Rishab Pant: ಧೋನಿ ರೆಕಾರ್ಡ್ ಉಡೀಸ್: ಶತಕ ಸಿಡಿಸಿ ಹಲವು ದಾಖಲೆ ಬರೆದ ರಿಷಭ್ ಪಂತ್..!

| Updated By: ಝಾಹಿರ್ ಯೂಸುಫ್

Updated on: Jan 13, 2022 | 7:07 PM

India vs South Africa 3rd Test: ರಿಷಭ್ ಪಂತ್ 2018 ರಲ್ಲಿ ಇಂಗ್ಲೆಂಡ್​ ವಿರುದ್ದ ಓವಲ್​ ಮೈದಾನದಲ್ಲಿ 114, 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ಅಜೇಯ 159 ರನ್ ಬಾರಿಸಿದ್ದರು.

1 / 6
ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಭರ್ಜರಿ ಶತಕ ಸಿಡಿಸಿದ್ದಾರೆ. ಟೀಮ್ ಇಂಡಿಯಾದ 2ನೇ ಇನಿಂಗ್ಸ್​ನಲ್ಲಿ ಮೂರನೇ ದಿನದಾಟದಲ್ಲಿ ಕಣಕ್ಕಿಳಿದ ಪಂತ್ 133 ಎಸೆತಗಳಲ್ಲಿ ನೂರು ರನ್ ಪೂರೈಸಿದರು. ಈ ಭರ್ಜರಿ ಶತಕದೊಂದಿಗೆ ರಿಷಭ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 6
100 ರನ್​ ಪೂರೈಸುವುದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್​ ಎಂಬ ದಾಖಲೆಯನ್ನು ರಿಷಭ್ ಬರೆದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ದಕ್ಷಿಣ ಆಫ್ರಿಕಾದಲ್ಲಿ  ಸೆಂಚುರಿ ಸಿಡಿಸಿದ ಮೊದಲ ಕೀಪರ್ ಎಂಬ ದಾಖಲೆ ಕೂಡ ಪಂತ್ ಪಾಲಾಗಿದೆ.

3 / 6
ಇದಕ್ಕೂ ಮುನ್ನ 2011 ರಲ್ಲಿ ಸೆಂಚುರಿಯನ್ ಮೈದಾನದಲ್ಲಿ ಮಹೇಂದ್ರ ಸಿಂಗ್ ಧೋನಿ 90 ರನ್​ಗಳಿಸಿದ್ದು ಟೀಮ್ ಇಂಡಿಯಾದ ವಿಕೆಟ್ ಕೀಪರ್​ ಒಬ್ಬರ ಅತ್ಯಂತ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಶತಕ ಬಾರಿಸುವ ಮೂಲಕ ಪಂತ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.

4 / 6
 ಇನ್ನು ಏಷ್ಯಾದ ಹೊರಗೆ ಶತಕ ಬಾರಿಸಿದ ಭಾರತದ 6ನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ಕೂಡ ರಿಷಭ್ ಪಂತ್ ಬರೆದಿದ್ದಾರೆ. ಅಷ್ಟೇ ಅಲ್ಲದೆ ಏಷ್ಯಾದ ಹೊರಗೆ ಮೂರು ಸೆಂಚುರಿ ಸಿಡಿಸಿದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಕೂಡ ಪಂತ್ ಪಾಲಾಗಿದೆ.

5 / 6
ರಿಷಭ್ ಪಂತ್ 2018 ರಲ್ಲಿ ಇಂಗ್ಲೆಂಡ್​ ವಿರುದ್ದ ಓವಲ್​ ಮೈದಾನದಲ್ಲಿ 114, 2019 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ಅಜೇಯ 159 ರನ್ ಬಾರಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ದ ಕೇಪ್​ಟೌನ್​ನಲ್ಲಿ ಅಜೇಯ ಶತಕ ಬಾರಿಸುವ ಮೂಲಕ ಏಷ್ಯಾದ ಹೊರಗೆ ಮೂರು ಸೆಂಚುರಿ ಸಿಡಿಸಿದ ಟೀಮ್ ಇಂಡಿಯಾದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆದರು.

6 / 6
ರಿಷಭ್ ಪಂತ್ ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ 198 ರನ್​ ಕಲೆಹಾಕಿದೆ. ಮೊದಲ ಇನಿಂಗ್ಸ್​ನ 13 ರನ್​ಗಳ ಮುನ್ನಡೆಯೊಂದಿಗೆ ಇದೀಗ ದಕ್ಷಿಣ ಆಫ್ರಿಕಾಗೆ ಗೆಲ್ಲಲು 211 ರನ್​ಗಳ ಟಾರ್ಗೆಟ್ ನೀಡಿದೆ.