Rishabh Pant: ಈ ವರ್ಷ ಡೌಟ್; ರಿಷಭ್ ಪಂತ್ ರೀ ಎಂಟ್ರಿ ಯಾವಾಗ ಗೊತ್ತಾ?

|

Updated on: Jul 23, 2023 | 9:59 AM

Rishabh Pant: ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಂತ್, ಎನ್​ಸಿಎಯಲ್ಲಿ ಬ್ಯಾಟಿಂಗ್ ತರಬೇತಿಯೊಂದಿಗೆ ನೆಟ್ಸ್‌ನಲ್ಲಿ ಲಘು ವಿಕೆಟ್ ಕೀಪಿಂಗ್ ಆರಂಭಿಸಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ.

1 / 7
ಕಳೆದೆರಡು ದಿನಗಳ ಹಿಂದೆ ಇಂಜುರಿಗೊಳಗಾಗಿದ್ದ ಐವರು ಆಟಗಾರರ ಚೇತರಿಕೆಯ ಕುರಿತು ಮಾಹಿತಿ ನೀಡಿದ್ದ ಬಿಸಿಸಿಐ, ಯಾವ ಆಟಗಾರರು ಯಾವ ಸರಣಿಯಿಂದ ತಂಡಕ್ಕೆ ಮರಳಬಹುದು ಎಂಬುದರ ಸುಳಿವು ನೀಡಿತ್ತು.

2 / 7
ಈ ಐವರು ಆಟಗಾರರಲ್ಲಿ ಬುಮ್ರಾ ಹಾಗೂ ಪ್ರಸಿದ್ದ್ ಕೃಷ್ಣ ಶೀಘ್ರದಲ್ಲೇ ತಂಡಕ್ಕೆ ಮರಳುವ ಸಾದ್ಯತೆಗಳಿವೆ. ಹಾಗೆಯೇ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆರಂಭಿಸಿದ್ದು, ವಿಶ್ವಕಪ್​ ವೇಳೆಗೆ ತಂಡ ಸೇರುವ ಸೂಚನೆ ನೀಡಿದ್ದಾರೆ.

3 / 7
ಕಳೆದ ವರ್ಷ ಕಾರು ಅಪಘಾತಕ್ಕೀಡಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ವಿಶ್ವಕಪ್ ವೇಳೆಗೆ ತಂಡ ಸೇರಿಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ ಬಿಸಿಸಿಐ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪಂತ್ ಈ ವರ್ಷ ತಂಡಕ್ಕೆ ಮರಳುವುದು ಅಸಾಧ್ಯವೆಂದು ವರದಿಯಾಗಿದೆ.

4 / 7
ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಪಂತ್, ಎನ್​ಸಿಎಯಲ್ಲಿ ಬ್ಯಾಟಿಂಗ್ ತರಬೇತಿಯೊಂದಿಗೆ ನೆಟ್ಸ್‌ನಲ್ಲಿ ಲಘು ವಿಕೆಟ್ ಕೀಪಿಂಗ್ ಆರಂಭಿಸಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ.

5 / 7
ಆದರೆ ಕಳೆದ ಡಿಸೆಂಬರ್​ನಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಪಂತ್, ಏಷ್ಯಾಕಪ್ ಹಾಗೂ ವಿಶ್ವಕಪ್ ವೇಳೆಗೆ ಭಾರತ ತಂಡ ಸೇರುವುದು ಅನುಮಾನ. ಆದರೆ ಪ್ರಸ್ತುತ ಪಂತ್ ಚೇತರಿಕೆಯನ್ನು ಗಮನಿಸಿರುವ ಬಿಸಿಸಿಐ ವೈದ್ಯಕೀಯ ಮಂಡಳಿ ಮುಂದಿನ ವರ್ಷ ನಡೆಯಲ್ಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ.

6 / 7
ಮುಂದಿನ ವರ್ಷ ಜನವರಿ-ಫೆಬ್ರವರಿಯಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಪರ ಭಾರತ ಪ್ರವಾಸ ಮಾಡಲಿದೆ.

7 / 7
ಇನ್ನು ರಿಷಬ್ ಪಂತ್ ಜೊತೆಗೆ ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಸೇರಿದಂತೆ ಹಲವಾರು ಗಾಯಗೊಂಡ ಆಟಗಾರರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ರಿಹ್ಯಾಬ್​ಗೆ ಒಳಗಾಗಿದ್ದಾರೆ.