- Kannada News Photo gallery Cricket photos IND vs NZ Semi Final All eyes on red hot form batter Rachin Ravindra What is Rohit's master plan?
IND vs NZ, World Cup Semi Final: ರೆಡ್ ಹಾಟ್ ಫಾರ್ಮ್ನಲ್ಲಿರುವ ರಚಿನ್ ರವೀಂದ್ರ ಮೇಲೆ ಎಲ್ಲರ ಕಣ್ಣು: ರೋಹಿತ್ ಮಾಸ್ಟರ್ ಪ್ಲಾನ್ ಏನು?
Rachin Ravindra: ಭಾರತ-ಕಿವೀಸ್ ಲೀಗ್ ಹಂತದ ಪಂದ್ಯವನ್ನು ಗಮನಿಸಿದರೆ ಇಲ್ಲಿ ಡೆರಿಯಲ್ ಮಿಚೆಲ್ ಬಿಟ್ಟರೆ ಅಬ್ಬರಿಸಿದ್ದು ರಚಿನ್ ರವೀಂದ್ರ. ಕರ್ನಾಟಕ ಮೂಲದ ಈ ಯುವ ಬ್ಯಾಟರ್ ಭಾರತ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದಾರೆ. ಲೀಗ್ ಪಂದ್ಯದಲ್ಲಿ ರಚಿನ್ 87 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಿಡಿಸಿ 75 ರನ್ಗಳ ಕೊಡುಗೆ ಸಲ್ಲಿಸಿದ್ದರು.
Updated on: Nov 15, 2023 | 2:14 PM

ಭಾರತ ಹಾಗೂ ನ್ಯೂಝಿಲೆಂಡ್ ನಡುವಣ ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೇ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿದಿದ್ದಾರೆ.

ಇತ್ತ ನ್ಯೂಝಿಲೆಂಡ್ ತಂಡದಲ್ಲಿ ಕೂಡ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಭಾರತ-ಕಿವೀಸ್ ಲೀಗ್ ಹಂತದ ಪಂದ್ಯವನ್ನು ಗಮನಿಸಿದರೆ ಇಲ್ಲಿ ಡೆರಿಯಲ್ ಮಿಚೆಲ್ ಬಿಟ್ಟರೆ ಅಬ್ಬರಿಸಿದ್ದು ರಚಿನ್ ರವೀಂದ್ರ. ಕರ್ನಾಟಕ ಮೂಲದ ಈ ಯುವ ಬ್ಯಾಟರ್ ಭಾರತ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದಾರೆ.

ಲೀಗ್ ಪಂದ್ಯದಲ್ಲಿ ರಚಿನ್ 87 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಿಡಿಸಿ 75 ರನ್ಗಳ ಕೊಡುಗೆ ಸಲ್ಲಿಸಿದ್ದರು. ಹೀಗಾಗಿ ಇಂದು ಕೂಡ ರಚಿನ್ ಅಬ್ಬರಿಸುವ ಸಾಧ್ಯತೆ ಇದೆ. ಅಲ್ಲದೆ ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 70.62 ಸರಾಸರಿಯಲ್ಲಿ 565 ರನ್ ಗಳಿಸಿದ್ದಾರೆ.

ರೆಡ್ ಹಾಟ್ ಫಾರ್ಮ್ನಲ್ಲಿರುವ ರಚಿನ್ ಆಟಕ್ಕೆ ಬ್ರೇಕ್ ಹಾಕಲು ರೋಹಿತ್ ಏನು ಯೋಜನೆ ರೂಪಿಸುತ್ತಾರೆ ಎಂಬುದು ನೋಡಬೇಕಿದೆ. ಸ್ಪಿನ್ನರ್ಗಳಿಗೆ ರಚಿನ್ ಕೊಂಚ ತಡಕಾಡುತ್ತಾರೆ. ಹೀಗಾಗಿ ರೋಹಿತ್ ಆರಂಭದಲ್ಲೇ ಸ್ಪಿನ್ನರ್ಗಳನ್ನು ಕಣಕ್ಕಿಳಿಸಿದರೆ ಅಚ್ಚರಿ ಪಡಬೇಕಿಲ್ಲ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
