IND vs NZ Semi Final: ಮುಂಬೈ ಏರ್ಪೋರ್ಟ್ನಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂಗೆ ತೆರಳಿದ ರಾಹುಲ್ ದ್ರಾವಿಡ್: ಕಾರಣವೇನು?
Rahul Dravid in Wankhede Stadium: ರಾಹುಲ್ ದ್ರಾವಿಡ್ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಅಲ್ಲಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂಗೆ ಬೆಂಬಲ ಸಿಬ್ಬಂದಿಯೊಂದಿಗೆ ತೆರಳಿದ್ದಾರೆ. ವಾಂಖೆಡೆಯಲ್ಲಿ ಪಿಚ್ ಪರಿಶೀಲನೆ ನಡೆಸಿದ್ದಾರೆ. ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಪಿಚ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
1 / 8
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ಅನ್ನು ಸೋಲಿಸಿದ ನಂತರ ಸೋಮವಾರ ಭಾರತೀಯ ಆಟಗಾರರು ಮುಂಬೈಗೆ ತಲುಪಿದರು. ತಂಡಕ್ಕೆ ಸೋಮವಾರ ವಿಶ್ರಾಂತಿ ದಿನವಾಗಿದೆ. ಹೀಗಿದ್ದರೂ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದುಕೊಂಡಿಲ್ಲ.
2 / 8
ರಾಹುಲ್ ದ್ರಾವಿಡ್ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಅಲ್ಲಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂಗೆ ಬೆಂಬಲ ಸಿಬ್ಬಂದಿಯೊಂದಿಗೆ ತೆರಳಿದ್ದಾರೆ. ವಾಂಖೆಡೆಯಲ್ಲಿ ಪಿಚ್ ಪರಿಶೀಲನೆ ನಡೆಸಿದ್ದಾರೆ. ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಪಿಚ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
3 / 8
ವಿಶೇಷ ಎಂದರೆ, ವಿಶ್ವಕಪ್ ಪಂದ್ಯಾವಳಿಯಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಇದೊಂದು ರೂಢಿಯಾಗಿದೆ. ಕಳೆದ ವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೂಡ ದ್ರಾವಿಡ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಕೋಲ್ಕತ್ತಾಕ್ಕೆ ತಲುಪಿದ ತಕ್ಷಣ ನೇರವಾಗಿ ಪಿಚ್ ಪರಿಶೀಲಿಸಲು ಕ್ರೀಡಾಂಗಣಕ್ಕೆ ತೆರಳಿದ್ದರು.
4 / 8
ಭಾರತ ಕ್ರಿಕೆಟ್ ತಂಡ ಇದೀಗ ಐಸಿಸಿ ಏಕದಿನ ವಿಶ್ವಕಪ್ 2023ರ ಸೆಮಿಫೈನಲ್ಗೆ ಸಜ್ಜಾಗುತ್ತಿದೆ. ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ.
5 / 8
ಸೆಮಿಫೈನಲ್ ನಡೆಯಲಿರುವ ವಾಂಖೆಡೆ ಪಿಚ್ ಬ್ಯಾಟರ್ಗಳಿಗೆ ಸ್ವರ್ಗ ಎಂದೇ ಹೇಳಬಹುದು. ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ನಾಲ್ಕು ವಿಶ್ವಕಪ್ ಪಂದ್ಯಗಳು ನಡೆದಿವೆ. ಈ ಎಲ್ಲ ಪಂದ್ಯ ಕೂಡ ಹೆಚ್ಚು ಸ್ಕೋರ್ ಮಾಡಿದ ಆಟಗಳಾಗಿವೆ. ಆದಾಗ್ಯೂ, ವೇಗಿಗಳು ದ್ವಿತೀಯ ಇನ್ನಿಂಗ್ಸ್ನಲ್ಲಿ ಸ್ವಲ್ಪ ಸಹಾಯವನ್ನು ಪಡೆಯುವ ಸಾಧ್ಯತೆಯಿದೆ.
6 / 8
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಜೊತೆಯಾಗಿ ಬೆಂಗಳೂರಿನಿಂದ ಸೋಮವಾರ ಸಂಜೆ ವೇಳೆಗೆ ಮುಂಬೈ ತಲುಪಿದರು. ಕೊಹ್ಲಿ ಇವರಿಗಿಂತ ಮುಂಚಿತವಾಗಿ ಒಬ್ಬರೇ ಮುಂಬೈಗೆ ಪ್ರಯಾಣಿಸಿದ್ದರು. ಇಂದು ಎಲ್ಲ ಆಟಗಾರರು ತರಭೇತಿಯಲ್ಲಿ ಪಾಲ್ಗೊಳ್ಳಲಿದ್ದು, ಮಹತ್ವದ ಪಂದ್ಯಕ್ಕೆ ಗೇಮ್ ಪ್ಲಾನ್ ರೂಪಿಸಲಿದ್ದಾರೆ.
7 / 8
ಭಾರತ ತಂಡಕ್ಕೆ ವಾಂಖೆಡೆ ಕ್ರೀಡಾಂಗಣ ಸಂಪೂರ್ಣ ಲಕ್ಕಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದುವರೆಗೆ ವಾಂಖೆಡೆಯಲ್ಲಿ ನಡೆದಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇದುವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ. 1983 ರಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 35 ರನ್‌ಗಳಿಂದ ಸೋಲಿಸಿತ್ತು.
8 / 8
ಎರಡು ವರ್ಷಗಳ ನಂತರ, ನೆಹರು ಕಪ್‌ನ ಸೆಮಿ-ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೂಡ ಸೋತಿತ್ತು. 2016 ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ವಿಂಡೀಸ್ ವಿರುದ್ಧ ಭಾರತ ಜಯ ಸಾಧಿಸುವಲ್ಲಿ ವಿಫಲವಾಗಿತ್ತು. ಆದರೆ, 2011ರ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಭಾರತ ಗೆದ್ದು 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದಿತ್ತು ಎಂಬುದು ಸಂತಸದ ಸಂಗತಿ.