IPL 2023: RCB vs CSK ಪಂದ್ಯದಲ್ಲಿ ಸಿಡಿದ ಸಿಕ್ಸ್​ಗಳು ಎಷ್ಟು ಗೊತ್ತಾ?

IPL 2023 Kannada: ಆರಂಭದಿಂದಲೇ ಅಬ್ಬರಿಸಿದ ಕಾನ್ವೆ 45 ಎಸೆತಗಳಲ್ಲಿ 83 ರನ್​ ಬಾರಿಸಿದರು. ಈ ವೇಳೆ ಡೆವೊನ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 6 ಭರ್ಜರಿ ಸಿಕ್ಸರ್​ಗಳು ಹಾಗೂ 6 ಫೋರ್​ಗಳು.

| Updated By: ಝಾಹಿರ್ ಯೂಸುಫ್

Updated on: Apr 17, 2023 | 11:15 PM

IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಣ ಪಂದ್ಯದಲ್ಲಿ ಸಿಕ್ಸ್​ಗಳ ಸುರಿಮಳೆಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸಿಎಸ್​ಕೆ ಪರ ಡೆವೊನ್ ಕಾನ್ವೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

1 / 11
ಆರಂಭದಿಂದಲೇ ಅಬ್ಬರಿಸಿದ ಕಾನ್ವೆ 45 ಎಸೆತಗಳಲ್ಲಿ 83 ರನ್​ ಬಾರಿಸಿದರು. ಈ ವೇಳೆ ಡೆವೊನ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 6 ಭರ್ಜರಿ ಸಿಕ್ಸರ್​ಗಳು ಹಾಗೂ 6 ಫೋರ್​ಗಳು.

2 / 11
ಇದಾದ ಬಳಿಕ ಶಿವಂ ದುಬೆ 27 ಎಸೆತಗಳಲ್ಲಿ 5 ಸಿಕ್ಸ್​, 2 ಫೋರ್​ನೊಂದಿಗೆ 52 ರನ್ ಬಾರಿಸಿದರು. ಹಾಗೆಯೇ ಅಜಿಂಕ್ಯ ರಹಾನೆ ಕೂಡ 2 ಸಿಕ್ಸ್​ನೊಂದಿಗೆ 37 ರನ್ ಚಚ್ಚಿದರು.

3 / 11
ಇನ್ನು ಮೊಯೀನ್ ಅಲಿ 2 ಸಿಕ್ಸ್ ಬಾರಿಸಿದರೆ, ರವೀಂದ್ರ ಜಡೇಜಾ ಹಾಗೂ ಅಂಬಾಟಿ ರಾಯುಡು ತಲಾ ಒಂದೊಂದು ಸಿಕ್ಸ್ ಸಿಡಿಸಿದರು. ಇದರೊಂದಿಗೆ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್​ ಕಲೆಹಾಕಿತು.

4 / 11
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನಿಂಗ್ಸ್​ನಲ್ಲಿ ಮೂಡಿಬಂದಿರುವುದು ಬರೋಬ್ಬರಿ 17 ಸಿಕ್ಸ್​ಗಳು. ಅದರಂತೆ ಸಿಎಸ್​ಕೆ ಇನಿಂಗ್ಸ್​ನಲ್ಲಿ ಸಿಕ್ಸ್​ಗಳ ಮೂಲಕವೇ 102 ರನ್​ಗಳು ಮೂಡಿಬಂದಿತ್ತು.

5 / 11
ಇನ್ನು 226 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

6 / 11
ಅದರಲ್ಲೂ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರದ ಮುಂದೆ ಸಿಎಸ್​ಕೆ ಬೌಲರ್​ಗಳು ಮಂಕಾದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್​ಗಳ ಸುರಿಮಳೆಗೈದ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ 8 ಭರ್ಜರಿ ಸಿಕ್ಸ್​ ಹಾಗೂ 3 ಫೋರ್​ಗಳು ಮೂಡಿಬಂತು. ಅಲ್ಲದೆ 36 ಎಸೆತಗಳಲ್ಲಿ 76 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

7 / 11
ಮ್ಯಾಕ್ಸ್​ವೆಲ್ ಔಟಾದ ಬೆನ್ನಲ್ಲೇ 33 ಎಸೆತಗಳಲ್ಲಿ 4 ಸಿಕ್ಸ್​ ಹಾಗೂ 5 ಫೋರ್​ನೊಂದಿಗೆ 62 ರನ್​ ಬಾರಿಸಿದ ಫಾಫ್ ಡುಪ್ಲೆಸಿಸ್ ಕೂಡ ನಿರ್ಗಮಿಸಿದರು.

8 / 11
ಆ ಬಳಿಕ ಬಂದ ದಿನೇಶ್ ಕಾರ್ತಿಕ್ 1 ಸಿಕ್ಸ್​ನೊಂದಿಗೆ 28 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಹಾಗೆಯೇ ಶಹಬಾಝ್ ಅಹ್ಮದ್ ಕೂಡ 1 ಸಿಕ್ಸ್ ಬಾರಿಸಿ ನಿರ್ಗಮಿಸಿದರು.

9 / 11
ಕೊನೆಯ 2 ಓವರ್​ಗಳಲ್ಲಿ ಆರ್​ಸಿಬಿ ತಂಡಕ್ಕೆ ಗೆಲ್ಲಲು 31 ರನ್​ಗಳ ಅವಶ್ಯಕತೆಯಿತ್ತು. ಈ ಹಂತದ ಸುಯಶ್ ಪ್ರಭುದೇಸಾಯಿ 1 ಸಿಕ್ಸ್ ಬಾರಿಸಿದರು. ಅಲ್ಲದೆ ಕೊನೆಯ ಓವರ್​ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಅಂತಿಮವಾಗಿ ಸಿಎಸ್​ಕೆ ತಂಡವು 8 ರನ್​ಗಳಿಂದ ರೋಚಕ ಜಯ ಸಾಧಿಸಿತು.

10 / 11
ಅಂದರೆ ಈ ಪಂದ್ಯದಲ್ಲಿ ಸಿಎಸ್​ಕೆ ತಂಡವು 17 ಸಿಕ್ಸ್​​ಗಳನ್ನು ಬಾರಿಸಿದರೆ, ಆರ್​ಸಿಬಿ ತಂಡ 16 ಸಿಕ್ಸ್​ಗಳನ್ನು ಸಿಡಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲೇ ಬರೋಬ್ಬರಿ 33 ಸಿಕ್ಸ್​ಗಳು ಮೂಡಿಬಂದಿದ್ದವು.

11 / 11
Follow us