R Ashwin: ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿ ರವಿಚಂದ್ರನ್ ಅಶ್ವಿನ್

|

Updated on: Sep 17, 2024 | 9:30 AM

Ravichandran Ashwin: ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯು ಗುರುವಾರದಿಂದ ಶುರುವಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಕಬಳಿಸಿದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಟೀಮ್ ಇಂಡಿಯಾ ಸ್ಪಿನ್ನರ್​ಗೆ ಬೇಕಿರುವುದು ಕೇವಲ 14 ವಿಕೆಟ್​ಗಳು ಮಾತ್ರ.

1 / 5
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆಯುವ ಅವಕಾಶ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂದಿದೆ. ಅದರಲ್ಲೂ ಈ ಸರಣಿಯ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಸ್​ನಲ್ಲಿ ಅತ್ಯಧಿಕ ವಿಕೆಟ್​ ಕಬಳಿಸಿ ಬೌಲರ್​ಗಳ ಪಟ್ಟಿಯಲ್ಲಿ ಅಶ್ವಿನ್​ ಅಗ್ರಸ್ಥಾನಕ್ಕೇರಬಹುದು.

2 / 5
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹೆಸರಿನಲ್ಲಿದೆ. 43 ಟೆಸ್ಟ್ ಪಂದ್ಯಗಳ 78 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಲಿಯಾನ್ ಈವರೆಗೆ 187 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ WTC ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

3 / 5
ಇದೀಗ ಈ ದಾಖಲೆ ಮುರಿಯಲು ರವಿಚಂದ್ರನ್ ಅಶ್ವಿನ್​ಗೆ ಬೇಕಿರುವುದು ಕೇವಲ 14 ವಿಕೆಟ್​ಗಳು ಮಾತ್ರ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಹದಿನಾಲ್ಕು ವಿಕೆಟ್ ಪಡೆದರೆ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್​ ಎನಿಸಿಕೊಳ್ಳಲಿದ್ದಾರೆ.

4 / 5
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಈವರೆಗೆ 35 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 67 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 7794 ಎಸೆತಗಳನ್ನು ಎಸೆದು 174 ವಿಕೆಟ್​ ಕಬಳಿಸಿದ್ದಾರೆ. ಅಂದರೆ WTC ನಲ್ಲಿ 200 ವಿಕೆಟ್​ಗಳ ಮೈಲುಗಲ್ಲು ಮುಟ್ಟಲು ಅಶ್ವಿನ್​ಗೆ ಬೇಕಿರುವುದು ಕೇವಲ 26 ವಿಕೆಟ್​ಗಳು ಮಾತ್ರ.

5 / 5
ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧದ 2 ಟೆಸ್ಟ್ ಪಂದ್ಯಗಳ 4 ಇನಿಂಗ್ಸ್​ಗಳಿಂದ ಒಟ್ಟು 26 ವಿಕೆಟ್ ಕಬಳಿಸಿದರೆ ರವಿಚಂದ್ರನ್ ಅಶ್ವಿನ್ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಲಿದೆ. ಹೀಗಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್​ ಕಡೆಯಿಂದ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.