
ವಿಜಯ್ ಹಜಾರೆ ಟ್ರೋಫಿಯಲ್ಲಿ ರಿಂಕು ಸಿಂಗ್ ಅವರ ಅದ್ಭುತ ಪ್ರದರ್ಶನ ಸತತ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ. ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದರ ಬಗ್ಗೆ ಅನುಮಾನದಲ್ಲಿದ್ದ ರಿಂಕು ತಮ್ಮ ಅಮೋಘ ಪ್ರದರ್ಶನದ ಮೂಲಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಆಡುತ್ತಿರುವ ರಿಂಕು ಸಿಂಗ್ ಅವರನ್ನು ರನ್ ಮೆಷಿನ್ ಎಂದು ಕರೆದರೆ ತಪ್ಪಾಗಲಾರದು. ಡಿಸೆಂಬರ್ 29 ರಂದು ಬರೋಡಾ ವಿರುದ್ಧ ನಡೆದ ಪಂದ್ಯದಲ್ಲಿ ರಿಂಕು ಸಿಂಗ್ 67 ಎಸೆತಗಳಲ್ಲಿ 63 ರನ್ಗಳ ಇನ್ನಿಂಗ್ಸ್ ಆಡಿದರು ಇದರಲ್ಲಿ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳು ಸೇರಿವೆ.

53 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಂಕು ಸಿಂಗ್ಗೆ ಇದು ಟೂರ್ನಿಯಲ್ಲಿ ಸತತ ಮೂರನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಈ ಹಿಂದೆ ಅವರು ಡಿಸೆಂಬರ್ 26 ರಂದು ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಅಜೇಯ 106 ರನ್ ಗಳಿಸಿದ್ದರು. ಅದಕ್ಕೂ ಮೊದಲು ಡಿಸೆಂಬರ್ 24 ರಂದು ನಡೆದಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ರಿಂಕು ಬ್ಯಾಟ್ 67 ರನ್ ಗಳಿಸಿತ್ತು.

2026 ರ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾಗೆ ಆಯ್ಕೆಯಾದಾಗಿನಿಂದ ರಿಂಕು ಸಿಂಗ್ ವಿಜಯ್ ಹಜಾರೆ ಟ್ರೋಫಿಯಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ರಿಂಕು ಸಿಂಗ್ ಇದುವರೆಗೆ ಮೂರು ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 236 ರನ್ ಗಳಿಸಿದ್ದಾರೆ. ಇದರರ್ಥ ನಾಯಕನಾಗಿ ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ.

ಬರೋಡಾ ವಿರುದ್ಧದ ಸ್ಫೋಟಕ ಇನ್ನಿಂಗ್ಸ್‌ನಲ್ಲಿ, ರಿಂಕು ಸಿಂಗ್ ಹಾರ್ದಿಕ್ ಪಾಂಡ್ಯ ಅವರ ಅಣ್ಣ ಕೃನಾಲ್ ಪಾಂಡ್ಯ ಸೇರಿದಂತೆ ಆರು ಬೌಲರ್‌ಗಳನ್ನು ಎದುರಿಸಿದರು. ಕೃಣಾಲ್ ಪಾಂಡ್ಯ ಎಸೆದ 19 ಎಸೆತಗಳಲ್ಲಿ ರಿಂಕು ಸಿಂಗ್ 27 ರನ್ ಗಳಿಸಿದರು. ಕೃಣಾಲ್ ಪಾಂಡ್ಯ ವಿರುದ್ಧ ರಿಂಕು ಎರಡು ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದರು.