ಜಸ್ಟ್ 32 ಇನಿಂಗ್ಸ್​​​ನಲ್ಲಿ ವಿಶ್ವ ದಾಖಲೆ ಬರೆದ ಪ್ರಭಾತ್ ಜಯಸೂರ್ಯ

|

Updated on: Nov 30, 2024 | 9:54 AM

South Africa vs Sri Lanka: ಡರ್ಬನ್​​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪ್ರಥಮ ಇನಿಂಗ್ಸ್​​ನಲ್ಲಿ 191 ರನ್ ಕಲೆಹಾಕಿದರೆ, ಶ್ರೀಲಂಕಾ 42 ರನ್​​ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ 366 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

1 / 5
ಡರ್ಬನ್​​ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಶ್ರೀಲಂಕಾ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ 2 ವಿಕೆಟ್ ಕಬಳಿಸಿದ್ದ ಪ್ರಭಾತ್ ದ್ವಿತೀಯ ಇನಿಂಗ್ಸ್​​ನಲ್ಲಿ ಮತ್ತೆರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

2 / 5
ಈ ನಾಲ್ಕು ವಿಕೆಟ್​​ಗಳೊಂದಿಗೆ ಪ್ರಭಾತ್ ಜಯಸೂರ್ಯ ಟೆಸ್ಟ್ ಕ್ರಿಕೆಟ್​​ನಲ್ಲಿ 100 ವಿಕೆಟ್​​​ಗಳ ಸಾಧನೆ ಮಾಡಿದ್ದಾರೆ. ಅದು ಕೂಡ ಕೇವಲ 32 ಇನಿಂಗ್ಸ್​​ ಮೂಲಕ ಎಂಬುದು ವಿಶೇಷ. ಇದರೊಂದಿಗೆ ಟೆಸ್ಟ್ ಕ್ರಿಕೆಟ್​​ನಲ್ಲಿ ಅತೀ ಕಡಿಮೆ ಇನಿಂಗ್ಸ್​​ ಮೂಲಕ ನೂರು ವಿಕೆಟ್​​ ಕಬಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

3 / 5
ಈ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ ಹಾಗೂ ಕ್ಲಾರಿ ಗ್ರಿಮೆಟ್ಟ್ ಇದ್ದಾರೆ. ಟರ್ನರ್ 30 ಇನಿಂಗ್ಸ್​​ ಮೂಲಕ 100 ವಿಕೆಟ್ ಕಬಳಿಸಿದರೆ, ಗ್ರಿಮೆಟ್ಟ 31 ಇನಿಂಗ್ಸ್​ನಲ್ಲಿ​ ಈ ಸಾಧನೆ ಮಾಡಿದ್ದರು. ಇದೀಗ 32 ಇನಿಂಗ್ಸ್​ 100 ವಿಕೆಟ್ ಉರುಳಿಸಿ ಪ್ರಭಾತ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

4 / 5
ಶ್ರೀಲಂಕಾ ಪರ 17 ಟೆಸ್ಟ್ ಪಂದ್ಯಗಳಲ್ಲಿ 32 ಇನಿಂಗ್ಸ್ ಆಡಿರುವ ಪ್ರಭಾತ್ ಜಯಸೂರ್ಯ ಈವರೆಗೆ 5513 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ಒಟ್ಟು 101 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಇನಿಂಗ್ಸ್​​​ಗಳಲ್ಲಿ 100 ವಿಕೆಟ್​​ಳ ಸಾಧನೆ ಮಾಡಿದ ಏಷ್ಯನ್ ಬೌಲರ್​​ ಎನಿಸಿಕೊಂಡಿದ್ದಾರೆ.

5 / 5
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪ್ರಥಮ ಇನಿಂಗ್ಸ್​​ನಲ್ಲಿ 191 ರನ್ ಕಲೆಹಾಕಿದರೆ, ಶ್ರೀಲಂಕಾ 42 ರನ್​​ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ 366 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್​ನಲ್ಲಿ 149 ರನ್​​​ಗಳ ಹಿನ್ನಡೆ ಹೊಂದಿದ್ದ ಶ್ರೀಲಂಕಾ ತಂಡವು ಈ ಪಂದ್ಯದಲ್ಲಿ ಗೆಲ್ಲಲು ದ್ವಿತೀಯ ಇನಿಂಗ್ಸ್​​ನಲ್ಲಿ 516 ರನ್ ಕಲೆಹಾಕಬೇಕು.