Rahul Dravid: ದ್ರಾವಿಡ್ ಹೆಸರಿನಲ್ಲಿರುವ ಈ ವಿಶ್ವ ದಾಖಲೆ ಮುರಿಯುವುದು ಕನಸು ಮನಸಿನಲ್ಲೂ ಸಾಧ್ಯವಿಲ್ಲ

| Updated By: ಝಾಹಿರ್ ಯೂಸುಫ್

Updated on: Jan 11, 2024 | 2:30 PM

Rahul Dravid Records: ಟೀಮ್ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್ 5 ದ್ವಿಶತಕ ಹಾಗೂ 36 ಶತಕಗಳೊಂದಿಗೆ ಒಟ್ಟು 13288 ರನ್ ಕಲೆಹಾಕಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳಿಂದ ಒಟ್ಟು 10889 ರನ್ ಪೇರಿಸಿದ್ದಾರೆ.

1 / 8
ದಾಖಲೆಗಳು ಇರುವುದೇ ಮುರಿಯಲು...ಇಂದು ಒಬ್ಬರ ಹೆಸರಿನಲ್ಲಿರುವ ದಾಖಲೆಗಳು ನಾಳೆ ಮತ್ತೊಬ್ಬರ ಪಾಲಾಗಿರುತ್ತವೆ. ಆದರೆ ಕ್ರಿಕೆಟ್ ಅಂಗಳದಲ್ಲಿ ಮೂಡಿಬಂದಿರುವ ಕೆಲವೊಂದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ. ಅಂತಹ ದಾಖಲೆಯೊಂದು ದಿ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದೆ.

2 / 8
ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಟಗಾರ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ದ್ರಾವಿಡ್ ಅವರ ತಾಳ್ಮೆಗೆ ಸರಿಸಾಟಿಯಾಗಿ ನಿಂತ ಮತ್ತೊಬ್ಬ ಕ್ರಿಕೆಟಿಗನಿಲ್ಲ ಎನ್ನಬಹುದು. ಇದೇ ಕಾರಣದಿಂದಾಗಿ ರಾಹುಲ್ ದ್ರಾವಿಡ್ ಅವರನ್ನು ದಿ ಗ್ರೇಟ್ ವಾಲ್ ಅಥವಾ ಮಹಾ ಗೋಡೆ ಎಂದು ಕರೆಯಲಾಗುತ್ತದೆ.

3 / 8
ಹೀಗೆ ಗೋಡೆಯಾಗಿ ನಿಂತು ರಾಹುಲ್ ದ್ರಾವಿಡ್ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ದಾಖಲೆಯನ್ನು ಮುರಿಯುವುದು ಕನಸು ಮನಸ್ಸಿನಲ್ಲೂ ಸಾಧ್ಯವಿಲ್ಲ ಎಂದರೆ ತಪ್ಪಾಗಲಾರದು.

4 / 8
ಏಕೆಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾಲ್​ಗಳನ್ನು ಎದುರಿಸಿದ ವಿಶ್ವ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. 286 ಟೆಸ್ಟ್ ಇನಿಂಗ್ಸ್ ಆಡಿರುವ ದ್ರಾವಿಡ್ ಬರೋಬ್ಬರಿ 31258	 ಎಸೆತಗಳನ್ನು ಎದುರಿಸಿದ್ದಾರೆ.

5 / 8
ರಾಹುಲ್ ದ್ರಾವಿಡ್ ಅವರನ್ನು ಹೊರತುಪಡಿಸಿ ಮತ್ಯಾವುದೇ ಬ್ಯಾಟ್ಸ್​ಮನ್ ಟೆಸ್ಟ್ ಕ್ರಿಕೆಟ್​ನಲ್ಲಿ 30 ಸಾವಿರ ಎಸೆತಗಳನ್ನು ಎದುರಿಸಿಲ್ಲ. ಹೀಗಾಗಿಯೇ ಈ ವಿಶ್ವ ದಾಖಲೆಯನ್ನು ಮುರಿಯುವುದು ಅಸಾಧ್ಯ ಎಂದೇ ಹೇಳಬಹುದು. ಇದರ ಜೊತೆಗೆ ಮತ್ತೊಂದು ವರ್ಲ್ಡ್​​ ರೆಕಾರ್ಡ್ ಕೂಡ ದ್ರಾವಿಡ್ ಹೆಸರಿನಲ್ಲಿದೆ.

6 / 8
ಅದು ಕೂಡ ಟೆಸ್ಟ್​ ಕ್ರಿಕೆಟ್​ನಲ್ಲಿ ಕ್ರೀಸ್ ಕಚ್ಚಿ ನಿಂತ ದಾಖಲೆ. ಅಂದರೆ ಟೆಸ್ಟ್ ಇತಿಹಾಸದಲ್ಲೇ ಅತ್ಯಧಿಕ ಸಮಯ ಬ್ಯಾಟಿಂಗ್ ಮಾಡಿದ ವಿಶ್ವ ದಾಖಲೆ ಸಹ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ದಿ ಗ್ರೇಟ್ ವಾಲ್ ಬರೋಬ್ಬರಿ 44,153 ನಿಮಿಷಗಳನ್ನು ಕ್ರೀಸ್‌ನಲ್ಲಿ ಕಳೆದಿದ್ದಾರೆ.

7 / 8
ಅಂದರೆ ಟೆಸ್ಟ್​ ಕ್ರಿಕೆಟ್​ನಲ್ಲಿ 44,153 ನಿಮಿಷಗಳ ಕಾಲ ಬ್ಯಾಟ್ ಬೀಸಿರುವ ರಾಹುಲ್ ದ್ರಾವಿಡ್ ಬರೋಬ್ಬರಿ 31258	 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಯಾರಿಂದಲೂ ಮುರಿಯಲಾಗದಂತಹ ವಿಶ್ವ ದಾಖಲೆಗಳನ್ನು ದಿ ಗ್ರೇಟ್ ರಾಹುಲ್ ದ್ರಾವಿಡ್ ನಿರ್ಮಿಸಿದ್ದಾರೆ.

8 / 8
ಟೀಮ್ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ದ್ರಾವಿಡ್ 5 ದ್ವಿಶತಕ ಹಾಗೂ 36 ಶತಕಗಳೊಂದಿಗೆ ಒಟ್ಟು 13288 ರನ್ ಕಲೆಹಾಕಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳಿಂದ ಒಟ್ಟು 10889 ರನ್ ಪೇರಿಸಿದ್ದಾರೆ. ಅಂದಹಾಗೆ ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಟಗಾರ ರಾಹುಲ್ ದ್ರಾವಿಡ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ದಿ ಗ್ರೇಟ್​ ವಾಲ್​ಗೆ ಹ್ಯಾಪಿ ಹುಟ್ದಬ್ಬ.

Published On - 12:30 pm, Thu, 11 January 24