- Kannada News Photo gallery Cricket photos ICC ODI Rankings: Virat Kohli and Rohit Sharma Move Up Kannada News zp
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಮತ್ತೆ ಮುನ್ನುಗ್ಗಿದ ವಿರಾಟ್ ಕೊಹ್ಲಿ
ICC ODI Rankings: ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ ಟಾಪ್-5 ಯಿಂದ ಹೊರಬಿದ್ದಿದ್ದರು. ಇದೀಗ ಹೊಸ ವರ್ಷದ ಆರಂಭದಲ್ಲೇ ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿರುವುದು ವಿಶೇಷ.
Updated on:Jan 11, 2023 | 11:00 PM

ICC ODI Rankings: ಐಸಿಸಿ ನೂತನ ODI ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆದರೆ ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈ ಸಲ 2 ಸ್ಥಾನ ಜಿಗಿತ ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿರುವ ಕೊಹ್ಲಿ ಒಟ್ಟು 726 ಪಾಯಿಂಟ್ಸ್ ಕಲೆಹಾಕಿದ್ದಾರೆ. ಈ ಮೂಲಕ ಮತ್ತೆ ಟಾಪ್-5 ನತ್ತ ಮುಖ ಮಾಡಿದ್ದಾರೆ. ಅಂದರೆ ಕಳೆದ ವರ್ಷದಲ್ಲಿ ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ಮಹತ್ವದ ಬದಲಾವಣೆಗಳು ಆಗಿರಲಿಲ್ಲ. ಅದರಲ್ಲೂ ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ ಟಾಪ್-5 ಯಿಂದ ಹೊರಬಿದ್ದಿದ್ದರು. ಇದೀಗ ಹೊಸ ವರ್ಷದ ಆರಂಭದಲ್ಲೇ ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿರುವುದು ವಿಶೇಷ.

ಇನ್ನು ಈ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಹಿಟ್ಮ್ಯಾನ್ ಕಳೆದ ಬಾರಿಗಿಂತ ಒಂದು ಸ್ಥಾನ ಮೇಲೇರಿದ್ದಾರೆ. ಅದರಂತೆ ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ...

1- ಬಾಬರ್ ಆಜಂ (ಪಾಕಿಸ್ತಾನ್)- 891 ಅಂಕಗಳು

2- ರಸ್ಸಿ ವಂಡರ್ ಡುಸ್ಸೆನ್ (ಸೌತ್ ಆಫ್ರಿಕಾ)- 766 ಅಂಕಗಳು

3- ಇಮಾಮ್ ಉಲ್ ಹಕ್ (ಪಾಕಿಸ್ತಾನ್)- 764 ಅಂಕಗಳು

4- ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)- 759 ಅಂಕಗಳು

5- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 747 ಅಂಕಗಳು

6- ವಿರಾಟ್ ಕೊಹ್ಲಿ (ಭಾರತ)- 726 ಅಂಕಗಳು

7- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 719 ಅಂಕಗಳು

8- ರೋಹಿತ್ ಶರ್ಮಾ (ಭಾರತ)- 715 ಅಂಕಗಳು

9- ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)- 710 ಅಂಕಗಳು

10- ಫಖರ್ ಝಮಾನ್ (ಪಾಕಿಸ್ತಾನ್)- 695 ಅಂಕಗಳು
Published On - 10:59 pm, Wed, 11 January 23
