IPLನಲ್ಲಿ ಚಾನ್ಸ್​ ಸಿಗುತ್ತಿದಂತೆ CPLನಲ್ಲಿ ಅಬ್ಬರಿಸಿದ RCB ಆಟಗಾರ

| Updated By: ಝಾಹಿರ್ ಯೂಸುಫ್

Updated on: Aug 29, 2021 | 2:46 PM

RCB’s Tim David: ಇತ್ತೀಚೆಗೆ ನಡೆದ ಇಂಗ್ಲೆಂಡ್​ನಲ್ಲಿ ನಡೆದ ಲಂಡನ್ ರಾಯಲ್ ಕಪ್​ ಪಂದ್ಯದಲ್ಲಿ ಸರ್ರೆ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಕೇವಲ 70 ಎಸೆತಗಳಲ್ಲಿ 140 ರನ್ ಚಚ್ಚಿದ್ದರು.

1 / 6
 ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿದೆ. ಇನ್ನು ಕೆಲ ಆಟಗಾರರು ರಾಷ್ಟ್ರೀಯ ತಂಡಗಳಲ್ಲಿ ಕಾಣಿಸಿಕೊಂಡಿದ್ದು, ಇನ್ನು ಕೆಲವರು ಕೆಲ ಲೀಗ್​ನಲ್ಲಿ ಆಟ ಮುಂದುವರೆಸಿದ್ದಾರೆ.

2 / 6
ಇತ್ತೀಚೆಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದ ಸಿಂಗಪೂರ್ ಕ್ರಿಕೆಟಿಗ ಟಿಮ್ ಡೇವಿಡ್ ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತ ಐಪಿಎಲ್​ನಲ್ಲಿ ಅವಕಾಶ ಸಿಗುತ್ತಿದ್ದಂತೆ ಟಿಮ್ ಡೇವಿಡ್ ಸಿಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

3 / 6
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್​ಗೆ ತಮ್ಮ ಆಗಮನವನ್ನು ಸಾರಿದ್ದಾರೆ. ಸಿಪಿಎಲ್‌ನ ಮೂರನೇ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ನೀಡಿದ 255 ರನ್​ಗಳ ಟಾರ್ಗೆಟ್​ ಅನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಆಸರೆಯಾಗಿದ್ದು ಯುವ ಬ್ಯಾಟ್ಸ್​ಮನ್ ಟಿಮ್ ಡೇವಿಡ್. ಕೇವಲ 28 ಎಸೆತಗಳನ್ನು ಎದುರಿಸಿದ ಡೇವಿಡ್ ಬಿರುಸಿನ 56 ರನ್ ಬಾರಿಸಿದ್ದರು. ಇದರಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್​ಗಳು ಒಳಗೊಂಡಿತ್ತು ಎಂಬುದು ವಿಶೇಷ. ಇದಾಗ್ಯೂ ಸೆಂಟ್ ಲೂಸಿಯಾ ಕಿಂಗ್ಸ್​ ತಂಡವು ಜಮೈಕಾ ವಿರುದ್ದ 125 ರನ್​ಗಳಿಂದ ಸೋಲನುಭವಿಸಿತು.

4 / 6
ಸಿಂಗಾಪೂರ್ ಪರ 14 ಟಿ20 ಪಂದ್ಯವನ್ನಾಡಿರುವ ಟಿಮ್ ಡೇವಿಡ್ 4 ಅರ್ಧಶತಕದೊಂದಿಗೆ 558 ರನ್ ಕಲೆಹಾಕಿದ್ದಾರೆ. ಈ ವೇಳೆ 50 ಫೋರ್, 26 ಸಿಕ್ಸ್ ಸಿಡಿಸುವ ಮೂಲಕ ತಮ್ಮ ಬಿರುಸಿನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದರು. ಇನ್ನು ಲೀಸ್ಟ್ ಎ ಟಿ20 ಕ್ರಿಕೆಟ್​ನಲ್ಲಿ 49 ಪಂದ್ಯಗಳಿಂದ 1171 ರನ್ ಬಾರಿಸಿದ್ದಾರೆ.

5 / 6
 ಇತ್ತೀಚೆಗೆ ನಡೆದ ಇಂಗ್ಲೆಂಡ್​ನಲ್ಲಿ ನಡೆದ ಲಂಡನ್ ರಾಯಲ್ ಕಪ್​ ಪಂದ್ಯದಲ್ಲಿ ಸರ್ರೆ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಕೇವಲ 70 ಎಸೆತಗಳಲ್ಲಿ 140 ರನ್ ಚಚ್ಚಿದ್ದರು. ಈ ವೇಳೆ 11 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿದ್ದರು.

6 / 6
ಇನ್ನು ಪಾಕಿಸ್ತಾನ್ ಸೂಪರ್​ ಲೀಗ್​ನಲ್ಲೂ ಟಿಮ್ ಡೇವಿಡ್ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಇದೀಗ ಸಿಪಿಎಲ್​ನಲ್ಲೂ ಅಬ್ಬರಿಸುವ ಮೂಲಕ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದಾರೆ ಟಿಮ್ ಡೇವಿಡ್.

Published On - 5:07 pm, Sat, 28 August 21