PCB: ನಜಮ್ ಸೇಥಿ ಅಧಿಕಾರಾವಧಿ ಅಂತ್ಯ; ಪಾಕ್ ಕ್ರಿಕೆಟ್​ನ ನೂತನ ಅಧ್ಯಕ್ಷ ಯಾರು ಗೊತ್ತಾ?

|

Updated on: Jun 21, 2023 | 8:48 AM

PCB: ನಜಮ್ ಸೇಥಿ ಅವರು ಜೂನ್ 20ರ ಮಂಗಳವಾರ ಟ್ವೀಟ್ ಮಾಡಿದ್ದು, ಪಿಸಿಬಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ.

1 / 5
ಇಷ್ಟು ದಿನ ಏಷ್ಯಾಕಪ್ ಆಯೋಜನೆ ಹಾಗೂ ವಿಶ್ವಕಪ್ ಆಡುವ ವಿಚಾರದಲ್ಲಿ ವಿಶ್ವ ಕ್ರಿಕೆಟ್​ನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡುತ್ತಿದೆ. ಬಿಸಿಸಿಐ ವಿರುದ್ಧ ಮುರಿದುಬಿದ್ದಿದ್ದ ಪಿಸಿಬಿಯ ಹಂಗಾಮಿ ಅಧ್ಯಕ್ಷ ನಜಮ್ ಸೇಥಿ ಅವರ ಅಧಿಕಾರಾವಧಿಯು ಮುಗಿದಿದ್ದು, ಈ ಸ್ಥಾನಕ್ಕೆ ಹೊಸಬರ ಆಯ್ಕೆಯಾಗುತ್ತಿದೆ.

2 / 5
ನಜಮ್ ಸೇಥಿ ಅವರು ಜೂನ್ 20ರ ಮಂಗಳವಾರ ಟ್ವೀಟ್ ಮಾಡಿದ್ದು, ಪಿಸಿಬಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದ ನಜಮ್ ಸೇಥಿ ಅವರ ಪಿಸಿಬಿ ಅಧ್ಯಕ್ಷ ಹುದ್ದೆ ಬುಧವಾರ ಕೊನೆಗೊಳ್ಳುತ್ತಿದೆ.

3 / 5
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ನಜಮ್ ಸೇಥಿ ಬದಲಿಗೆ ಝಕಾ ಅಶ್ರಫ್ ಪಿಸಿಬಿಯ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಝಾಕಾ ಅಶ್ರಫ್ ಈ ಹಿಂದೆಯೂ ಪಿಸಿಬಿಯ ಅಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

4 / 5
ಮುಂಬೈ ದಾಳಿಯ ನಂತರ 2012ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಆ ಸರಣಿಯನ್ನು ಪೂರ್ಣಗೊಳಿಸುವಲ್ಲಿ ಆ ಸಮಯದಲ್ಲಿ ಪಿಸಿಬಿ ಅಧ್ಯಕ್ಷರಾಗಿದ್ದ ಝಾಕಾ ಅಶ್ರಫ್ ಅವರ ಕೊಡುಗೆ ದೊಡ್ಡದು.

5 / 5
ಅಂದಹಾಗೆ, ಅಶ್ರಫ್ ಅವರು ಪಿಸಿಬಿ ಅಧ್ಯಕ್ಷರಾಗಿ ದೀರ್ಘಕಾಲ ಉಳಿಯುವುದು ಕಷ್ಟ ಸಾಧ್ಯ. ಏಕೆಂದರೆ ಅಕ್ಟೋಬರ್‌ನಲ್ಲಿ ಮತ್ತೆ ಪಿಸಿಬಿ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.