- Kannada News Photo gallery Cricket photos ipl 2023 sunrisers hyderabad Most Expensive Player harry brook flop shows
LSG vs SRH: 13, 3.. 30 ನಿಮಿಷ; ಹೈದರಾಬಾದ್ಗೆ ದುಬಾರಿಯಾದ 13.25 ಕೋಟಿ ರೂ. ಪ್ಲೇಯರ್!
IPL 2023: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದ ಬ್ರೂಕ್, ಕೇವಲ 4 ಎಸೆತಗಳನ್ನು ಆಡಲು ಸಾಧ್ಯವಾಯಿತು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
Updated on:Apr 07, 2023 | 11:19 PM

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಎರಡನೇ ಪಂದ್ಯವನ್ನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಲಕ್ನೋ ಸ್ಪಿನ್ನರ್ಗಳ ಮ್ಯಾಜಿಕ್ಗೆ ಮಂಕಾದ ಹೈದರಾಬಾದ್ ಬ್ಯಾಟರ್ಗಳು ಕೇವಲ 121 ರನ್ ಗಳಿಸಲಷ್ಟೇ ಶಕ್ತರಾದರು. ಅದರಲ್ಲೂ ಫ್ರಾಂಚೈಸಿ ದುಬಾರಿ ಬೆಲೆ ಕೊಟ್ಟು ಖರೀದಿಸಿದ ಆಟಗಾರ ಎರಡೂ ಪಂದ್ಯದಲ್ಲೂ ರನ್ ಗಳಿಸದೇ ಇರುವುದು ಹೈದರಾಬಾದ್ಗೆ ದೊಡ್ಡ ತಲೆನೋವು ತಂದೊಡ್ಡಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 13.25 ಕೋಟಿ ನೀಡಿ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು ಖರೀದಿಸಿತ್ತು. ಆದರೆ ದುಬಾರಿ ಬೆಲೆ ಪಡೆದು ತಂಡ ಸೇರಿಕೊಂಡ ಬ್ರೂಕ್ ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದ ಬ್ರೂಕ್, ಕೇವಲ 4 ಎಸೆತಗಳನ್ನು ಆಡಲು ಸಾಧ್ಯವಾಯಿತು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 13 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಎರಡೂ ಪಂದ್ಯಗಳನ್ನು ಒಳಗೊಂಡಂತೆ ಅವರು ಅರ್ಧ ಗಂಟೆಯೂ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

ವಾಸ್ತವವಾಗಿ 1 ಕೋಟಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜಿಗೆ ಎಂಟ್ರಿಕೊಟ್ಟಿದ್ದ ಬ್ರೂಕ್ ಅವರನ್ನು ಫ್ರಾಂಚೈಸ್ 13.25 ಕೋಟಿಗಳಿಗೆ ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಬ್ರೂಕ್ ಅವರನ್ನು ಖರೀದಿಸಲು ಪ್ರಯತ್ನಿಸಿದ್ದವು.

ಹೈದರಾಬಾದ್ ಬ್ರೂಕ್ಗೆ ಇಷ್ಟೊಂದು ಹಣ ನೀಡಲು ಕಾರಣವೂ ಇದ್ದು, ಐಪಿಎಲ್ ಆಡುವ ಮೊದಲು ಬ್ರೂಕ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 2 ಟೆಸ್ಟ್‌ಗಳಲ್ಲಿ ಒಂದು ಶತಕ ಮತ್ತು 3 ಅರ್ಧ ಶತಕಗಳನ್ನು ಬಾರಿಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ವಿರುದ್ಧ ಬ್ರೂಕ್ ಅಬ್ಬರಿಸಿದ್ದರು. ಆದರೆ ಐಪಿಎಲ್‌ಗೆ ಬಂದ ತಕ್ಷಣ ಬ್ರೂಕ್ ಅವರ ಬ್ಯಾಟ್ ಸೈಲೆಂಟ್ ಆಗಿದೆ.
Published On - 11:17 pm, Fri, 7 April 23



















