Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಗಳು ಯಾರು ಗೊತ್ತಾ?
TV9 Web | Updated By: ಪೃಥ್ವಿಶಂಕರ
Updated on:
Feb 17, 2022 | 10:48 PM
Ranji Trophy: ವಿನಯ್ ಕುಮಾರ್ ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಬೌಲರ್. ಈ ಟೂರ್ನಿಯಲ್ಲಿ 442 ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಣಜಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ.
1 / 5
ರಾಜಿಂದರ್ ಗೋಯಲ್ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಗೋಯಲ್ ತಮ್ಮ 26 ವರ್ಷಗಳ ವೃತ್ತಿ ಜೀವನದಲ್ಲಿ 637 ವಿಕೆಟ್ ಪಡೆದಿದ್ದಾರೆ. ರಾಜಿಂದರ್ ಪಟಿಯಾಲ, ದಕ್ಷಿಣ ಪಂಜಾಬ್, ದೆಹಲಿ ಮತ್ತು ಹರಿಯಾಣ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.
2 / 5
ಅನುಭವಿ ಬೌಲರ್ ಶ್ರೀನಿವಿಸಾರಾಘವನ್ ವೆಂಕರಾಘವನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮದ್ರಾಸ್/ಚೆನ್ನೈ ಪರ ಆಡಿದ ವೆಂಕರಾಘವನ್ 20 ವರ್ಷಗಳ ಈ ಟೂರ್ನಿಯಲ್ಲಿ 531 ವಿಕೆಟ್ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅದೇ ಯಶಸ್ಸನ್ನು ಪುನರಾವರ್ತಿಸಿದ ಅವರು ದಿಗ್ಗಜ ಬೌಲರ್‌ಗಳ ಸಾಲಿಗೆ ಸೇರಿದರು.
3 / 5
ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕರ್ನಾಟಕದ ಸುನಿಲ್ ಜೋಶಿ ಮೂರನೇ ಸ್ಥಾನದಲ್ಲಿದ್ದಾರೆ. 19 ವರ್ಷಗಳಿಂದ ಈ ಟೂರ್ನಿಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಸುನಿಲ್ ಜೋಶಿ 479 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ.
4 / 5
ವಿನಯ್ ಕುಮಾರ್ ಈ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಬೌಲರ್. ಈ ಟೂರ್ನಿಯಲ್ಲಿ 442 ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಣಜಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. ಅವರು ಮೊದಲು ಕರ್ನಾಟಕಕ್ಕಾಗಿ ಆಡುತ್ತಿದ್ದರು, ಆದರೆ ನಂತರ ಅವರು ಪುದುಚೇರಿಗಾಗಿ ಆಡಲು ಪ್ರಾರಂಭಿಸಿದರು.
5 / 5
ಅನುಭವಿ ಬೌಲರ್ ನರೇಂದ್ರ ಹಿರ್ವಾನಿ ಐದನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ನರೇಂದ್ರ ರಣಜಿಯಲ್ಲಿ 441 ವಿಕೆಟ್ ಪಡೆದಿದ್ದಾರೆ. ಅವರು ವಿನಯ್ ಕುಮಾರ್‌ಗೆ ಕೇವಲ ಒಂದು ವಿಕೆಟ್ ಹಿಂದಿದ್ದಾರೆ. ಮಧ್ಯಪ್ರದೇಶ ಹೊರತುಪಡಿಸಿ, ಅವರು ಬಂಗಾಳದ ಪರವಾಗಿ ಆಡಿದ್ದಾರೆ.