ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

| Updated By: ಝಾಹಿರ್ ಯೂಸುಫ್

Updated on: Sep 01, 2021 | 9:13 PM

Rahul dravid-Armaan Jaffer: ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸದಸ್ಯರಾಗಿದ್ದರು. ಆ ವೇಳೆ ತಂಡದ ಕೋಚ್ ಆಗಿದ್ದವರು ರಾಹುಲ್ ದ್ರಾವಿಡ್.

1 / 6
 ದಿ ಲೆಜೆಂಡ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಹಲವು ಆಟಗಾರರು ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇನ್ನು ಕೆಲವರು ಐಪಿಎಲ್​ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೋರ್ವ ಯುವ ಆಟಗಾರ ಕೂಡ ಸೇರ್ಪಡೆಯಾಗಿದ್ದಾರೆ. ಆತನ ಹೆಸರು ಅರ್ಮಾನ್ ಜಾಫರ್.

2 / 6
ಮಸ್ಕತ್​​ನಲ್ಲಿ ಓಮಾನ್ ಹಾಗೂ ಮುಂಬೈ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಭರ್ಜರಿ ಪ್ರದರ್ಶನ ನೀಡಿತು. ಆರಂಭದಲ್ಲೇ ಓಪನರ್ ಯಶಸ್ವಿ ಜೈಸ್ವಾಲ್ (27) ಮತ್ತು ಡ್ರೂ ಗೊಮೆಲ್ (05) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಯುವ ಬ್ಯಾಟ್ಸ್​ಮನ್ ಅರ್ಮಾನ್ ಜಾಫರ್ ಆಸರೆಯಾದರು. 22 ವರ್ಷದ ಬಲಗೈ ಬ್ಯಾಟ್ಸ್‌ಮನ್  ಓಮಾನ್ ಬೌಲರ್‌ಗಳನ್ನು ಅನಾಯಾಸವಾಗಿ ಎದುರಿಸಿದರು. ಅಲ್ಲದೆ ಚಿನ್ಮಯ್ ಸುತಾರ್ (37) ಜೊತೆಗೂಡಿ ಮೂರನೇ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡಿದರು. ಬಳಿಕ ಮತ್ತೋರ್ವ ಯುವ ಬ್ಯಾಟರ್ ಸುಜಿತ್ ನಾಯಕ್ ಜೊತೆ ಪಾಟರ್ನರ್​ಶಿಪ್ ಮುಂದುವರೆಸಿದ ಅರ್ಮಾನ್ 6ನೇ ವಿಕೆಟ್​ಗೆ 122 ರನ್​ ಕಲೆಹಾಕಿದರು.

3 / 6
114 ಎಸೆತಗಳನ್ನು ಎದುರಿಸಿದ ಅರ್ಮಾನ್ ಜಾಫರ್ 122 ರನ್ ಬಾರಿಸಿದರು. ಈ ಇನಿಂಗ್ಸ್​ನಲ್ಲಿ ಯುವ ಬ್ಯಾಟ್ಸ್​ಮನ್ ಬ್ಯಾಟ್​ನಿಂದ 11 ಬೌಂಡರಿ ಹಾಗೂ 3 ಸಿಕ್ಸರ್​ಗಳು ಮೂಡಿಬಂತು. ಮತ್ತೊಂದೆಡೆ ಸುಜಿತ್ ನಾಯಕ್ 70 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಪರಿಣಾಮ ನಿಗದಿತ 50 ಓವರ್​ನಲ್ಲಿ ಮುಂಬೈ ತಂಡದ ಮೊತ್ತವು 300ಕ್ಕೆ ಬಂದು ನಿಂತಿತು.

4 / 6
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಓಮಾನ್ ರಾಷ್ಟ್ರೀಯ ತಂಡವು ಕೇವಲ 69 ರನ್ ಗಳಿಗೆ ಆಲೌಟಾದರು. ಕೇವಲ 22.5 ಓವರ್‌ಗಳವರೆಗೆ ಮಾತ್ರ ಬ್ಯಾಟ್ ಬೀಸಿದ್ದ ಓಮಾನ್​ನ ತಂಡದ 9 ಆಟಗಾರರು ಎರಡಂಕಿಯ ಮೊತ್ತವನ್ನು ಸಹ ದಾಖಲಿಸಿಲ್ಲ ಎಂಬುದು ವಿಶೇಷ. ಇನ್ನು ಮುಂಬೈ ಪರ ಮೋಹಿತ್ ಅವಸ್ತಿ (31 ಕ್ಕೆ 4) ಮತ್ತು ದೀಪಕ್ ಶೆಟ್ಟಿ (2 ಕ್ಕೆ 9)  ವಿಕೆಟ್ ಉರುಳಿಸಿ ಮಿಂಚಿದರು.

5 / 6
ರಾಹುಲ್ ದ್ರಾವಿಡ್ ಶಿಷ್ಯ: ಅರ್ಮಾನ್ ಜಾಫರ್ 2016 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸದಸ್ಯರಾಗಿದ್ದರು. ಆ ವೇಳೆ ತಂಡದ ಕೋಚ್ ಆಗಿದ್ದವರು ರಾಹುಲ್ ದ್ರಾವಿಡ್. ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ್ದ ಯುವ ಆಟಗಾರ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೆ ರಾಹುಲ್ ದ್ರಾವಿಡ್ ಅವರ ಸಲಹೆಯಂತೆ ನಾನು ಆಟದಲ್ಲಿ ಶಿಸ್ತು ಹಾಗೂ ಕಲಾತ್ಮಕತೆಯನ್ನು ಕಂಡುಕೊಂಡಿದ್ದೇನೆ.

6 / 6
ನನ್ನೆಲ್ಲಾ ಪ್ರದರ್ಶನದ ಶ್ರೇಯಸ್ಸು ದ್ರಾವಿಡ್ ಅವರಿಗೆ ಸಲ್ಲುತ್ತದೆ ಎಂದು ಅರ್ಮಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಂದಹಾಗೆ ಅರ್ಮಾನ್ ಜಾಫರ್, ಟೀಮ್ ಇಂಡಿಯಾ ಮಾಜಿ ಆಟಗಾರ, ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಅವರ ಸೋದರಳಿಯ.