Ruturaj Gaikwad: 8 ಭರ್ಜರಿ ಸಿಕ್ಸ್, 24 ಫೋರ್: ರುತುರಾಜ್​ಗೆ ದ್ವಿಶತಕ ಜಸ್ಟ್ ಮಿಸ್

| Updated By: ಝಾಹಿರ್ ಯೂಸುಫ್

Updated on: Jan 11, 2023 | 8:30 PM

Ranji Trophy 2023: ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ರುತುರಾಜ್ ಗಾಯಕ್ವಾಡ್ ಕಳೆದ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 1263 ರನ್​ ಕಲೆಹಾಕಿದ್ದರು.

1 / 5
Ranji Trophy 2023: ದೇಶೀಯ ಅಂಗಳದಲ್ಲಿ ಯುವ ಬ್ಯಾಟ್ಸ್​ಮನ್ ರುತುರಾಜ್ ಗಾಯಕ್ವಾಡ್ ಭರ್ಜರಿ ಫಾರ್ಮ್​ ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಹಜಾರೆ ಟೂರ್ನಿಯಲ್ಲಿ ಶತಕದ ಮೇಲೆ ಶತಕ ಸಿಡಿಸಿ ಮಿಂಚಿದ್ದ ರುತುರಾಜ್ ಇದೀಗ ರಣಜಿ ಟೂರ್ನಿಯಲ್ಲೂ ತಮ್ಮ ಬ್ಯಾಟಿಂಗ್ ವೈಭವವನ್ನು ತೆರೆದಿಟ್ಟಿದ್ದಾರೆ.

2 / 5
ಗ್ರೂಪ್- ಬಿ ನಲ್ಲಿ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ತುಸು ಎಚ್ಚರಿಯಿಂದ ಬ್ಯಾಟ್ ಬೀಸಿದ್ದ ಯುವ ಆಟಗಾರ ಆ ಬಳಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಅದರಂತೆ 126 ಎಸೆತಗಳಲ್ಲಿ ಶತಕವನ್ನೂ ಕೂಡ ಪೂರೈಸಿದರು.

3 / 5
ಶತಕದ ಬಳಿಕ ಸ್ಪೋಟಕ ಆಟದತ್ತ ಮುಖ ಮಾಡಿದ ರುತುರಾಜ್ ತಮಿಳುನಾಡು ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಯುವ ಬಲಗೈ ದಾಂಡಿಗನ ಬ್ಯಾಟ್​ನಿಂದ 8 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳು ಮೂಡಿಬಂತು. ಅಷ್ಟೇ ಅಲ್ಲದೆ 183 ಎಸೆತಗಳಲ್ಲಿ 195 ರನ್ ಬಾರಿಸಿದರು.

4 / 5
ಈ ಹಂತದಲ್ಲಿ ಅಶ್ವಿನ್ ಕ್ರಿಸ್ಟ್ ಎಸೆತವನ್ನು ಗುರುತಿಸಲು ಎಡವಿದ ರುತುರಾಜ್ ಗಾಯಕ್ವಾಡ್ ವಿಕೆಟ್ ಕೀಪರ್ ಎನ್​. ಜಗದೀಸನ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಕೇವಲ 5 ರನ್​ಗಳಿಂದ ದ್ವಿಶತಕ ವಂಚಿತರಾದರು. ಇದಾಗ್ಯೂ ನಾಯಕನ ಭರ್ಜರಿ ಪ್ರದರ್ಶನದಿಂದಾಗಿ ಮಹಾರಾಷ್ಟ್ರ ತಂಡವು ಮೊದಲ ಇನಿಂಗ್ಸ್​ನಲ್ಲಿ 445 ರನ್​ ಕಲೆಹಾಕಿದೆ.

5 / 5
ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ರುತುರಾಜ್ ಗಾಯಕ್ವಾಡ್ ಕಳೆದ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 1263 ರನ್​ ಕಲೆಹಾಕಿದ್ದರು. ಅದು ಕೂಡ ಕೇವಲ 10 ಇನಿಂಗ್ಸ್​ಗಳಲ್ಲಿ ಎಂಬುದು ವಿಶೇಷ. ಈ 10 ಇನ್ನಿಂಗ್ಸ್‌ಗಳಲ್ಲಿ 8 ಶತಕ ಸಿಡಿಸಿ ದಾಖಲೆಯನ್ನೂ ಕೂಡ ಬರೆದಿದ್ದರು. ಇದೀಗ ರಣಜಿ ಟೂರ್ನಿಯಲ್ಲೂ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.