ಇನ್ನು ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಭಿನವ್ ಮನೋಹರ್ ಅಗ್ರಸ್ಥಾನದಲ್ಲಿದ್ದಾರೆ. ಈವರೆಗೆ 8 ಇನಿಂಗ್ಸ್ಗಳನ್ನಾಡಿರುವ ಅಭಿನವ್ 4 ಅರ್ಧಶತಕಗಳೊಂದಿಗೆ ಒಟ್ಟು 372 ರನ್ ಕಲೆಹಾಕಿದ್ದಾರೆ. ಇದೇ ವೇಳೆ ಅವರು 8 ಫೋರ್ ಹಾಗೂ 36 ಸಿಕ್ಸ್ಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ 8 ಪಂದ್ಯಗಳಿಂದ ಅಭಿನವ್ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 8 ಫೋರ್ಗಳು ಮಾತ್ರ. ಇದೇ ವೇಳೆ ಅವರು 36 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಅಂದರೆ ಸಿಕ್ಸರ್ಗಳ ಮೂಲಕವೇ ಸ್ಪೋಟಕ ಇನಿಂಗ್ಸ್ ಆಡುವಲ್ಲಿ ಅಭಿನವ್ ಮನೋಹರ್ ಯಶಸ್ವಿಯಾಗಿದ್ದಾರೆ.