ಅಂದು ಮೋಸದಿಂದ ಸೆಹ್ವಾಗ್ ಶತಕ ತಪ್ಪಿಸಿದ ಬೌಲರ್ ಇಂದು ಬಸ್ ಡ್ರೈವರ್
TV9 Web | Updated By: ಝಾಹಿರ್ ಯೂಸುಫ್
Updated on:
Aug 29, 2021 | 2:46 PM
Suraj randiv: 2011 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಶ್ರೀಲಂಕಾ ಪರ 12 ಟೆಸ್ಟ್‌ಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.
1 / 7
ಸೆಹ್ವಾಗ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾಬ 34ನೇ ಓವರ್ ವೇಳೆಗೆ ಗೆಲುವಿನ ಸಮೀಪ ಬಂದು ನಿಂತಿತು. ಅತ್ತ ಸೆಹ್ವಾಗ್ 99 ರನ್ಗಳಿಸಿ ಕ್ರೀಸ್ನಲ್ಲಿದ್ದರು. 35ನೇ ಓವರ್ನಲ್ಲಿ ತಂಡಕ್ಕೆ ಗೆಲ್ಲಲು ಒಂದು ರನ್ ಮಾತ್ರ ಬೇಕಿತ್ತು. ಮತ್ತೊಂದೆಡೆ ಸ್ಟ್ರೈಕ್ನಲ್ಲಿದ್ದ ಸೆಹ್ವಾಗ್ಗೆ ಶತಕ ಪೂರೈಸಲು ಒಂದು ರನ್ ಬೇಕಾಗಿತ್ತು. ಹೀಗಾಗಿ ವೀರು ಶತಕದೊಂದಿಗೆ ಟೀಮ್ ಇಂಡಿಯಾಗೆ ಜಯ ತಂದು ಕೊಡಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 35ನೇ ಓವರ್ನಲ್ಲಿ ಸೂರಜ್ ರಂದೀವ್ ಚೆಂಡನ್ನು ನೋ ಬಾಲ್ ಎಸೆದ ಪರಿಣಾಮ ಸೆಹ್ವಾಗ್ ಶತಕ ವಂಚಿತರಾದರು. ಸೆಹ್ವಾಗ್ ಅವರ ಶತಕ ತಪ್ಪಿಸಲು ಉದ್ದೇಶಪೂರ್ವಕವಾಗಿ ರಂದೀವ್ ನೋಬಾಲ್ ಎಸೆದಿದ್ದರು ಎಂಬುದು ಆ ಬಳಿಕ ತಿಳಿದು ಬಂತು.
2 / 7

3 / 7
ಅಂದು ಮನಃಪೂರ್ವಕವಾಗಿ ನೋ ಬಾಲ್ ಎಸೆದ ಶ್ರೀಲಂಕಾ ಸ್ಪಿನ್ನರ್ ಇದೀಗ ಕ್ರಿಕೆಟ್ ಅಂಗಳದಿಂದಲೇ ದೂರ ಸರಿದಿದ್ದಾರೆ. ಜೀವನ ನಿರ್ವಹಣೆಗಾಗಿ ಮತ್ತೊಂದು ವೃತ್ತಿ ಕಂಡುಕೊಂಡಿದ್ದಾರೆ. ಹೌದು, ಸೂರಜ್ ರಂದೀವ್ ಇದೀಗ ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಫ್ರೆಂಚ್ ಮೂಲದ ಕಂಪನಿಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ನಿಂದ ಜೀವನ ನಿರ್ವಹಣೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಮತ್ತೊಂದು ವೃತ್ತಿಯ ಮೊರೆ ಹೋಗಿದ್ದಾರೆ ಸೂರಜ್.
4 / 7
ಅಂದಹಾಗೆ ಸೂರಜ್ ಅಂತಿಂಥ ಕ್ರಿಕೆಟಿಗನಲ್ಲ. ಏಕೆಂದರೆ 2011 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಶ್ರೀಲಂಕಾ ಪರ 12 ಟೆಸ್ಟ್‌ಗಳಲ್ಲಿ 46 ವಿಕೆಟ್ ಪಡೆದಿದ್ದಾರೆ. ಹಾಗೆಯೇ 31 ಏಕದಿನ ಪಂದ್ಯಗಳನ್ನು ಆಡಿದ್ದು, 36 ವಿಕೆಟ್ ಉರುಳಿಸಿದ್ದಾರೆ. ಇನ್ನು 7 ಟಿ20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದಾರೆ. 2019 ರವರೆಗೆ ಶ್ರೀಲಂಕಾ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದ ಸೂರಜ್ಗೆ ಮುತ್ತಯ್ಯ ಮುರಳೀಧರನ್ ಸೇರಿದಂತೆ ಲಂಕಾ ತಂಡದಲ್ಲಿದ್ದ ಕೆಲ ಆಲ್ರೌಂಡರ್ಗಳ ಕಾರಣದಿಂದ ಟೀಮ್ನಲ್ಲಿ ಹೆಚ್ಚು ಅವಕಾಶ ದೊರೆತಿರಲಿಲ್ಲ.
5 / 7
ಇತ್ತ ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದ ಸೂರಜ್ 2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಅದೇ ವರ್ಷ ಸಿಎಸ್ಕೆ ಚಾಂಪಿಯನ್ ಪಟ್ಟಕ್ಕೇರಿತ್ತು. CSK ಪರ 8 ಪಂದ್ಯಗಳನ್ನು ಆಡಿರುವ ಲಂಕಾ ಸ್ಪಿನ್ನರ್ 6 ವಿಕೆಟ್ ಪಡೆದಿದ್ದರು.
6 / 7
ಇದಾಗ್ಯೂ ಐಪಿಎಲ್ನಲ್ಲಿ ಲಂಕಾ ಸ್ಪಿನ್ನರ್ ಅದೃಷ್ಟ ಕೈ ಹಿಡಿಯಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ಪರ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲೂ ಕೂಡ ಖಾಯಂ ಆಗಿ ಉಳಿಯಲು ಸಾಧ್ಯವಾಗಲಿಲ್ಲ.
7 / 7
ಹೀಗಾಗಿ ಜೀವನ ನಿರ್ವಹಣೆಗಾಗಿ ಬಸ್ ಚಾಲಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇದಾಗ್ಯೂ ಸಮಯ ಸಿಕ್ಕಾಗೆಲ್ಲಾ ಸ್ಥಳೀಯ ಸರ್ಕ್ಯೂಟ್ನಲ್ಲಿ ಕ್ರಿಕೆಟ್ ಆಡುತ್ತೇನೆ ಎಂದು ನೋವಿನಿಂದಲೇ ಹೇಳಿಕೊಳ್ಳುತ್ತಾರೆ ಸೂರಜ್ ರಂದೀವ್.
Published On - 2:55 pm, Thu, 26 August 21