Updated on:May 21, 2023 | 10:10 PM
ಕ್ಯಾನ್ಸರ್ ಪೀಡಿತರಿಗೆ ವಿಶ್ರಾಂತಿ ಮತ್ತು ಮನೋರಂಜನೆ ಕಲ್ಪಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯಾವಳಿ ವೀಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡಲಾಯಿತು.
ವೈದ್ಯಕೀಯ ಸೇವೆಗೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜತೆಗೆ ಆಸ್ಪತ್ರೆ ಒಪ್ಪಂದ ಮಾಡಿಕೊಂಡು, 20 ಕ್ಯಾನ್ಸರ್ ಪೀಡಿತರಿಗೆ ಪಂದ್ಯ ವೀಕ್ಷಣೆಗೆ ಅಸ್ಪತ್ರೆ ಅವಕಾಶ ಕಲ್ಪಿಸಲಿದೆ.
ಕ್ಯಾನ್ಸರ್ ಪೀಡಿತರಿಗೆ ವಿಶ್ರಾಂತಿ ಮತ್ತು ಮನೋರಂಜನೆ ಕಲ್ಪಿಸುವುದು ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ.
ಕ್ರೀಡಾಂಗಣಕ್ಕೆ ತೆರಳುವ ಮೊದಲು ರೋಗಿಗಳ ಆರೋಗ್ಯದ ಸಮಗ್ರ ತಪಾಸಣೆ ಮಾಡಿಕೊಂಡಿದೆ. ಪಂದ್ಯ ವೀಕ್ಷಣೆಗೂ ಮುನ್ನ ಈಸಲ ಕಪ್ ನಮ್ದೆ ಎಂದು ಹೇಳಿದ್ದಾರೆ.
ಇದಲ್ಲದೆ, 20 ಕ್ಯಾನ್ಸರ್ ರೋಗಿಗಳೊಂದಿಗೆ ವೈದ್ಯಕೀಯ ತಂಡವು ಇದ್ದು ನಿಗಾ ಇರಿಸಲಿದೆ ಎಂದು ಆಸ್ಪತ್ರೆ ತಿಳಿಸಿದೆ.
Published On - 10:10 pm, Sun, 21 May 23