Rachin Ravindra: ಟೆಸ್ಟ್ನಲ್ಲೂ ಕನ್ನಡಿಗನ ಕಮಾಲ್: ಭರ್ಜರಿ ಸೆಂಚುರಿ ಸಿಡಿಸಿದ ರಚಿನ್ ರವೀಂದ್ರ
TV9 Web | Updated By: ಝಾಹಿರ್ ಯೂಸುಫ್
Updated on:
Feb 04, 2024 | 2:04 PM
Rachin Ravindra: ನ್ಯೂಝಿಲೆಂಡ್ ಪರ ಕಣಕ್ಕಿಳಿಯುತ್ತಿರುವ ಕರ್ನಾಟಕ ಮೂಲದ 24 ವರ್ಷದ ರಚಿನ್ ರವೀಂದ್ರ ಈಗಾಗಲೇ 4 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಕಳೆದ ಬಾರಿಯ ಏಕದಿನ ವಿಶ್ವಕಪ್ನಲ್ಲಿ 3 ಭರ್ಜರಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ರಚಿನ್ ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ.
1 / 7
ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಎಡಗೈ ಬ್ಯಾಟರ್ ರಚಿನ್ ರವೀಂದ್ರ (Rachin Ravindra) ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು.
2 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಟಾಮ್ ಲಾಥಮ್ (20) ಹಾಗೂ ಡೆವೊನ್ ಕಾನ್ವೆ (1) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ನ್ಯೂಝಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
3 / 7
ಆರಂಭದಿಂದಲೇ ಎಚ್ಚರಿಕೆಯೊಂದಿಗೆ ಬ್ಯಾಟಿಂಗ್ ಪ್ರದರ್ಶಿಸಿದ ರಚಿನ್ ರವೀಂದ್ರ ಕೇನ್ ವಿಲಿಯಮ್ಸ್ಗೆ ಉತ್ತಮ ಸಾಥ್ ನೀಡಿದರು. ಪರಿಣಾಮ 241 ಎಸೆತಗಳಲ್ಲಿ ವಿಲಿಯಮ್ಸನ್ 30ನೇ ಟೆಸ್ಟ್ ಶತಕ ಪೂರೈಸಿದರು.
4 / 7
ಮತ್ತೊಂದೆಡೆ ಆಕರ್ಷಕ ಹೊಡೆತಗಳೊಂದಿಗೆ ರನ್ ಪೇರಿಸುತ್ತಾ ಸಾಗಿದ ರಚಿನ್ ರವೀಂದ್ರ 189 ಎಸೆತಗಳಲ್ಲಿ 10 ಫೋರ್ ಹಾಗೂ 1 ಸಿಕ್ಸರ್ನೊಂದಿಗೆ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲೂ ಛಾಪು ಮೂಡಿಸುವಲ್ಲಿ ರಚಿನ್ ರವೀಂದ್ರ ಯಶಸ್ವಿಯಾಗಿದ್ದಾರೆ.
5 / 7
ಈ ಅಜೇಯ ಶತಕಗಳೊಂದಿಗೆ ರಚಿನ್ ರವೀಂದ್ರ (118) ಹಾಗೂ ಕೇನ್ ವಿಲಿಯಮ್ಸನ್ (112) 3ನೇ ವಿಕೆಟ್ಗೆ 219 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ 2 ವಿಕೆಟ್ ಕಳೆದುಕೊಂಡು 258 ರನ್ ಕಲೆಹಾಕಿದೆ.
6 / 7
ಅಂದಹಾಗೆ ಇದು 24 ವರ್ಷದ ರಚಿನ್ ರವೀಂದ್ರ ಅವರ 4ನೇ ಅಂತಾರಾಷ್ಟ್ರೀಯ ಶತಕ ಎಂಬುದು ವಿಶೇಷ. ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ರಚಿನ್ 3 ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂರು ಏಕದಿನ ಶತಕಗಳು 2023 ರ ವಿಶ್ವಕಪ್ನಲ್ಲಿ ಮೂಡಿಬಂದಿತ್ತು.
7 / 7
ಕಳೆದ ಬಾರಿಯ ವಿಶ್ವಕಪ್ನಲ್ಲಿ 10 ಪಂದ್ಯಗಳನ್ನಾಡಿದ್ದ ರಚಿನ್ 578 ರನ್ ಬಾರಿಸಿ ನ್ಯೂಝಿಲೆಂಡ್ ಪರ ಟಾಪ್ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ಶತಕದ ಖಾತೆ ತೆರೆದಿರುವ ಯುವ ದಾಂಡಿಗನಿಂದ ಮುಂಬರುವ ದಿನಗಳಲ್ಲಿ ಭರ್ಜರಿ ಬ್ಯಾಟಿಂಗ್ ಅನ್ನು ನಿರೀಕ್ಷಿಸಬಹುದು.