Virat Kohli: ಸೋತರೂ ಅಭಿಮಾನಿಗಳನ್ನು ರಂಜಿಸಿದ ವಿರಾಟ್ ಶತಕ: ಕೊಹ್ಲಿಯಿಂದ ದಾಖಲೆಯ ಸೆಂಚುರಿ

|

Updated on: May 22, 2023 | 7:59 AM

GT vs RCB, IPL 2023: ಗುಜರಾತ್ ವಿರುದ್ಧ ಒಂದೆಡೆ ವಿಕೆಟ್​​ ಉರುಳುತ್ತಿದ್ದರೆ ಅತ್ತ ವಿರಾಟ್​ ಕೊಹ್ಲಿ ಏಕಾಂಗಿಯಾಗಿ ಇನ್ನಿಂಗ್ಸ್​​ ಕಟ್ಟಿ ತಮ್ಮ ಅದ್ಭುತ ಸ್ಟೈಲಿಶ್ ಹೊಡೆತಗಳ ಮೂಲಕ ಗಮನ ಸೆಳೆದರು. ಜೊತೆಗೆ ಹಲವು ದಾಖಲೆಗಳನ್ನು ಕೂಡ ನಿರ್ಮಾಣ ಮಾಡಿದರು.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಕೂಡ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಾಣುವ ಮೂಲಕ ಐಪಿಎಲ್ 2023 ರಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು.

2 / 7
ಆದರೆ, ಆರ್​ಸಿಬಿ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಮೊದಲ ಓವರ್​ನಿಂದ ಕೊನೆಯ ಓವರ್ ವರೆಗೂ ಕ್ರೀಸ್​ನಲ್ಲೇ ಇದ್ದ ಕೊಹ್ಲಿ 61 ಎಸೆತಗಳಲ್ಲಿ 13 ಫೋರ್, 1 ಸಿಕ್ಸರ್​ನೊಂದಿಗೆ ಅಜೇಯ 101 ರನ್ ಚಚ್ಚಿದರು.

3 / 7
ಒಂದೆಡೆ ವಿಕೆಟ್​​ ಉರುಳುತ್ತಿದ್ದರೆ ಅತ್ತ ವಿರಾಟ್​ ಕೊಹ್ಲಿ ಏಕಾಂಗಿಯಾಗಿ ಇನ್ನಿಂಗ್ಸ್​​ ಕಟ್ಟಿ ತಮ್ಮ ಅದ್ಭುತ ಸ್ಟೈಲಿಶ್ ಹೊಡೆತಗಳ ಮೂಲಕ ಗಮನ ಸೆಳೆದರು. ಜೊತೆಗೆ ಹಲವು ದಾಖಲೆಗಳನ್ನು ಕೂಡ ನಿರ್ಮಾಣ ಮಾಡಿದರು.

4 / 7
ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನಲ್ಲಿ ಎರಡನೇ ಶತಕಗಳಿಸುವುದರೊಂದಿಗೆ ಐಪಿಎಲ್​​ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎನ್ನಿಸಿಕೊಂಡರು.

5 / 7
ಇದು ಕೊಹ್ಲಿಯ 7ನೇ ಶತಕ. ಕಳೆದ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಶತಕ ಬಾರಿಸಿ ಕ್ರಿಸ್​ ಗೇಲ್​ ಜತೆ ಜಂಟಿ ದಾಖಲೆ ಹೊಂದಿದ್ದರು. ಗೇಲ್​ ಅವರು 6 ಐಪಿಎಲ್​ ಶತಕ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರಾಜಸ್ಥಾನ್​ ತಂಡದ ಆಟಗಾರ ಜಾಸ್​ ಬಟ್ಲರ್​ (5 ಶತಕ) ಅವರು ಕಾಣಿಸಿಕೊಂಡಿದ್ದಾರೆ.

6 / 7
ಆರ್​ಸಿಬಿ ಪರ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಅಂತೆಯೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರ ಕೊಹ್ಲಿ ಆಗಿದ್ದಾರೆ.

7 / 7
ಇವುಗಳ ಜೊತೆಗೆ ಐಪಿಎಲ್​ ಇತಿಹಾಸದಲ್ಲೇ ಒಂದರ ಹಿಂದೆ ಒಂದರಂತೆ ಸತತ 2 ಶತಕ ಬಾರಿಸಿದ ಮೂರನೇ ಬ್ಯಾಟರ್ ಕೊಹ್ಲಿ ಆಗಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ (2021) ಹಾಗೂ ಜೋಸ್ ಬಟ್ಲರ್ (2022) ಮಾತ್ರ ಈ ಸಾಧನೆ ಗೈದಿದ್ದರು.