊಹ್ಲಿ ವಿಚಾರವಾಗಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಏಷ್ಯಾಕಪ್ 2022 ರಲ್ಲಿ ಭಾರತ ಪರ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
4 / 7
ಕೆಎಲ್ ರಾಹುಲ್ ಸತತವಾಗಿ ಇಂಜುರಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಏಷ್ಯಾಕಪ್ ನಿಂದ ಹೊರಬಿದ್ದರೆ ರೋಹಿತ್ ಶರ್ಮಾ ಜೊತೆ ಕೊಹ್ಲಿ ಕಣಕ್ಕಿಳಿಬಯಬೇಕು ಎಂಬುದು ಮಾಜಿ ಆರ್ ಸಿಬಿ ಪ್ಲೇಯರ್ ಪಾರ್ಥಿವ್ ಪಟೇಲ್ ಮಾತು.
5 / 7
ವಿರಾಟ್ ಕೊಹ್ಲಿ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಇದು ಕೇವಲ ಫಾರ್ಮ್ ನ ವಿಚಾರವಷ್ಟೆ. ಕೊಹ್ಲಿ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ಮ್ಯಾಟರ್ ಅಷ್ಟೆ. ಹೀಗಾಗಿ ಏಷ್ಯಾಕಪ್ ಬಹುಮುಖ್ಯ. ಕೇವಲ ಕೊಹ್ಲಿಗೆ ಮಾತ್ರವಲ್ಲ, ಭಾರತಕ್ಕೂ ಕೂಡ. ಯಾಕೆಂದರೆ ಯಾವ ಆಟಗಾರ ಯಾವ ಸ್ಥಾನದಲ್ಲಿ ಆಡಬೇಕು ಎಂಬುದನ್ನು ಇಲ್ಲಿಯೇ ತೀರ್ಮಾನಿಸಬೇಕು ಎಂದು ಪಟೇಲ್ ಹೇಳಿದ್ದಾರೆ.
6 / 7
ಭಾರತ ಈಗಾಗಲೇ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ರಿಷಭ್ ಪಂತ್, ಸೂರ್ಯಕುಮಾರ್ ಯಾವ್ ಹೀಗೆ ಅನೇಕ ಓಪನರ್ ಗಳನ್ನು ಪರೀಕ್ಷೆಗೆ ಇಳಿಸಿದೆ. ಹೀಗಾಗಿ ವಿರಾಟ್ ಕೊಹ್ಲಿಗೆ ಕೂಡ ಓಪನರ್ ಆಗಿ ಆಡುವ ಅವಕಾಶ ಸಿಕ್ಕಲಿ - ಪಾರ್ಥಿವ್ ಪಟೇಲ್.
7 / 7
ಏಷ್ಯಾ ಕಪ್ ಆಗಸ್ಟ್ 27 ರಿಂದ ಆರಂಭವಾಗಲಿದ್ದು, ಈ ಪಂದ್ಯಾವಳಿಯು ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಎರಡನೇ ಪಂದ್ಯವು ಹೈ ವೋಲ್ಟೇಜ್ ಆಗಿದ್ದು, ಇದು ಆಗಸ್ಟ್ 28 ರಂದು ನಡೆಯಲಿದೆ. ಈ ದಿನ, ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನವು ಮುಖಾಮುಖಿಯಾಗಲಿವೆ.
Published On - 10:04 am, Thu, 4 August 22