12 ಸಾವಿರ ರನ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತವರಿನಲ್ಲಿ 12 ಸಾವಿರ ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 11 ರನ್ಗಳ ಅಗತ್ಯತೆಯಿದೆ. ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹನ್ನೊಂದು ಕಲೆಹಾಕಿದರೆ, ಈ ಸಾಧನೆ ಮಾಡಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಸಚಿನ್ ತೆಂಡೂಲ್ಕರ್ (14192), ರಿಕಿ ಪಾಂಟಿಂಗ್ (13117), ಜಾಕ್ಸ್ ಕಾಲಿಸ್ (12305) ಮತ್ತು ಕುಮಾರ ಸಂಗಕ್ಕಾರ (12043) ಮಾತ್ರ ಈ ಸಾಧನೆ ಮಾಡಿದ್ದಾರೆ.