Wayne Parnell: ಹೀನಾಯ ಸೋಲಿನ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ದ. ಆಫ್ರಿಕಾ ವೇಗಿ ವೇಯ್ನ್ ಪಾರ್ನೆಲ್ ಎಂಟ್ರಿ
RCB, IPL 2023: ಗಾಯದ ಸಮಸ್ಯೆಯಿಂದ ಐಪಿಎಲ್ 2023 ಟೂರ್ನಿಯಿಂದ ಹೊರಬಿದ್ದಿರುವ ಆರ್ಸಿಬಿ ವೇಗಿ ರಿಸೆ ಟೋಪ್ಲೆ ಜಾಗಕ್ಕೆ ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಲಾಗಿದೆ.
1 / 8
ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಜಯ ಸಾಧಿಸಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ದ್ವಿತೀಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತು. ಇದೀಗ ಈ ಸೋಲಿನ ಮಧ್ಯೆ ಆರ್ಸಿಬಿ ತಂಡಕ್ಕೆ ಹೊಸ ಆಟಗಾರನ ಎಂಟ್ರಿ ಆಗಿದೆ.
2 / 8
ಗಾಯದ ಸಮಸ್ಯೆಯಿಂದ ಐಪಿಎಲ್ 2023 ಟೂರ್ನಿಯಿಂದ ಹೊರಬಿದ್ದಿರುವ ಆರ್ಸಿಬಿ ವೇಗಿ ರಿಸೆ ಟೋಪ್ಲೆ ಜಾಗಕ್ಕೆ ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಆರ್ಸಿಬಿ ಖಚಿತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ವೇಯ್ನ್ ಪಾರ್ನೆಲ್ ಅವರು ಆರ್ಸಿಬಿ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.
3 / 8
ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಬೌಲರ್ ವೇಯ್ನ್ ಪಾರ್ನೆಲ್, 2009 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 56 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಅನುಭವ ಇವರಿಗಿದ್ದು 59 ವಿಕೆಟ್ ಕಿತ್ತಿದ್ದಾರೆ.
4 / 8
ಐಪಿಎಲ್ನಲ್ಲೂ ವೇಯ್ನ್ ಪಾರ್ನೆಲ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್, ಪುಣೆ ವಾರಿಯರ್ಸ್ ಪರ ಕಣಕ್ಕಿಳಿದಿದ್ದಾರೆ. 26 ಐಪಿಎಲ್ ಪಂದ್ಯಗಳನ್ನು ಆಡಿದ್ದು 26 ವಿಕೆಟ್ ಪಡೆದಿದ್ದಾರೆ. 27 ರನ್ ನೀಡಿ 3 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆ ಆಗಿದೆ.
5 / 8
ಟೂರ್ನಿಯಿಂದ ಹೊರಬಿದ್ದಿರುವ ಇಂಗ್ಲೆಂಡ್ ತಂಡದ ವೇಗಿ ರಿಸೆ ಟೋಪ್ಲೆಯನ್ನು ಆರ್ಸಿಬಿ ಐಪಿಎಲ್ 2023 ಮಿನಿ ಹರಾಜಿನಲ್ಲಿ 1.9 ಕೋಟಿಗೆ ಖರೀದಿಸಿತ್ತು. ಮುಂಬೈ ವಿರುದ್ಧದ ಪ್ರಥಮ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಿಸೆ ಬಲ ಭುಜದ ಗಾಯಕ್ಕೆ ತುತ್ತಾಗಿದ್ದು, ಸದ್ಯ ಅವರು ಬ್ರಿಟನ್ಗೆ ತಲುಪಿದ್ದಾರೆ.
6 / 8
ಈಗಾಗಲೇ ಆರ್ಸಿಬಿ ತಂಡ ಇಂಜುರಿಯಿಂದ ಬಳಲುತ್ತಿದೆ. ವಿಲ್ ಜಾಕ್ವೆಸ್ ಮತ್ತು ರಜತ್ ಪಟಿದಾರ್ ಗಾಯದ ಸಮಸ್ಯೆದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್ಸಿಬಿ ಒಟ್ಟು ಮೂವರು ಆಟಗಾರರನ್ನು ಕಳೆದುಕೊಂಡಿದೆ.
7 / 8
ಇನ್ನು ಆರ್ಸಿಬಿ ತಂಡದ ಪ್ರಮುಖ ಬೌಲಿಂಗ್ ಬಲವಾಗಿರುವ ಜೋಶ್ ಹ್ಯಾಜಲ್‌ವುಡ್ ಮತ್ತು ವನಿಂದು ಹಸರಂಗ ಕ್ರಮವಾಗಿ ಏಪ್ರಿಲ್ 10 ಮತ್ತು ಏಪ್ರಿಲ್ 15 ರಂದು ತಂಡವನ್ನು ಸೇರುವ ನಿರೀಕ್ಷೆಯಿದೆ.
8 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 10 ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.