- Kannada News Photo gallery Cricket photos Dubai Capitals sign Dasun Shanaka for ILT20 Kannada News zp
ILT20: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ತಂಡಕ್ಕೆ ದಸುನ್ ಶಾನಕ ಆಯ್ಕೆ
Dubai Capitals: ದುಬೈ ಕ್ಯಾಪಿಟಲ್ಸ್ ತಂಡ ಹೀಗಿದೆ: ದಸುನ್ ಶಾನಕ, ರೋವ್ಮನ್ ಪೊವೆಲ್, ದುಷ್ಮಂತ ಚಮೀರಾ, ಹಜರತುಲ್ಲಾ ಝಝೈ, ಫ್ಯಾಬಿಯನ್ ಅಲೆನ್, ಮುಜೀಬ್ ಉರ್ ರೆಹಮಾನ್, ಸಿಕಂದರ್ ರಾಜಾ.
Updated on:Jan 11, 2023 | 10:00 PM

ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 13 ರಿಂದ ಯುಎಇನಲ್ಲಿ ಶುರುವಾಗಲಿರುವ ಈ ಟೂರ್ನಿಯಲ್ಲಿ ಶಾನಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕತ್ವದ ದುಬೈ ಕ್ಯಾಪಿಟಲ್ಸ್ ತಂಡದ ಪರ ಆಡಲಿರುವುದು ವಿಶೇಷ.

ಅಂದರೆ ಈ ಹಿಂದೆ ಐಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಶಾನಕ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಶಾನಕ, 33*(18) 45(27) 56*(22) ಹಾಗೂ ಅಜೇಯ 108 (88) ರನ್ ಬಾರಿಸಿದ್ದಾರೆ. ಈ ಮೂಲಕ ಬ್ಯಾಟ್ನಿಂದಲೇ ಐಪಿಎಲ್ ಫ್ರಾಂಚೈಸಿಗಳಿಗೆ ಉತ್ತರ ನೀಡಿದ್ದಾರೆ.

ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 13 ರಿಂದ ಯುಎಇನಲ್ಲಿ ಶುರುವಾಗಲಿರುವ ಈ ಟೂರ್ನಿಯಲ್ಲಿ ಶಾನಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕತ್ವದ ದುಬೈ ಕ್ಯಾಪಿಟಲ್ಸ್ ತಂಡದ ಪರ ಆಡಲಿರುವುದು ವಿಶೇಷ.

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಶಾನಕ ಅವರನ್ನು ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆ ಮಾಡಿರುವ ಕಾರಣ, ಮುಂಬರುವ ದಿನಗಳಲ್ಲಿ ಡೆಲ್ಲಿ ತಂಡದಿಂದ ವಿದೇಶಿ ಆಟಗಾರ ಹೊರಬಿದ್ದರೆ, ಶ್ರೀಲಂಕಾದ ಆಲ್ರೌಂಡರ್ನನ್ನು ಐಪಿಎಲ್ಗೆ ಕರೆಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

ಯುಎಇ ಟಿ20 ಲೀಗ್ನಲ್ಲಿ ಒಟ್ಟು 6 ತಂಡಗಳಿದ್ದು, ಅದರಲ್ಲಿ ಮೂರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ಮತ್ತೊಂದು ವಿಶೇಷ. ಅಂದರೆ ದುಬೈ ಕ್ಯಾಪಿಟಲ್ಸ್,ಅಬುಧಾಬಿ ನೈಟ್ ರೈಡರ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಾಲೀಕತ್ವದಲ್ಲಿದೆ. ಹೀಗಾಗಿ ಹೊಸ ಲೀಗ್ ಬಗ್ಗೆ ನಿರೀಕ್ಷೆಗಳು ಕೂಡ ಹೆಚ್ಚಾಗಿದೆ.

ದುಬೈ ಕ್ಯಾಪಿಟಲ್ಸ್ ತಂಡ ಹೀಗಿದೆ: ದಸುನ್ ಶಾನಕ, ರೋವ್ಮನ್ ಪೊವೆಲ್, ದುಷ್ಮಂತ ಚಮೀರಾ, ಹಜರತುಲ್ಲಾ ಝಝೈ, ಫ್ಯಾಬಿಯನ್ ಅಲೆನ್, ಮುಜೀಬ್ ಉರ್ ರೆಹಮಾನ್, ಸಿಕಂದರ್ ರಾಜಾ, ನಿರೋಶನ್ ಡಿಕ್ವೆಲ್ಲಾ, ಭಾನುಕಾ ರಾಜಪಕ್ಸೆ, ಡಾನ್ ಲಾರೆನ್ಸ್, ಬ್ಲೆಸ್ಸಿಂಗ್ ಮುಜರಬಾನಿ, ಇಸುರು ಉಡಾನ, ಜಾರ್ಜ್ ಮುನ್ಸಿ, ಫ್ರೆಡ್ ಕ್ಲಾಸ್ಸೆನ್, ಹಝ್ರತ್ ಲುಕ್ಮಾನ್, ಚಿರಾಗ್ ಸೂರಿ, ಜಶ್ ಗಿನ್ಯಾನಿ, ರಾಜಾ ಅಕಿಫ್ ಉಲ್ಲಾ ಖಾನ್, ರಾಬಿನ್ ಉತ್ತಪ್ಪ, ರವಿ ಬೋಪಾರ, ಯೂಸುಫ್ ಪಠಾಣ್, ಜೋ ರೂಟ್.
Published On - 9:24 pm, Wed, 11 January 23
