IPL 2026: ಈ ಬಾರಿಯ ಐಪಿಎಲ್​ನಲ್ಲಿ RCBಗೆ ‘ಗೋಲ್ಡನ್’ ಗೌರವ!

Updated on: Mar 16, 2026 | 9:00 AM

IPL 2026: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸದ್ಯಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಂತೆ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.

1 / 5
IPL 2026: ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ತನ್ನ ಜೆರ್ಸಿಯ ಮೇಲೆ ಚಿನ್ನದ ಬಣ್ಣದ ಐಪಿಎಲ್ ಲೋಗೋ (Golden IPL Logo) ಧರಿಸಲಿದೆ. ಇನ್ನುಳಿದ 9 ತಂಡಗಳು ಸಾಧಾರಣ ಐಪಿಎಲ್ ಲೋಗೋನಲ್ಲಿ ಕಾಣಿಸಿಕೊಳ್ಳಲಿದೆ.

IPL 2026: ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ತನ್ನ ಜೆರ್ಸಿಯ ಮೇಲೆ ಚಿನ್ನದ ಬಣ್ಣದ ಐಪಿಎಲ್ ಲೋಗೋ (Golden IPL Logo) ಧರಿಸಲಿದೆ. ಇನ್ನುಳಿದ 9 ತಂಡಗಳು ಸಾಧಾರಣ ಐಪಿಎಲ್ ಲೋಗೋನಲ್ಲಿ ಕಾಣಿಸಿಕೊಳ್ಳಲಿದೆ.

2 / 5

ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ತಂಡವನ್ನು ಗೌರವಿಸಲು ಈ ವಿಶೇಷ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಅದರಂತೆ ಕಳೆದ ಬಾರಿಯ ಚಾಂಪಿಯನ್ ಆರ್​ಸಿಬಿ ತಂಡವು ಈ ಬಾರಿ ಗೋಲ್ಡನ್ ಐಪಿಎಲ್ ಲೋಗೋದೊಂದಿಗೆ ಕಣಕ್ಕಿಳಿಯಲಿದೆ.

3 / 5

ಹಾಗೆಯೇ ಈ ಬಾರಿಯ ಆರ್​ಸಿಬಿ ತಂಡದ ಜೆರ್ಸಿ ಮೇಲೆ ಒಂದು ಚಿನ್ನದ ನಕ್ಷತ್ರವಿರಲಿದ್ದು, ಇದು ತಂಡದ ಮೊದಲ ಐಪಿಎಲ್ ಟ್ರೋಫಿ ಗೆಲುವನ್ನು ಸೂಚಿಸುತ್ತದೆ. ಅಂದರೆ ಇದೇ ಮೊದಲ ಬಾರಿಗೆ ಆರ್​ಸಿಬಿ ಸ್ಟಾರ್ ಹಾಗೂ ಚಾಂಪಿಯನ್ ಬ್ಯಾಡ್ಜ್​ನೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ.

4 / 5

ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತ್ತು. ಈ ಐತಿಹಾಸಿಕ ಗೆಲುವಿನ ಸಂಭ್ರಮದ ಭಾಗವಾಗಿ ಈ 'ಗೋಲ್ಡನ್ ಜೆರ್ಸಿ' ವಿನ್ಯಾಸಗೊಳಿಸಲಾಗಿದೆ.

5 / 5

ಇನ್ನು 2026ರ ಐಪಿಎಲ್ (IPL 2026) ಮಾರ್ಚ್ 28, 2026 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.

Loading...
Unable to load recommendations.
Follow Us