RCB: ಸಂಕಷ್ಟದಲ್ಲಿರುವ ಆರ್​ಸಿಬಿಯ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

|

Updated on: May 07, 2023 | 10:28 AM

DC vs RCB, IPL 2023: ಆರ್​ಸಿಬಿ ಪ್ಲೇ ಆಫ್​ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್​ನಿಂದ ಗೆದ್ದು + ರನ್​ರೇಟ್​ಗೆ ಮರಳಬೇಕು. ಹಾಗಾದರೆ, ಬೆಂಗಳೂರಿನ ಮುಂದಿನ ಎದುರಾಳಿ ಯಾರು?.

1 / 7
ಎಂದಿನಿಂತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ ಸಂಕಷ್ಟದಲ್ಲಿದೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಆರ್​ಸಿಬಿಯ ಮುಂದಿನ ಹಾದಿ ದುರ್ಗಮವಾಗಿದೆ.

2 / 7
ಸದ್ಯ ಫಾಫ್ ಪಡೆ ಆಡಿರುವ ಹತ್ತು ಪಂದ್ಯಗಳಲ್ಲಿ ತಲಾ ಐದರಲ್ಲಿ ಗೆಲುವು, ಐದರಲ್ಲಿ ಸೋಲು ಕಂಡು ಒಟ್ಟು 10 ಅಂಕ ಸಂಪಾದಿಸಿ -0.209 ರನ್​ರೇಟ್ ಹೊಂದಿ ಐದನೇ ಸ್ಥಾನದಲ್ಲಿದೆ. ವಿಶೇಷ ಎಂದರೆ ಆರ್​ಸಿಬಿ ಜೊತೆ ಇತರೆ ಮೂರು ತಂಡ ಕೂಡ 10 ಅಂಕ ಹೊಂದಿ ಪೈಪೋಟಿ ನೀಡುತ್ತಿದೆ.

3 / 7
ಇದೀಗ ಆರ್​ಸಿಬಿ ಪ್ಲೇ ಆಫ್​ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್​ನಿಂದ ಗೆದ್ದು + ರನ್​ರೇಟ್​ಗೆ ಮರಳಬೇಕು. ಹಾಗಾದರೆ, ಬೆಂಗಳೂರಿನ ಮುಂದಿನ ಎದುರಾಳಿ ಯಾರು?.

4 / 7
ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ. 09 ಮಂಗಳವಾರದಂದು ಈ ಪಂದ್ಯ ನಡೆಯಲಿದೆ.

5 / 7
ಇದಾದ ಬಳಿಕ ಮೂರು ಪಂದ್ಯ ಆಡಲಿದೆ. ಮೇ. 14 ರಂದು ರಾಜಸ್ಥಾನ್ ರಾಯಲ್ಸ್, ಮೇ 18 ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೊನೆಯದಾಗಿ ಮೇ 21 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಕಾದಾಟ ನಡೆಸಲಿದೆ.

6 / 7
ಆರ್​ಸಿಬಿ ಜೊತೆ ರಾಜಸ್ಥಾನ್, ಮುಂಬೈ ಹಾಗೂ ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 10 ಅಂಕ ಸಂಪಾದಿಸಿದೆ. ಹೀಗಾಗಿ ಬೆಂಗಳೂರಿಗೆ ಕಠಿಣ ಪೈಪೋಟಿ ಇದೆ. ರನ್​ರೇಟ್ ಆಧಾರದ ಮೇಲೆ ಆರ್​ಆರ್​ 4ನೇ ಸ್ಥಾನದಲ್ಲಿದೆ, ಆರ್​ಸಿಬಿ 5, ಮುಂಬೈ ಮತ್ತು ಪಂಜಾಬ್ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿದೆ.

7 / 7
ಶನಿವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಕೊಹ್ಲಿ 55 ರನ್, ಲುಮ್ರೂರ್ ಅಜೇಯ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 16.4 ಓವರ್​ನಲ್ಲೇ 3 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿ ಗೆಲುವು ಕಂಡಿತು. ಪಿಲಿಪ್ ಸಾಲ್ಟ್ 87 ರನ್ ಚಚ್ಚಿದರು.