RCB vs CSK, IPL 2023: ಆರ್‌ಸಿಬಿ-ಸಿಎಸ್ಕೆ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ
Bangalore vs Chennai: ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಭರ್ಜರಿ ಆಟವಾಡಿತು. ರುತುರಾಜ್ ಗಾಯಕ್ವಾಡ್ ಬೇಗನೇ ಔಟಾದರೂ ಡೆವೋನ್ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್ ಮಾಡಿದರು. 37 ರನ್ ಸಿಡಿಸಿ ರಹಾನೆ ಔಟಾದರೆ, ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು.
1 / 8
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್ಕೆ 8 ವಿಕೆಟ್ಗಳ ರೋಚಕ ಜಯ ಸಾಧಿಸಿತು.
2 / 8
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಭರ್ಜರಿ ಆಟವಾಡಿತು. ರುತುರಾಜ್ ಗಾಯಕ್ವಾಡ್ ಬೇಗನೇ ಔಟಾದರೂ ಡೆವೋನ್ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್ ಮಾಡಿದರು. 37 ರನ್ ಸಿಡಿಸಿ ರಹಾನೆ ಔಟಾದರೆ, ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು.
3 / 8
ದುಬೆ 5 ಸಿಕ್ಸರ್ 2 ಬೌಂಡರಿ ಸಮೇತ 52 ರನ್ ಚಚ್ಚಿದರು. ಇತ್ತ ಆರ್‌ಸಿಬಿ ಬೌಲರ್ಗಳನ್ನು ಚೆಂಡಾಡಿದ ಕಾನ್ವೆ ಭರ್ಜರಿ ಅರ್ಧಶತಕ ಸಿಡಿಸಿದರು. ತಲಾ 6 ಬೌಂಡರಿ, ಸಿಕ್ಸರ್ಗಳಿಂದ 83 ರನ್ ಗಳಿಸಿದರು.
4 / 8
ಡೆತ್ ಓವರ್ನಲ್ಲಿ ಅಂಡಿ ರಾಯುಡು (14), ಮೊಯಿನ್ ಅಲಿ (19), ರವೀಂದ್ರ ಜಡೇಜಾ (10) ರನ್ ಕಾಣಿಕೆ ನೀಡಿದರು. ಚೆನ್ನೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಎಲ್ಲರು 1 ವಿಕೆಟ್ ಪಡೆದರು.
5 / 8
ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ವಿರಾಟ್ ಕೊಹ್ಲಿ (6) ಮತ್ತು ಮಹಿಪಾಲ್ ಲೊನ್ರೋರ್ (0) ಅವರನ್ನು 15 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತು. ಈ ಸಂದರ್ಭ ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಆಧಾರವಾದರು.
6 / 8
3ನೇ ವಿಕೆಟಿಗೆ ಈ ಜೋಡಿ 61 ಎಸೆತಗಳಿಂದ 126 ರನ್ ಕಲೆಹಾಕಿತು. ಮ್ಯಾಕ್ಸ್‌ವೆಲ್ 36 ಎಸೆತಗಳಿಂದ 76 ರನ್ ಚಚ್ಚಿದರು. 4 ಬೌಂಡರಿ, 8 ಸಿಕ್ಸರ್ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.
7 / 8
ಡುಪ್ಲೆಸಿಸ್ 33 ಎಸೆತಗಳಿಂದ 62 ರನ್ ಬಾರಿಸಿದರು (5 ಬೌಂಡರಿ, 4 ಸಿಕ್ಸರ್). ಇಲ್ಲಿಂದ ಆರ್‌ಸಿಬಿ ಗೆಲುವಿನ ಸಾಧ್ಯತೆ ಕಡಿಮೆಗೊಂಡಿತು. ಶಹಬಾಜ್ ಅಹ್ಮದ್ 12, ದಿನೇಶ್ ಕಾರ್ತಿಕ್ 28, ಇಂಪ್ಯಾಕ್ಟ್ ಪ್ಲೇಯರ್ ಸುಯಾಶ್ ಪ್ರಭುದೇಸಾಯಿ 19 ರನ್ಗಳ ಹೋರಾಟ ಗೆಲುವಿಗೆ ಸಾಕಾಗಲಿಲ್ಲ.
8 / 8
ಪಂದ್ಯ ಮುಗಿದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ.
Published On - 11:53 am, Tue, 18 April 23