PCB: ಬಾಂಗ್ಲಾ ವಿರುದ್ಧ ಪಾಕ್ ತಂಡಕ್ಕೆ ಅವಮಾನಕರ ಸೋಲು; ವಕಾರ್ ಯೂನಿಸ್ ರಾಜೀನಾಮೆ
PCB:ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಸಲಹೆಗಾರರಾಗಿದ್ದ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಕಾರ್ ಯೂನಿಸ್ ಮೂರು ವಾರಗಳ ಹಿಂದೆಯಷ್ಟೇ ಈ ಹುದ್ದೆಯನ್ನು ವಹಿಸಿಕೊಂಡಿದ್ದರು. ಆದರೆ ಈಗ ಅವರು ಈ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ.
1 / 6
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಮೊದಲು ಟಿ20 ವಿಶ್ವಕಪ್‌ನಲ್ಲಿ ನಾಚಿಕೆಗೇಡಿನ ಪ್ರದರ್ಶನ ನೀಡಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಪಾಕ್ ತಂಡ ಇದೀಗ ಬಾಂಗ್ಲಾದೇಶದ ವಿರುದ್ಧ ತನ್ನ ತವರಿನಲ್ಲಿ ಹೀನಾಯ ಸೋಲು ನೀಡಿದೆ.
2 / 6
ತಂಡದ ಈ ಕಳಪೆ ಪ್ರದರ್ಶನ ಅಭಿಮಾನಿಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ತಂಡವು ಎಲ್ಲಾ ಕಡೆಯಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಏತನ್ಮಧ್ಯೆ, ಅನುಭವಿ ಮಾಜಿ ಆಟಗಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಾಕಿಸ್ತಾನದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
3 / 6
ತಂಡದ ಈ ನಾಚಿಕೆಗೇಡಿನ ಪ್ರದರ್ಶನದ ಆಘಾತದಿಂದ ಹೊರಬರದೆ ನರಳುತ್ತಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಸಲಹೆಗಾರರಾಗಿದ್ದ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಕಾರ್ ಯೂನಿಸ್ ಮೂರು ವಾರಗಳ ಹಿಂದೆಯಷ್ಟೇ ಈ ಹುದ್ದೆಯನ್ನು ವಹಿಸಿಕೊಂಡಿದ್ದರು. ಆದರೆ ಈಗ ಅವರು ಈ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ.
4 / 6
ಸ್ಪೋರ್ಟ್‌ಸ್ಟಾಕ್ ವರದಿಯ ಪ್ರಕಾರ, ವಕಾರ್ ಯೂನಿಸ್ಗೆ ಈ ಹುದ್ದೆಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಲವು ಪ್ರಭಾವಿ ಅಧಿಕಾರಿಗಳು ವಕಾರ್ ಯೂನಿಸ್ಗೆ ಸಂಪೂರ್ಣ ಬೆಂಬಲ್ಲ ನೀಡುತ್ತಿಲ್ಲ. ಹೀಗಾಗಿ ಯೂನಿಸ್ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದಯ ವರದಿಯಾಗಿದೆ.
5 / 6
ವಕಾರ್ ಯೂನಿಸ್ ಮೊದಲು, ಅನುಭವಿ ಆಟಗಾರ ವಾಸಿಂ ಅಕ್ರಮ್ ಅವರಿಗೂ ಈ ಹುದ್ದೆಗೆ ಆಫರ್ ನೀಡಲಾಗಿತ್ತು. ಆದರೆ ಅಕ್ರಮ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರ ನಂತರ, ಅನುಭವಿ ಆಟಗಾರ ವಕಾರ್ ಯೂನಿಸ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಈ ಹುದ್ದೆಯನ್ನು ಅಲಂಕರಿಸಿದರು. ಆದರೆ, ಅವರೇ ಈ ಹುದ್ದೆಯಲ್ಲಿ ಹೆಚ್ಚು ಕಾಲ ಇರಲು ಬಯಸಲಿಲ್ಲ.
6 / 6
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಈ ಹುದ್ದೆಗೆ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ ಎಂದು ಸ್ಪೋರ್ಟ್ಸ್ ಟಾಕ್ ತನ್ನ ವರದಿಯಲ್ಲಿ ವರದಿ ಮಾಡಿದೆ. ಈಗ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಯಲಿದೆ. ಇಲ್ಲಿಯವರೆಗೆ ಈ ಹುದ್ದೆಯನ್ನು ಮಾಜಿ ಆಟಗಾರನಿಗೆ ಮಾತ್ರ ನೀಡಲಾಗುತ್ತಿತ್ತು.
Published On - 6:44 pm, Mon, 26 August 24