ಏಕದಿನ ವಿಶ್ವಕಪ್ನ ಮಹಾಸಮರಕ್ಕಾಗಿ ಕ್ಷಣಗಣನೆ ಶುರುವಾಗಿದೆ. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯಲಿದೆ.
ಇದಕ್ಕೂ ಮುನ್ನ ಶನಿವಾರ ಉಭಯ ತಂಡಗಳ ನಾಯಕರುಗಳು ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಐಸಿಸಿ ಟೂರ್ನಿಯ ಭಾಗವಾಗಿರುವ ಈ ಫೋಟೋಶೂಟ್ನಲ್ಲಿ ಹಲವು ರೀತಿಯಲ್ಲಿ ಪೋಸ್ ನೀಡಿರುವುದು ವಿಶೇಷ.
ಅಹಮದಾಬಾದ್ನ ಅದಲಾಜ್ ಸ್ಟೆಪ್‌ವೆಲ್ ಸ್ಮಾರಕದಲ್ಲಿ ನಡೆಸಲಾದ ಈ ಫೋಟೋಶೂಟ್ ಚಿತ್ರಗಳನ್ನು ಇದೀಗ ಐಸಿಸಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ವಿಭಿನ್ನವಾಗಿರುವ ಮೂಡಿ ಬಂದಿರುವ ಈ ಫೋಟೋಗಳಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಫೋಟೋಶೂಟ್ ನಡೆಸಲಾದ ಅದಲಾಜ್ ಸ್ಟೆಪ್‌ವೆಲ್ ಸ್ಮಾರಕವನ್ನು 1498 ರಲ್ಲಿ ನಿರ್ಮಿಸಿರುವುದು. ಇದು ಗುಜರಾತ್‌ನ ಅತ್ಯುತ್ತಮ ವಾಸ್ತುಶಿಲ್ಪದ ಸ್ಮಾರಕಗಳಲ್ಲಿ ಒಂದಾಗಿದೆ. ಈ ಸ್ಮಾರಕವು 5 ಅಂತಸ್ತಿನ ರಚನೆ ಎಂಬುದು ವಿಶೇಷ. ಅಹಮದಾಬಾದ್ ನಗರದ ಹೊರವಲಯದಲ್ಲಿರುವ ಅದಲಾಜ್ ಸ್ಟೆಪ್‌ವೆಲ್ ಗುಜರಾತ್‌ನ ಶ್ರೀಮಂತ ಸಂಸ್ಕೃತಿಯ ಪ್ರತೀಕ ಮತ್ತು ಪ್ರವಾಸಿಗರ ಪ್ರಮುಖ ತಾಣವಾಗಿದೆ.
ನಾಳೆ ಫೈನಲ್ ಫೈಟ್: ಏಕದಿನ ವಿಶ್ವಕಪ್ನ ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಫೈಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.