T20 World Cup 2024: ಟೀಂ ಇಂಡಿಯಾ ಉಪನಾಯಕತ್ವದಿಂದ ಪಾಂಡ್ಯಗೆ ಕೋಕ್?
T20 World Cup 2024: ಟಿ20 ವಿಶ್ವಕಪ್‌ಗೆ ನಡೆಯಲಿರುವ ತಂಡದ ಆಯ್ಕೆ ಸಭೆಯಲ್ಲಿ ಉಪನಾಯಕತ್ವದ ಬದಲಾವಣೆಯ ಬಗ್ಗೆಯೂ ಚರ್ಚಿಸಬಹುದು. ಸದ್ಯ ಈ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿಭಾಯಿಸುತ್ತಿದ್ದಾರೆ. ಆದರೆ ಸಭೆಯಲ್ಲಿ ಭಾರತ ತಂಡದ ಉಪನಾಯಕನಾಗಿ ರಿಷಬ್ ಪಂತ್ ಅವರನ್ನು ಮರು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಬಹುದು.
1 / 7
ಜೂನ್ 1 ರಿಂದ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳು ಪ್ರಕಟಗೊಳ್ಳಲಿವೆ. ಬಿಸಿಸಿಐ ಕೂಡ ಇನ್ನಷ್ಟೇ ಟೀಂ ಇಂಡಿಯಾವನ್ನು ಪ್ರಕಟಿಸಿಬೇಕಾಗಿದೆ. ಇದಕ್ಕಾಗಿ ಆಯ್ಕೆ ಮಂಡಳಿ ಕೂಡ ನಾಯಕ ರೋಹಿತ್ ಶರ್ಮಾ ಜೊತೆಗೆ ಇಷ್ಟರಲ್ಲೇ ಸಭೆ ನಡೆಸಲಿದೆ.
2 / 7
ಈ ಸಭೆಯಲ್ಲಿ ಭಾರತ ಟಿ20 ವಿಶ್ವಕಪ್ ತಂಡದ ಬಗ್ಗೆ ಚರ್ಚೆ ನಡೆಯಲ್ಲಿದ್ದು, ತಂಡವನ್ನು ಅಂತಿಮಗೊಳಿಸಲಿದೆ. ಇದಲ್ಲದೆ ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸಭೆಯಲ್ಲಿ ತಂಡದ ಉಪನಾಯಕತ್ವದ ಬದಲಾವಣೆಯ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
3 / 7
ಕ್ರಿಕ್‌ಬಜ್ ವರದಿ ಪ್ರಕಾರ, ಟಿ20 ವಿಶ್ವಕಪ್‌ಗೆ ನಡೆಯಲಿರುವ ತಂಡದ ಆಯ್ಕೆ ಸಭೆಯಲ್ಲಿ ಉಪನಾಯಕತ್ವದ ಬದಲಾವಣೆಯ ಬಗ್ಗೆಯೂ ಚರ್ಚಿಸಬಹುದು. ಸದ್ಯ ಈ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿಭಾಯಿಸುತ್ತಿದ್ದಾರೆ. ಆದರೆ ಸಭೆಯಲ್ಲಿ ಭಾರತ ತಂಡದ ಉಪನಾಯಕನಾಗಿ ರಿಷಬ್ ಪಂತ್ ಅವರನ್ನು ಮರು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಬಹುದು.
4 / 7
ರಿಷಬ್ ಪಂತ್ ಈ ಹಿಂದೆಯೂ ಸಹ ಟೀಂ ಇಂಡಿಯಾದ ಉಪನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಕಾರು ಅಪಘಾತಕ್ಕೀಡಾಗಿ ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಪಂತ್ರನ್ನು ಆ ಸ್ಥಾನದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಈ ಜವಬ್ದಾರಿ ನೀಡಲಾಯಿತು. ಅಲ್ಲದೆ ಅಪಘಾತಕ್ಕೀಡಾದ ಬಳಿಕ ಇಲ್ಲಿಯವರೆಗೆ ಪಂತ್ ಟೀಂ ಇಂಡಿಯಾ ಪರ ಆಡಿಲ್ಲ.
5 / 7
ರಿಷಬ್ ಪಂತ್ ಪ್ರಸ್ತುತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಈ ಸೀಸನ್ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಲಿದ್ದಾರೆ.
6 / 7
ಅದೇ ವೇಳೆ ನಾಯಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇದಲ್ಲದೆ ಪಂತ್, ಒಮ್ಮೆ ಭಾರತ ತಂಡದ ನಾಯಕತ್ವವನ್ನೂ ನಿರ್ವಹಿಸಿದ್ದಾರೆ. ಜೂನ್ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪಂತ್ ಭಾರತ ತಂಡದ ನಾಯಕತ್ವ ವಹಿಸಿದ್ದರು.
7 / 7
ಇತ್ತ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 197 ರನ್ ಬಾರಿಸಿದ್ದು, ಕೇವಲ 4 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೆ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 9 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ಟಿ20 ವಿಶ್ವಕಪ್‌ಗೂ ಮುನ್ನ ಉಪನಾಯಕನ ಜವಾಬ್ದಾರಿಯನ್ನು ಪಾಂಡ್ಯರಿಂದ ಕಸಿದುಕೊಳ್ಳಬಹುದು.