ಭಾರತದ ಏಷ್ಯಾಕಪ್ ಶಿಬಿರ ಮುಕ್ತಾಯ: ಇಂದು ಶ್ರೀಲಂಕಾಕ್ಕೆ ಟೀಮ್ ಇಂಡಿಯಾ ಪ್ರಯಾಣ
Team India is set to depart for Sri Lanka: ಏಷ್ಯಾಕಪ್ ಶಿಬಿರದಲ್ಲಿ ಭಾರತೀಯ ಆಟಗಾರರಿ ಭರ್ಜರಿ ಪ್ರ್ಯಾಕ್ಟೀಸ್ ನಡೆಸಿದ್ದಾರೆ. ಇದೀಗ ಶಿಬಿರ ಮುಕ್ತಾಯಗೊಂಡಿದ್ದು, ಇಂದು ಶ್ರೀಲಂಕಾನ್ನರ ನಾಡಿಗೆ ತೆರಳಲಿದ್ದಾರೆ. ಐರ್ಲೆಂಡ್ನಿಂದ ಬಂದು ಸ್ಯಾಮ್ಸನ್ ಹಾಗೂ ಬುಮ್ರಾ ತಂಡ ಸೇರಿಕೊಂಡಿದ್ದು, ಕೊಲೊಂಬೊಕ್ಕೆ ಪ್ಲೈಟ್ನಲ್ಲಿ ತೆರಳಲಿದ್ದಾರೆ.
1 / 8
ಭಾರತೀಯ ಕ್ರಿಕೆಟ್ ತಂಡವು ಏಷ್ಯಾಕಪ್ 2023 ಕ್ಕಾಗಿ ಬೆಂಗಳೂರಿನ ಆಲೂರಿನಲ್ಲಿ ನಡೆಸುತ್ತಿದ್ದ ಕಠಿಣ ಅಭ್ಯಾಸಕ್ಕೆ ತೆರೆಬಿದ್ದಿದೆ. ಇಂದು ಎಲ್ಲ ಆಟಗಾರರು ಶ್ರೀಲಂಕಾ ಪ್ಲೈಟ್ ಏರಲಿದ್ದಾರೆ. ಕೊಲೊಂಬೊಕ್ಕೆ ತೆರಳಿ ಒಂದು ದಿನದ ವಿಶ್ರಾಂತಿ ಬಳಿಕ ಪುನಃ ಅಲ್ಲಿ ಅಭ್ಯಾಸ ಶುರು ಮಾಡಲಿದ್ದಾರೆ.
2 / 8
ಸಿಂಹಳೀಯರ ನಾಡಿಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ವಿಶೇಷವಾದ ಡೆಕ್ಸಾ ಪರೀಕ್ಷೆಗೆ ಒಳಗಾಗಿದ್ದರು. ಆಟಗಾರರು ಇಂಜುರಿಗೆ ತುತ್ತಾಗುವುದನ್ನು ತಪ್ಪಿಸಲು ಬಿಸಿಸಿಐ ಈ ವಿಧಾನವನ್ನು ಜಾರಿಗೆ ತಂದಿದೆ. ಭವಿಷ್ಯದಲ್ಲಿ ಗಾಯಕ್ಕೆ ತುತ್ತಾಗಬಾರದು, ಫಿಟ್ ಆಗಿರಬೇಕು ಎಂಬ ಕಾರಣಕ್ಕೆ ಮುಂಜಾಗ್ರತ ಕ್ರಮವಾಗಿ ಈ ಸ್ಕ್ಯಾನಿಂಗ್ ಮಾಡಲಾಗುತ್ತದೆ.
3 / 8
ಇನ್ನು ಮಂಡಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಇನ್ನೂ ಶೇ. 100 ರಷ್ಟು ಚೇತರಿಸಿಕೊಂಡಿಲ್ಲ. ಸಂಪೂರ್ಣವಾಗಿ ಫಿಟ್ನೆಸ್‌ಗೆ ಮರಳಬೇಕಷ್ಟೆ. ಕೀಪಿಂಗ್ನಲ್ಲಿ ಕಠಿಣ ಅಭ್ಯಾಸ ಮಾಡಿದ ಹೊರತಾಗಿಯೂ, ಫುಲ್ ಫಿಟ್ನೆಸ್ ಪಡೆದುಕೊಂಡಿಲ್ಲ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯದಿಂದ ಇವರು ಹೊರಗುಳಿದಿದ್ದಾರೆ.
4 / 8
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ತಮ್ಮ ಬೆನ್ನಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೇ. 100 ರಷ್ಟು ಫಿಟ್ ಆಗಿದ್ದಾರೆ. ಇವರು ವಿಶ್ವಕಪ್ ದೃಷ್ಟಿಯಿಂದ ಕೂಡ ಏಷ್ಯಾಕಪ್ನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ ಕಣಕ್ಕಿಳಿಯಲಿದ್ದು, ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ.
5 / 8
ಏಷ್ಯಾಕಪ್ ಶಿಬಿರದಲ್ಲಿ ಭಾರತೀಯ ಆಟಗಾರರಿ ಭರ್ಜರಿ ಪ್ರ್ಯಾಕ್ಟೀಸ್ ನಡೆಸಿದ್ದಾರೆ. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿ ಆಲೂರು ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಭ್ಯಾಸ ಮಾಡಿದ್ದಾರೆ.
6 / 8
ಇನ್ನು ಜಸ್ಪ್ರಿತ್ ಬುಮ್ರಾ ಮತ್ತು ಸಂಜು ಸ್ಯಾಮ್ಸನ್ ಐರ್ಲೆಂಡ್ನಿಂದ ಸೋಮವಾರ ತವರಿಗೆ ಮರಳಿದ್ದಾರೆ. ಭಾರತದ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದ್ದರೆ, ಸ್ಯಾಮ್ಸನ್ ಸ್ಪರ್ಧೆಗೆ ಮೀಸಲು ಆಟಗಾರನಾಗಿ ಪ್ರಯಾಣಿಸುತ್ತಿದ್ದಾರೆ. ಇವರಿಬ್ಬರು ಪ್ಲೈಟ್ ಏರುವ ಮುನ್ನ ಯೋ-ಯೋ ಟೆಸ್ಟ್ನಲ್ಲಿ ಭಾಗವಹಿಸಲಿದ್ದಾರೆ.
7 / 8
ಭಾರತ ತಂಡ ಏಷ್ಯಾಕಪ್‌ನ ತಮ್ಮ ಆರಂಭಿಕ ಪಂದ್ಯದಲ್ಲಿ ಸೆಪ್ಟೆಂಬರ್ 2 ರಂದು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಬಳಿಕ ಸೆಪ್ಟೆಂಬರ್ 4 ರಂದು ಪಲ್ಲೆಕೆಲೆಯಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡ ನೇಪಾಳವನ್ನು ಎದುರಿಸಲಿದೆ.
8 / 8
ಏಷ್ಯಾ ಕಪ್ 2023ಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ , ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ. ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್