IND vs NED, ICC World Cup: ಒಂಬತ್ತೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಹೇಗೆ?, ರಹಸ್ಯ ಬಿಚ್ಚಿಟ್ಟ ರೋಹಿತ್ ಶರ್ಮಾ: ಏನು ಹೇಳಿದ್ರು ನೋಡಿ
Rohit Sharma Post Match Presentation, India vs Netherlands: ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಾವು ಟೂರ್ನಿಯನ್ನು ಪ್ರಾರಂಭಿಸಿದಾಗಿನಿಂದ, ಒಂದು ಸಮಯದಲ್ಲಿ ಒಂದು ಆಟದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆ ಆಟವನ್ನು ಚೆನ್ನಾಗಿ ಆಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
1 / 8
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಅಜೇಯ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ 160 ರನ್ಗಳ ಅಮೋಘ ಜಯ ಕಂಡು ಈ ಬಾರಿಯ ಟೂರ್ನಿಯಲ್ಲಿ ಆಡಿದ ಒಂಬತ್ತು ಪಂದ್ಯಗಳ ಪೈಕಿ ಒಂಬತ್ತರಲ್ಲೂ ಗೆಲುವು ಸಾಧಿಸಿದೆ.
2 / 8
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್-ಕೆಎಲ್ ರಾಹುಲ್ ಶತಕ ಹಾಗೂ ಗಿಲ್, ರೋಹಿತ್, ವಿರಾಟ್ ಅರ್ಧಶತಕದ ನೆರವಿನಿಂದ 410 ರನ್ ಕಲೆಹಾಕಿತು. ಡಚ್ಚರಿ 250 ರನ್ಗಳಿಗೆ ಆಲೌಟ್ ಆದರು. ಭಾರತ ಪರ ಕೊಹ್ಲಿ, ರೋಹಿತ್, ಗಿಲ್, ಸೂರ್ಯಕುಮಾರ್ ಕೂಡ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
3 / 8
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಾವು ಟೂರ್ನಿಯನ್ನು ಪ್ರಾರಂಭಿಸಿದಾಗಿನಿಂದ, ಒಂದು ಸಮಯದಲ್ಲಿ ಒಂದು ಆಟದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆ ಆಟವನ್ನು ಚೆನ್ನಾಗಿ ಆಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
4 / 8
ಇದು ಸುದೀರ್ಘವಾದ ಪಂದ್ಯಾವಳಿಯಾಗಿರುವುದರಿಂದ ನಾವು ಮುಂದಿನ 3, 4 ಪಂದ್ಯಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಅದರ ಬದಲು ಈಗ ನಮ್ಮ ಪಂದ್ಯ ಯಾವುದು ಅದರ ಮೇಲೆ ಗಮನ ಕೇಂದ್ರೀಕರಿಸಿ ಅದನ್ನು ಚೆನ್ನಾಗಿ ಆಡುವುದು ನಮಗೆ ಮುಖ್ಯ. ನಮ್ಮ ಎಲ್ಲ ಆಟಗಾರರು ಮಾಡಿದ್ದು ಅದನ್ನೇ ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
5 / 8
ನೀವು ವಿಭಿನ್ನ ಸ್ಥಳಗಳಲ್ಲಿ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಕಾರಣ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಆಡಬೇಕು, ಅದನ್ನೇ ನಾವು ಮಾಡಿದ್ದೇವೆ. ಈ ಒಂಬತ್ತು ಪಂದ್ಯಗಳಲ್ಲಿ ನಾವು ಆಡಿದ್ದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಬೇರೆ ಬೇರೆ ಆಟಗಾರರು ವಿವಿಧ ಸಮಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಂಡು ತಂಡಕ್ಕಾಗಿ ಕೆಲಸವನ್ನು ಮಾಡಿದ್ದಾರೆ - ರೋಹಿತ್ ಶರ್ಮಾ.
6 / 8
ನಾವು ಈ ಪಂದ್ಯಾವಳಿಯಲ್ಲಿ ಸತತವಾಗಿ ನಾಲ್ಕು ಪಂದ್ಯಗಳನ್ನು ಚೇಸ್ ಮಾಡಿದ್ದೇವೆ. ನಂತರ ಮೊದಲು ಬ್ಯಾಟ್ ಮಾಡಬೇಕಾಯಿತು. ಬೋರ್ಡ್‌ನಲ್ಲಿ ರನ್‌ಗಳನ್ನು ಹಾಕಬೇಕಾಗಿತ್ತು. ಆಗ ಸೀಮರ್‌ಗಳು ಸ್ಪಿನ್ನರ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಉತ್ಸಾಹಭರಿತವಾಗಿರಿಸಲು ಫಲಿತಾಂಶಗಳು ಮುಖ್ಯವಾಗಿದೆ ಎಂದರು ರೋಹಿತ್ ಶರ್ಮಾ.
7 / 8
ನಾವು ಮೈದಾನದಲ್ಲಿ ಬಹಳಷ್ಟು ಕಾಮ್ ಆಗಿ, ಉತ್ಸಾಹದಿಂದ ಆಟವನ್ನು ಆಡುತ್ತೇವೆ. ಅದು ನಮ್ಮ ಪ್ರದರ್ಶನಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ನಾವು ಈ ರೀತಿಯ ವಿಷಯಗಳನ್ನು ಪ್ರಯತ್ನಿಸಿದಾಗ, ವಾತಾವರಣವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇರಿಸಬಹುದು. ಹುಡುಗರು ಯಾವುದೇ ಹೊರೆಯಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬದು ರೋಹಿತ್ ಮಾತು.
8 / 8
ಬೌಲಿಂಗ್ ಆಯ್ಕೆ ಬಗ್ಗೆ ಮಾತನಾಡಿದ ರೋಹಿತ್, ನೀವು ಐದು ಬೌಲರ್‌ಗಳನ್ನು ಹೊಂದಿರುವಾಗ, ತಂಡದೊಳಗೆ ಆ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಇಂದು ನಾವು ಒಂಬತ್ತು (ಬೌಲಿಂಗ್) ಆಯ್ಕೆಗಳನ್ನು ಹೊಂದಿದ್ದೇವೆ. ಈ ಪಂದ್ಯದಲ್ಲಿ ನಾವು ಕೆಲವು ಹೊಸ ವಿಚಾರಗಳನ್ನು ಪ್ರಯತ್ನಿಸಿದೆವು. ಬೌಲಿಂಗ್ ಘಟಕದಲ್ಲಿ, ನಾವು ವಿಭಿನ್ನವಾದದ್ದನ್ನು ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Published On - 7:40 am, Mon, 13 November 23