Ranji Trophy 2024: ರಣಜಿಯಲ್ಲೂ ಫ್ಲಾಪ್ ಶೋ ಮುಂದುವರೆಸಿದ ಶ್ರೇಯಸ್ ಅಯ್ಯರ್

|

Updated on: Mar 03, 2024 | 4:09 PM

Ranji Trophy 2024: ತಮಿಳುನಾಡು ಹಾಗೂ ಮುಂಬೈ ನಡುವೆ ರಣಜಿ ಸೆಮಿಫೈನಲ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಅಯ್ಯರ್ ಕೇವಲ 6 ಎಸೆತಗಳನ್ನು ಎದುರಿಸಿ 3 ರನ್​ಗಳಿಗೆ ಸಂದೀಪ್ ವಾರಿಯರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

1 / 6
ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವುದಲ್ಲದೆ, ಬಿಸಿಸಿಐ ವಾರ್ಷಿಕ ಒಪ್ಪಂದದಿಂದಲೂ ಹೊರಬಿದ್ದಿರುವ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಣಜಿಯಲ್ಲಿ ಮಿಂಚಿ ಮತ್ತೆ ಟೀಂ ಇಂಡಿಯಾ ಸೇರುವ ಗುರಿಯನ್ನು ಶ್ರೇಯಸ್ ಹೊಂದಿದ್ದಾರೆ.

2 / 6
ಆದರೆ ಆಡಿದ ಮೊದಲ ಪಂದ್ಯದಲ್ಲೇ ಶ್ರೇಯಸ್ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿ ದೇಶಿ ಟೂರ್ನಿಯಲ್ಲೂ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇದು ಅಯ್ಯರ್ ಮುಂದಿನ ಯೋಜನೆಗಳಿಗೆ ಪೆಟ್ಟು ನೀಡಿದೆ.

3 / 6
ವಾಸ್ತವವಾಗಿ ತಮಿಳುನಾಡು ಹಾಗೂ ಮುಂಬೈ ನಡುವೆ ರಣಜಿ ಸೆಮಿಫೈನಲ್‌ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಿದೆಯಾದರೂ ತಂಡದ ಪ್ರಮುಖ ಬ್ಯಾಟರ್​ಗಳು ಮತ್ತೊಮ್ಮೆ ಕೈಕೊಟ್ಟಿದ್ದಾರೆ. ಬೌಲಿಂಗ್ ಆಲ್​ರೌಂಡರ್ ಶಾರ್ದೂಲ್ ಠಾಕೂರ್ ಶತಕ ಸಿಡಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

4 / 6
ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಅಯ್ಯರ್ ಕೇವಲ 6 ಎಸೆತಗಳನ್ನು ಎದುರಿಸಿ 3 ರನ್​ಗಳಿಗೆ ಸಂದೀಪ್ ವಾರಿಯರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ರಣಜಿ ಟ್ರೋಫಿಯಲ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಅಯ್ಯರ್ ಬಿಸಿಸಿಐ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಆದರೆ ರಣಜಿ ಟ್ರೋಫಿಯಲ್ಲೂ ಅಯ್ಯರ್ ವಿಫಲರಾದರು.

5 / 6
ವಾಸ್ತವವಾಗಿ, ಇದಕ್ಕೂ ಮೊದಲು, ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದರು. ಆದರೆ ಒಂದು ಪಂದ್ಯ ಆಡಿದ ನಂತರ ಅಯ್ಯರ್ ಗಾಯಗೊಂಡರು. ನಂತರ ಎನ್​ಸಿಎನಲ್ಲಿ ಪರೀಕ್ಷೆಗೆ ಒಳಗಾದ ಅಯ್ಯರ್​ ಫಿಟ್ ಎಂದು ವರದಿ ನೀಡಲಾಗಿತ್ತು. ಅಲ್ಲದೆ ಅಯ್ಯರ್ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ಆದರೆ ಅಯ್ಯರ್ ತಾನೀನ್ನು ಫಿಟ್ ಆಗಿಲ್ಲ ಎಂದು ಹೇಳಿ ರಣಜಿಯಿಂದ ಹಿಂದೆ ಸರಿದಿದ್ದರು.

6 / 6
ಅಯ್ಯರ್ ಅವರ ಈ ನಡೆಯಿಂದ ಕೋಪಗೊಂಡ ಬಿಸಿಸಿಐ, ದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದ್ದಕ್ಕಾಗಿ ಶಿಕ್ಷೆಯಾಗಿ  ಹೊಸ ಕೇಂದ್ರ ಒಪ್ಪಂದದಿಂದ ಶ್ರೇಯಸ್ ಅವರನ್ನು ಹೊರಗಿಟ್ಟಿತು. ಇದಕ್ಕೆ ಇನ್ನೊಂದು ಕಾರಣವೂ ಇದ್ದು, ಇನ್ನು ಇಂಜುರಿಯಿಂದ ಚೇತರಿಸಿಕೊಂಡಿಲ್ಲ ಎಂದಿದ್ದ ಅಯ್ಯರ್, ತಮ್ಮ ಫಿಟ್‌ನೆಸ್ ಮತ್ತು ಆಟದ ನಿರ್ವಹಣೆಗಾಗಿ ಕೆಲಸ ಮಾಡಲು ಕೋಲ್ಕತ್ತಾ ನೈಟ್ ರೈಡರ್ಸ್‌ನ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಇದರ ನಂತರವೇ ಬಿಸಿಸಿಐ ತನ್ನ ಹೊಸ ಕೇಂದ್ರ ಒಪ್ಪಂದದಿಂದ ಅಯ್ಯರ್ ಅವರನ್ನು ಹೊರಗಿಟ್ಟಿತು.