Shikhar Dhawan: ನಿವೃತ್ತಿಯಿಂದ ಶಿಖರ್ ಧವನ್ ಯು-ಟರ್ನ್​? ಈ ಲೀಗ್​ ಆಡುವ ಬಗ್ಗೆ ಗಬ್ಬರ್ ಇಂಗಿತ

Shikhar Dhawan: ಇಂಜುರಿಯಿಂದಾಗಿ ಬಹಳ ಸಮಯದಿಂದ ಬಳಲುತ್ತಿದ್ದ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದಾಗ್ಯೂ ತಾನು ಇನ್ನೂ ಫಿಟ್ ಇರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಧವನ್, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (ಎಲ್‌ಎಲ್‌ಸಿ) ಆಡುವುದಾಗಿ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

|

Updated on:Aug 26, 2024 | 4:58 PM

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಎರಡು ದಿನಗಳ ಹಿಂದಷ್ಟೇ ಅಂದರೆ ಆಗಸ್ಟ್ 24 ರಂದು ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಧವನ್ ಅವರ ಈ ದಿಢೀರ್ ನಿರ್ಧಾರದಿಂದ ಅಭಿಮಾನಿಗಳು ಶಾಕ್ ಆಗಿದ್ದರು. ಧವನ್ ರಾಷ್ಟ್ರೀಯ ತಂಡದಲ್ಲಿ ಆಡದಿದ್ದರೂ, ಐಪಿಎಲ್​ನಲ್ಲಿ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

1 / 7
ಆದರೆ ಧವನ್ ದೇಶಿಯ ಕ್ರಿಕೆಟ್​ಗೂ ವಿದಾಯ ಹೇಳಿರುವುದರಿಂದ ಅವರು ಐಪಿಎಲ್ ಆಡುವುದು ಕೂಡ ಅನುಮಾನವಾಗಿದೆ. ಹೀಗಾಗಿ ತನ್ನ ನೆಚ್ಚಿನ ಆಟಗಾರನನ್ನು ಇನ್ಮುಂದೆ ಕ್ರಿಕೆಟ್ ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಅಭಿಮಾನಿಗಳಿಗೆ ನಿರಾಸೆ ತರಿಸಿತ್ತು.

2 / 7
ಆದರೆ ಇದೀಗ ಧವನ್ ತಮ್ಮ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ನೀಡಿದ್ದು, ನಿವೃತ್ತಿಯ ಎರಡು ದಿನಗಳ ನಂತರ ಧವನ್ ಕ್ರಿಕೆಟ್ ಆಡುವುದಾಗಿ ಘೋಷಿಸಿದ್ದಾರೆ. ಅದರಂತೆ ಧವನ್ ಮಾಜಿ ಕ್ರಿಕೆಟಿಗರೊಂದಿಗೆ ಲೆಜೆಂಡ್ಸ್ ಲೀಗ್​ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3 / 7
ಇಂಜುರಿಯಿಂದಾಗಿ ಬಹಳ ಸಮಯದಿಂದ ಬಳಲುತ್ತಿದ್ದ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದಾಗ್ಯೂ ತಾನು ಇನ್ನೂ ಫಿಟ್ ಇರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಧವನ್, ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ (ಎಲ್‌ಎಲ್‌ಸಿ) ಆಡುವುದಾಗಿ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

4 / 7
ಈ ಬಗ್ಗೆ ಮಾತನಾಡಿರುವ ಧವನ್, ‘ನಾನು ಈ ಹೊಸ ಇನ್ನಿಂಗ್ಸ್‌ಗೆ ಸಿದ್ಧನಿದ್ದೇನೆ. ನಿವೃತ್ತಿಯ ನಂತರ ಇದು ಆದರ್ಶವಾದ ಕ್ರಮವೆಂದು ನಾನು ಭಾವಿಸುತ್ತೇನೆ. ನನ್ನ ದೇಹ ಇನ್ನೂ ಕ್ರಿಕೆಟ್ ಪಂದ್ಯಕ್ಕೆ ಸಿದ್ಧವಾಗಿದೆ. ನನ್ನ ನಿರ್ಧಾರದಿಂದ ನನಗೆ ತೃಪ್ತಿ ಇದೆ. ಕ್ರಿಕೆಟ್ ನನ್ನ ಜೀವನದ ಒಂದು ಭಾಗವಾಗಿದೆ ಮತ್ತು ನನ್ನನ್ನು ಅದರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಮತ್ತೊಮ್ಮೆ ನನ್ನ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಮತ್ತು ನನ್ನ ಅಭಿಮಾನಿಗಳನ್ನು ರಂಜಿಸಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

5 / 7
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ನಿವೃತ್ತ ಆಟಗಾರರು ಆಡುವುದನ್ನು ಕಾಣಬಹುದಾಗಿದೆ. ಇದರಲ್ಲಿ ಇರ್ಫಾನ್ ಪಠಾಣ್ ಮತ್ತು ಸುರೇಶ್ ರೈನಾ ಅವರಂತಹ ಆಟಗಾರರು ಇನ್ನೂ ಆಡುತ್ತಿದ್ದಾರೆ. ಕ್ರಿಸ್ ಗೇಲ್ ಸೇರಿದಂತೆ ಹಲವು ವಿದೇಶಿ ಆಟಗಾರರು ಕೂಡ ಈ ಲೀಗ್‌ನ ಭಾಗವಾಗಿದ್ದಾರೆ.

6 / 7
2020 ರಲ್ಲಿ ಪ್ರಾರಂಭವಾದ ಈ ಲೀಗ್ ಇದುವರೆಗೆ 4 ಸೀಸನ್‌ಗಳನ್ನು ಕಂಡಿದೆ. ಹರ್ಭಜನ್ ಸಿಂಗ್ ನಾಯಕತ್ವದ ಮಣಿಪಾಲ್ ಟೈಗರ್ಸ್ 2023 ರ ಸೀಸನ್​ನಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಲೀಗ್​ನ 5 ನೇ ಸೀಸನ್ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಇದರಲ್ಲಿ ಧವನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

7 / 7

Published On - 4:50 pm, Mon, 26 August 24

Follow us
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ

ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?

ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್

ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ

ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!

‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್

ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ

ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​

Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ