ಸಚಿನ್ ತೆಂಡೂಲ್ಕರ್ ಅವರ ಈ ವಿಶ್ವ ದಾಖಲೆ ಮುರಿಯುವವರು ಯಾರು?

ICC World Cup 2023: ವಿಶೇಷ ಎಂದರೆ ಈ ನಾಲ್ಕು ತಂಡಗಳ ಆಟಗಾರರೇ ಈ ಬಾರಿಯ ವಿಶ್ವಕಪ್​ನ ರನ್ ಸರದಾರರಾಗಿ ಹೊರಹೊಮ್ಮಿದ್ದಾರೆ. ಅಂದರೆ ಈ ಬಾರಿ ವಿಶ್ವಕಪ್​ನಲ್ಲಿ ಒಟ್ಟು ನಾಲ್ವರು 500+ ಸ್ಕೋರ್​ಗಳಿಸಿದರೆ, ಒಬ್ಬ ಬ್ಯಾಟರ್ 499 ರನ್ ಕಲೆಹಾಕಿದ್ದಾರೆ.

| Edited By: Zahir Yusuf

Updated on: Nov 14, 2023 | 7:22 PM

ಏಕದಿನ ಕ್ರಿಕೆಟ್​ ವಿಶ್ವಕಪ್​ ಅಂತಿಮ ಹಂತಕ್ಕೆ ಬಂದು ನಿಂತಿದೆ. ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾದರೆ, ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ.

1 / 8
ವಿಶೇಷ ಎಂದರೆ ಈ ನಾಲ್ಕು ತಂಡಗಳ ಆಟಗಾರರೇ ಈ ಬಾರಿಯ ವಿಶ್ವಕಪ್​ನ ರನ್ ಸರದಾರರಾಗಿ ಹೊರಹೊಮ್ಮಿದ್ದಾರೆ. ಅಂದರೆ ಈ ಬಾರಿ ವಿಶ್ವಕಪ್​ನಲ್ಲಿ ಒಟ್ಟು ನಾಲ್ವರು 500+ ಸ್ಕೋರ್​ಗಳಿಸಿದರೆ, ಒಬ್ಬ ಬ್ಯಾಟರ್ 499 ರನ್ ಕಲೆಹಾಕಿದ್ದಾರೆ. ಇದೀಗ ನಾಕೌಟ್ ಹಂತದಲ್ಲಿ ಕಣಕ್ಕಿಳಿಯಲಿರುವ ಈ ಐವರು ಆಟಗಾರರಿಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯುವ ಅವಕಾಶವಿದೆ.

2 / 8
ಅಂದರೆ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ 2003 ರ ವಿಶ್ವಕಪ್​ನಲ್ಲಿ ಬರೋಬ್ಬರಿ 673 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯಲು ಐವರು ಬ್ಯಾಟರ್​ಗಳಿಗೆ ಅವಕಾಶವಿದೆ. ಯಾರು ಎಷ್ಟು ರನ್​ಗಳಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ...

3 / 8
1- ವಿರಾಟ್ ಕೊಹ್ಲಿ: ಈ ಬಾರಿಯ ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಒಟ್ಟು 594 ರನ್ ಕಲೆಹಾಕಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯಲು ಕಿಂಗ್ ಕೊಹ್ಲಿಗೆ ಬೇಕಿರುವುದು ಕೇವಲ 80 ರನ್​ಗಳು ಮಾತ್ರ.

4 / 8
2- ಕ್ವಿಂಟನ್ ಡಿಕಾಕ್: ಸೌತ್ ಆಫ್ರಿಕಾದ ಆರಂಭಿಕ ಬ್ಯಾಟರ್ ಡಿಕಾಕ್ ಈ ಬಾರಿಯ ವಿಶ್ವಕಪ್​ನಲ್ಲಿ 591 ರನ್ ಕಲೆಹಾಕಿದ್ದಾರೆ. ಇದೀಗ ಸಚಿನ್ ಅವರ ವಿಶ್ವ ದಾಖಲೆಯನ್ನು ಅಳಿಸಿ ಹಾಕಲು ಕ್ವಿಂಟನ್​ ಡಿಕಾಕ್​ 83 ರನ್​ಗಳನ್ನು ಕಲೆಹಾಕಬೇಕಿದೆ.

5 / 8
3- ರಚಿನ್ ರವೀಂದ್ರ: ನ್ಯೂಝಿಲೆಂಡ್ ತಂಡದ ಎಡಗೈ ದಾಂಡಿಗ ರಚಿನ್ ರವೀಂದ್ರ ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 565 ರನ್​ ಬಾರಿಸಿದ್ದಾರೆ. ಇನ್ನು 109 ರನ್​ಗಳಿಸಿದ ಸಚಿನ್ ದಾಖಲೆ ರಚಿನ್ ಪಾಲಾಗಲಿದೆ.

6 / 8
4- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್​ನಲ್ಲಿ 503 ರನ್​ ಕಲೆಹಾಕಿದ್ದಾರೆ. ಇನ್ನು 171 ರನ್​ ಕಲೆಹಾಕಿದರೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು.

7 / 8
5- ಡೇವಿಡ್ ವಾರ್ನರ್: ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಒಟ್ಟು 499 ರನ್​ ಕಲೆಹಾಕಿದ್ದು, 175 ರನ್ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.

8 / 8
Follow us
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು

ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ

ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್

ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ

ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್

ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್

ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ

ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ

ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು

ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ